ಸಾಗರ: “ಆನಂದಪುರದ ಸುಬ್ಬಣ್ಣ ನಾಯಕ್ ಅವರು ಮಹಿಳಾ ಸಬಲೀಕರಣಕ್ಕಾಗಿ 45 ವರ್ಷಗಳ ಹಿಂದೆ ಗ್ರಾಮೋದ್ಯೋಗದ (gramodyoga) ಮೂಲಕ ಮುನ್ನುಡಿ ಬರೆದಿದ್ದರು” ಎಂದು ಶಾಸಕ ಎಚ್. ಹರತಾಳು ಹಾಲಪ್ಪ ತಿಳಿಸಿದರು.
ಕವಿಕಾವ್ಯ ಟ್ರಸ್ಟ್ ಮತ್ತು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ವತಿಯಿಂದ ತಾಲೂಕಿನ ಭೀಮನಕೋಣೆಯ ಹೊನ್ನೇಸರ ಶ್ರಮಜೀವಿ ಆಶ್ರಮದಲ್ಲಿ ಭಾನುವಾರ (ಮಾ. 5) ಹಮ್ಮಿಕೊಳ್ಳಲಾಗಿದ್ದ ಚರಕ ಉತ್ಸವ ಕಾರ್ಯಕ್ರಮದಲ್ಲಿ ಅವರು ಕಾಯಕ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದರು.
ಇದನ್ನೂ ಓದಿ: Axis My India Survey: ದೇಶದಲ್ಲಿ ಮೋದಿಯೇ ಅತ್ಯಂತ ಪ್ರಭಾವಶಾಲಿ, ಸಮೀಕ್ಷೆಯಲ್ಲಿ ಶೇ.72ರಷ್ಟು ಜನ ಪ್ರಧಾನಿ ಪರ
“ಸುಬ್ಬಣ್ಣ ನಾಯಕರು ರೈಸ್‍ಮಿಲ್ ಪ್ರಾರಂಭಿಸಿ ಗ್ರಾಮೀಣ ಹೆಣ್ಣುಮಕ್ಕಳಿಗೆ ಉದ್ಯೋಗ ನೀಡಿದ್ದಲ್ಲದೆ, ಅವರಿಗೆ ಬ್ಯಾಂಕ್ ಖಾತೆ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡಿದ್ದಾರೆ. ಇದು ಮಲೆನಾಡು ಭಾಗದಲ್ಲಿ ಗ್ರಾಮೀಣ ಮಹಿಳೆಯರಲ್ಲಿ ಹೊಸ ಚೈತನ್ಯ ತರಲು ಸಹಕಾರಿಯಾಗಿತ್ತು. ಮಹಿಳೆಯರಿಗೆ ಡ್ರೈವಿಂಗ್ ಸಹ ಕಲಿಸಲು ಗ್ರಾಮೋದ್ಯೋಗ ಸಹಕಾರಿಯಾಗಿತ್ತು” ಎಂದು ತಿಳಿಸಿದರು.
ಇದನ್ನೂ ಓದಿ: V. Somanna: ಅಶೋಕ್ ಜತೆ ಮುನಿಸಿಕೊಂಡು ಅರ್ಧಕ್ಕೇ ಬಿಜೆಪಿ ರಥ ಇಳಿದ ವಿ. ಸೋಮಣ್ಣ: ಪಕ್ಷ ಬಿಡೋದು ಪಕ್ಕಾ?
“ಭೀಮನಕೋಣೆ ಚರಕ ಸಂಸ್ಥೆಯು ಕೆಲವು ವರ್ಷಗಳಿಂದ ಅಂತಹದ್ದೇ ಒಂದು ಕ್ರಾಂತಿಕಾರಕ ಕೆಲಸವನ್ನು ಮಾಡುತ್ತಿದೆ. 800ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರನ್ನು ಕೈಮಗ್ಗ ಘಟಕದಲ್ಲಿ ತೊಡಗಿಸಿಕೊಂಡು ಅವರಲ್ಲಿ ಆರ್ಥಿಕ ಚೈತನ್ಯ ತುಂಬುವ ಕೆಲಸವು ರಂಗಕರ್ಮಿ ಪ್ರಸನ್ನ ಅವರ ಸಾರಥ್ಯದಲ್ಲಿ ನಡೆಯುತ್ತಿರುವುದು ಗಮನಾರ್ಹ ಸಂಗತಿ. ಚರಕದಂತಹ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಕೆಲಸ ನಡೆಯಬೇಕು” ಎಂದು ಹೇಳಿದರು.
ಚರಕ ಸಂಸ್ಥೆಯ ಅಧ್ಯಕ್ಷೆ ಗೌರಮ್ಮ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗಾಂಧಿವಾದಿ ಕಾರ್ಯಕರ್ತೆ ಕೆ. ಹ್ಯಾರಿಸ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ವಿಭಾಗದಲ್ಲಿ ಉತ್ತಮ ಸಾಧನೆ ತೋರಿದ 20 ಜನರಿಗೆ ಕಾಯಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ನಂತರ ಕೃಷ್ಣಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು.
ಇದನ್ನೂ ಓದಿ: IND VS AUS: ಹೇಗಿರಲಿದೆ ಅಂತಿಮ ಟೆಸ್ಟ್ ಪಂದ್ಯದ ಪಿಚ್; ಕ್ಯುರೇಟರ್ ನೀಡಿದ ಉತ್ತರ ಏನು?