ಸಾಗರ: “ಭೀಮನಕೋಣೆ ಕವಿಕಾವ್ಯ ಟ್ರಸ್ಟ್ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ವತಿಯಿಂದ ಮಾ.4 ಮತ್ತು 5ರಂದು ಹೊನ್ನೆಸರದ ಶ್ರಮಜೀವಿ ಆಶ್ರಮದಲ್ಲಿ ಚರಕ ಉತ್ಸವ 2023 (Charaka Utsav 2023) ಹಮ್ಮಿಕೊಳ್ಳಲಾಗಿದೆ” ಎಂದು ಚರಕ ಸಂಸ್ಥೆಯ ಮಾರಾಟ ವ್ಯವಸ್ಥಾಪಕಿ ಪದ್ಮಶ್ರೀ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗುರುವಾರ (ಮಾ.2) ಮಾತನಾಡಿದ ಅವರು, “ಮಾ. 4ರಂದು ಸಂಜೆ 6.30ಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ. ರಾಜನಂದಿನಿ ಕಾಗೋಡು ಅವರು ಚರಕ ಉತ್ಸವ ಉದ್ಘಾಟಿಸಲಿದ್ದು, ಚರಕ ಸಂಸ್ಥೆಯ ಅಧ್ಯಕ್ಷೆ ಗೌರಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ” ಎಂದರು.
“ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಎಚ್., ಹೆಗ್ಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ಮಂಜುನಾಥ್ ಉಪಸ್ಥಿತರಿರುವರು. ಸಂಜೆ 7.30ಕ್ಕೆ ಕುವೆಂಪು ಸಣ್ಣ ಕಥೆ ಆಧಾರಿತ `ಧನ್ವಂತರಿ ಚಿಕಿತ್ಸೆʼ ನಾಟಕವನ್ನು ಚರಕ ಬಳಗವು ಪ್ರದರ್ಶನ ಮಾಡಲಿದ್ದು, ಬಿ.ಚಂದ್ರೇಗೌಡ ರಂಗರೂಪಕ್ಕೆ ತಂದ ನಾಟಕವನ್ನು ಎಂ.ವಿ.ಪ್ರತಿಭಾ ನಿರ್ದೇಶಿಸಿದ್ದಾರೆ” ಎಂದು ಹೇಳಿದರು.
“ಮಾ. 5ರಂದು ಬೆಳಗ್ಗೆ 10ಕ್ಕೆ ಪ್ರಸನ್ನ ರಚಿಸಿರುವ ಗ್ರಾಮೀಣ ಉದ್ದಿಮೆಗಳಲ್ಲಿ ಗುಣಮಟ್ಟ ನಿರ್ವಹಣೆ ಹೇಗೆ ಕೃತಿ ಬಿಡುಗಡೆ ಮತ್ತು ವಿಚಾರ ಮಂಥನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೃಷ್ಣ ಪ್ರಸಾದ್ ಮೈಸೂರು, ಅರುಣ ಎ., ಉಮೇಶ್ ಬಂದಗದ್ದೆ, ಗಣೇಶ್ ಕಾಕಾಲ್ ಸೇರಿದಂತೆ ಅನೇಕ ತಜ್ಞರು, ನೇಕಾರರು, ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ” ಎಂದು ತಿಳಿಸಿದರು.
ಇದನ್ನೂ ಓದಿ: Nandini Milk: ನಂದಿನಿ ಹಾಲು ಪೂರೈಕೆಯಲ್ಲಿ ವ್ಯತ್ಯಯ; ಮಿಲ್ಕ್ ಯೂನಿಯನ್ ಲಿಮಿಟೆಡ್‌ನಲ್ಲಿ ಟೆಕ್ನಿಕಲ್ ಸಮಸ್ಯೆ
“ಮಾ.5 ರಂದು ಸಂಜೆ 6ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಸಕ ಎಚ್. ಹರತಾಳು ಹಾಲಪ್ಪ ಅವರು ಕಾಯಕ ಪ್ರಶಸ್ತಿಯನ್ನು ವಿತರಣೆ ಮಾಡಲಿದ್ದು, ಬಿ.ವೈ.ಅರುಣಾದೇವಿ, ಪಾರ್ವತಿ ಇನ್ನಿತರರು ಭಾಗವಹಿಸುವರು. ಈ ಸಾಲಿನ ಕಾಯಕ ಪ್ರಶಸ್ತಿಯನ್ನು ಸಾವಿತ್ರಮ್ಮ ಬಸಪ್ಪ ರಾಜನಾಳ (ನೇಯ್ಗೆ), ಶ್ರೀಕಾಂತ್ ಈಶಪ್ಪ ಗಜೇಂದ್ರಗಢ, ಸಂತೋಷ್ಮಾ, ಶಿಲ್ಪಾ ಹಾನಗಲ್, ಅಮಿತಾ ಆವಿನಹಳ್ಳಿ (ಹೊಲಿಗೆ), ಉಮೇಶ್ ಎ. (ಬಣ್ಣಗಾರಿಕೆ), ಪವಿತ್ರಾ ಕೆ. (ಲೆಕ್ಕಪತ್ರ), ಅಶ್ವಿನಿ ಎಂ.ಬಿ. (ದಾಸ್ತಾನು), ಕಾರ್ತಿಕ್ ವೈ.ಎಚ್. ಶಿವಮೊಗ್ಗ (ದೇಸಿ ಮಾರಾಟ), ಗುಂಪು ಕಾಯಕ ಪ್ರಶಸ್ತಿಯನ್ನು ಪ್ರಿಂಟಿಂಗ್ ವಿಭಾಗದಲ್ಲಿ ಗೌರಮ್ಮ, ಶಶಿಕಲಾ ಸೇರಿದಂತೆ 11 ಜನರಿಗೆ ನೀಡಲಾಗುತ್ತಿದೆ. ನಂತರ ಗಾನ ಸಾರಥಿ ಜನ್ಸಾಲೆ ಸಾರಥ್ಯದಲ್ಲಿ ಕೃಷ್ಣಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಲಿದೆ” ಎಂದು ಹೇಳಿದರು. ಗೋಷ್ಠಿಯಲ್ಲಿ ಮಹಾಲಕ್ಷ್ಮೀ, ರಮೇಶ್, ಇಂದುಕುಮಾರ್ ಹಾಜರಿದ್ದರು.
ಇದನ್ನೂ ಓದಿ: Lokayukta Raid : ಕಾಂಗ್ರೆಸ್ ಸರ್ಕಾರ ಇದ್ದಿದ್ರೆ ಈ ತರ ರೇಡ್ ಆಗ್ತಾನೇ ಇರ್ಲಿಲ್ಲ ಎಂದ ಬಿಜೆಪಿ ನಾಯಕ ಸಿ.ಟಿ. ರವಿ