Site icon Vistara News

Rani Chennamma University : ದಿ. ಸುರೇಶ್ ಅಂಗಡಿ, ಮಲ್ಲೇಪುರಂಗೆ ರಾಣಿ ಚೆನ್ನಮ್ಮ ವಿವಿ ಗೌರವ ಡಾಕ್ಟರೇಟ್

Rani chennamma VV Convocation

#image_title

ಬೆಳಗಾವಿ: “ಕಲಿತ ವಿದ್ಯೆಯು ಬದುಕಿನಲ್ಲಿ ಶಾಶ್ವತವಾಗಿರುತ್ತದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಅಗತ್ಯ ಕೌಶಲವನ್ನು ಗಳಿಸಬೇಕು. ಯಾವುದೇ ಕ್ಷೇತ್ರವಿರಲಿ ಕೌಶಲದಿಂದ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ. ಆದ್ದರಿಂದ ಕೌಶಲವನ್ನು ಹೆಚ್ಚಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸಬೇಕು” ಎಂದು ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅವರು ಕರೆ ನೀಡಿದರು. ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಸೋಮವಾರ ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ (Rani Chennamma University) 11 ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಘಟಿಕೋತ್ಸವದಲ್ಲಿ ಪ್ರೊ.ಮಲ್ಲೇಪುರಂ ವೆಂಕಟೇಶ್ ಹಾಗೂ ದಿ.ಸುರೇಶ್ ಅಂಗಡಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರು ಹಾಗೂ ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರಿಗೆ (ಮರಣೋತ್ತರ) ʻಡಾಕ್ಟರ್ ಆಫ್ ಲೆಟರ್ಸ್ʼ ಗೌರವ ಡಾಕ್ಟರೇಟ್ ಪದವಿ ನೀಡಲಾಯಿತು. ಸಂಸದರಾಗಿರುವ ಮಂಗಳ ಸುರೇಶ್‌ ಅಂಗಡಿ ಅವರು ಗೌರವವನ್ನು ಸ್ವೀಕರಿಸಿದರು.

ಘಟಿಕೋತ್ಸವ ಭಾಷಣ ಮಾಡಿದ ವಿಶ್ರಾಂತ ಕುಲಪತಿ ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಮಾಜಿ ಉಪಾಧ್ಯಕ್ಷರಾದ ಡಾ.ಬಿ.ತಿಮ್ಮೇಗೌಡ ಅವರು, ಆಯಾ ಕಾಲಕ್ಕೆ ಎದುರಾಗುವ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವುದರ ಜತೆಗೆ ಬದುಕುವ ಕಲೆಯನ್ನು ಕಲಿಸುವುದೇ ಶಿಕ್ಷಣದ ಗುರಿಯಾಗಿದೆ ಎಂದು ಹೇಳಿದರು.

ʻʻಯಶಸ್ಸಿಗೆ‌ ಯಾವುದೇ ಶಾರ್ಟ್ ಕಟ್ ದಾರಿಗಳಿಲ್ಲ; ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸುವುದು ಸಾಧ್ಯ. ಬರೀ ತಾವು ಕಲಿತ ವಿಷಯದ ಜ್ಞಾನವಿದ್ದರೆ ಸಾಲದು, ಸಂದರ್ಭಕ್ಕೆ ಅನುಗುಣವಾಗಿ ಅದನ್ನು ಬಳಕೆ ಮಾಡುವುದು ಗೊತ್ತಿರಬೇಕು. ಅಂದಾಗ ಮಾತ್ರ ಶಿಕ್ಷಣದ ಉದ್ದೇಶ ಈಡೇರುತ್ತದೆʼʼ ಎಂದು ತಿಮ್ಮೇಗೌಡ ಅವರು ಹೇಳಿದರು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ರಾಮಚಂದ್ರ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.

