Site icon Vistara News

Chikkaballapura BMTC: ಬೆಂಗಳೂರಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ವೋಲ್ವೋ ಬಸ್‌ ಸಂಚಾರ ಶುರು; ಟೈಮಿಂಗ್‌ ಏನು?

Bmtc bus

ಬೆಂಗಳೂರು: ಕೆಂಪೇಗೌಡ ಬಸ್‌ ನಿಲ್ದಾಣದಿಂದ ಚಿಕ್ಕಬಳ್ಳಾಪುರಕ್ಕೆ ಬಿಎಂಟಿಸಿ ಎಸಿ ಬಸ್‌ಗಳ ಓಡಾಟ (Chikkaballapura BMTC) ಮಂಗಳವಾರದಿಂದ (ಮಾ.21) ಶುರುವಾಗಿದೆ. ಮೆಜೆಸ್ಟಿಕ್‌ ಟು ಚಿಕ್ಕಬಳ್ಳಾಪುರಕ್ಕೆ ಟಿಕೆಟ್‌ ದರ 80 ರೂಪಾಯಿ ನಿಗದಿ ಮಾಡಲಾಗಿದೆ. ಮೆಜೆಸ್ಟಿಕ್‌ನಿಂದ ಹೊರಡುವ ಎಸಿ ವೋಲ್ವೋ ಬಸ್‌ಗಳು ಹೆಬ್ಬಾಳ, ಯಲಹಂಕ, ರಾಣಿಕ್ರಾಸ್/ದೇವನಹಳ್ಳಿ ಮಾರ್ಗವಾಗಿ ಚಿಕ್ಕಬಳ್ಳಾಪುರ ಬಸ್‌ ನಿಲ್ದಾಣಕ್ಕೆ ತಲುಪಲಿದೆ.

ನೂತನವಾಗಿ ಹವಾನಿಯಂತ್ರಿತ ಸಾರಿಗೆಗಳನ್ನು ಪರಿಚಯಿಸಿ ಪ್ರಾಯೋಗಿಕವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಮೂಲಕ ಸಾರ್ವಜನಿಕರ ಬಹುದಿನದ ಬೇಡಿಕೆಯನ್ನು ಬಿಎಂಟಿಸಿ ಸಂಸ್ಥೆ ಈಡೇರಿಸಿದೆ. ಮೊದಲ ಎಸಿ ವೋಲ್ವೋ ಬಸ್‌ ಬೆಳಗ್ಗೆ 8.10ಕ್ಕೆ ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೊರಟಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಚಿಕ್ಕಬಳ್ಳಾಪುರ ಬಸ್ ನಿಲ್ದಾಣಕ್ಕೆ ಮಾರ್ಗ ಸಂಖ್ಯೆ ವಿ-298MN ಆಗಿದೆ.

ವೋಲ್ವೋ ಬಸ್‌ ಓಡಾಟದ ವೇಳಾಪಟ್ಟಿ ಹೀಗಿದೆ

ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಿಂದ ಮೊದಲ ಬಸ್‌ ಬೆಳಗ್ಗೆ 8.10ಕ್ಕೆ ಹೊರಡಲಿದೆ. ಆ ಬಳಿಕ ಬೆಳಗ್ಗೆ 8.20 ಮತ್ತು ಮಧ್ಯಾಹ್ನ 12.35, 1.05 ಹಾಗೂ ಸಂಜೆ 7.15 ಮತ್ತು ಕೊನೇ ಬಸ್‌ 7.35ಕ್ಕೆ ಹೊರಡಲಿದೆ.

ಇದನ್ನೂ ಓದಿ: Tipu Sultan: ಉರಿಗೌಡ-ನಂಜೇಗೌಡ ಕಾಲ್ಪನಿಕ ಅಲ್ಲ; ಸ್ವಾಮೀಜಿ ಹೇಳಿದ್ದು ಸಿನಿಮಾಗೆ ಸೀಮಿತ ಎಂದ ಸಚಿವ ಆರ್‌. ಅಶೋಕ್‌

ಇನ್ನು ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗ್ಗೆ 10:25, 11:00 ಹಾಗೂ ಸಂಜೆ 5:30, 5:45, ರಾತ್ರಿ 9:15ಕ್ಕೆ ಕೊನೇ ಬಸ್‌ ರಾತ್ರಿ 9:35ರ ವೇಳೆಗೆ ಚಿಕ್ಕಬಳ್ಳಾಪುರಕ್ಕೆ ಹೋಗಲಿದೆ.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version