27 ಮಂದಿಗೆ ಪಿಎಚ್‌ಡಿ, 2611 ಮಂದಿಗೆ ಸ್ನಾತಕೋತ್ತರ ಪದವಿ

ಪ್ರಸಕ್ತ ವರ್ಷದಲ್ಲಿ 27 ಪಿಎಚ್.ಡಿ; 2611 ಸ್ನಾತಕೋತ್ತರ ಮತ್ತು 44,498 ಸ್ನಾತಕ ಪದವಿಗಳನ್ನು ನೀಡಲಾಯಿತು. ಇದರೊಂದಿಗೆ 11 ಬಂಗಾರದ ಪದಕಗಳು ಮತ್ತು 149 ರ‍್ಯಾಂಕ್‌ಗಳನ್ನು ಪ್ರದಾನ ಮಾಡಲಾಯಿತು

ಸ್ನಾತ್ತಕೋತ್ತರ ವಿದ್ಯಾರ್ಥಿಗಳಾದ ಬಾಗಲಕೋಟೆ ಬಸವೇಶ್ವರ ಕಲಾ ಕಾಲೇಜಿನ ಕಲಾ ವಿಭಾಗದ ವಿಧ್ಯಾರ್ಥಿನಿ ಶಶಿಕಲಾ ಅವರಿಗೆ ನಿಗರಿ 3 ಚಿನ್ನದ ಪದಕ ದೊರಕಿದೆ.

ಅದೇ ರೀತಿಯಲ್ಲಿ ಬೆಳಗಾವಿಯ ಕೆ.ಎಲ್.ಎಸ್ ಗೋಗಟೆ ಕಾಲೇಜಿನ ವಾಣಿಜ್ಯ ವಿಭಾಗದ ವಿಧ್ಯಾರ್ಥಿನಿ ಶ್ವೇತಾ ಪಾಟೀಲ್, ಜಮಖಂಡಿ ತುಂಗಲ್ ಬೇಸಿಕ್ ಎಂಡ್‌ ಅಪ್ಲಿಕೇಶನ್ ಕಾಲೇಜಿನ ಬಿಎಸ್.ಸಿ ವಿಭಾಗದ ಶ್ರೀದೇವಿ ಅರಕೇರಿ, ಬೆಳಗಾವಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಲಕ್ಷ್ಮಿ ಮಗದುಮ, ಬಾಗಲಕೋಟೆ ಬಿ.ವಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್‌ ಕಾಲೇಜಿನ ಎಂಬಿಎ ವಿಭಾಗದ ಗುರಮ್ಮಾ ಬಳೆಗಾರ, ಜಮಖಂಡಿ ಬ್ಲೆಡ್ಸ ವಾಣಿಜ್ಯ, ಕಲಾ ಆ್ಯಂಡ್ ಸೈನ್ಸ್ ಕಾಲೇಜಿನ ಪ್ರಿಯಾಂಕ ಮಗದುಮ, ರಾಮದುರ್ಗದ ಸಿ.ಎಸ್.ಬಿ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಸ್ಕಾನ್ ಮುಲ್ಲಾ, ಹಾರೂಗೇರಿ ಎಸ್.ಪಿ.ಎಂ ಕಾಲೇಜಿನ ಕಲಾ ವಿಭಾಗದ ಸವಿತಾ ಕೊಳ್ಳೆನ್ನವರ, ಶ್ರೀ ಸಿದ್ದೇಶ್ವರ ಕಲಾ, ವಾಣಿಜ್ಯ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಕ್ರಾಂತಿ ಪೂಜೇರಿ ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಮಾಸ್ಟರ್ ಆಫ್ ಕಾಮರ್ಸ್ ವಿಭಾಗದ ಪೂಜಾ ಪರಸನ್ನವರ ತಲಾ ಒಂದು ಚಿನ್ನದ ಪದಕ ಪಡೆದುಕೊಂಡರು.

ಇದನ್ನೂ ಓದಿ ರಾಜ ಮಾರ್ಗ ಅಂಕಣ : ಜ. ಕೆ.ಎಸ್‌ ಹೆಗ್ಡೆ; ಇವರು ಸುಪ್ರೀಂ ಜಡ್ಜ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಯ ಬೆಸ್ಟ್‌ ಸ್ಪೀಕರ್‌ ಆಗಿದ್ದರು!

Exit mobile version