Site icon Vistara News

Pradeep Eashwar: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ಗೆ ಆಘಾತ, ಅನಾಥನನ್ನು ಬೆಳೆಸಿದ್ದ ಸಾಕು ತಾಯಿ ನಿಧನ

#image_title

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ (Chikkaballapur Election) ಕಾಂಗ್ರೆಸ್‌ ಶಾಸಕ ಪ್ರದೀಪ್ ಈಶ್ವರ್ (Pradeep Eashwar) ಅವರ ಸಾಕು ತಾಯಿ ರತ್ನಮ್ಮ (72) ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಪರೇಸಂದ್ರ ಗ್ರಾಮಕ್ಕೆ ಭೇಟಿ ನೀಡಿದ ಪ್ರದೀಪ್‌ ಪಾರ್ಥೀವ ಶರೀರದ ದರ್ಶನ ಪಡೆದರು. ಇದೇ ವೇಳೆ ಪ್ರದೀಪ್ ಸಾಕು ತಾಯಿಯ ಪಾದಗಳನ್ನು ಗಟ್ಟಿಯಾಗಿ ಹಿಡಿದು ನಮಸ್ಕರಿಸಿದರು.

ಪ್ರದೀಪ್ ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದರು. ಆಗ ಪ್ರದೀಪ್ ಹಾಗೂ ಆತನ ತಮ್ಮ ಚೇತನ್‌ನನ್ನು ಸಂಬಂಧಿ ರತ್ನಮ್ಮನವರೇ ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡಿದ್ದರು. ಕಡು ಬಡತನದಲ್ಲಿ ಬೆಳೆದಿದ್ದ ಪ್ರದೀಪ್ ಸದ್ಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕನಾದ ಸಂತೋಷದಲ್ಲಿ ಇದ್ದರು.

ಇದನ್ನೂ ಓದಿ: DK Shivakumar Profile : ರಾಜ್ಯ ಕಾಂಗ್ರೆಸ್‌ಗೆ ಬಲ ತುಂಬಿದ ಬಲಿಷ್ಠ ನಾಯಕ ಡಿ ಕೆ ಶಿವಕುಮಾರ್; ಇಲ್ಲಿದೆ ಅವರ ಜೀವನಚಿತ್ರ

ಮಗ ಗೆದ್ದು ಬಿಟ್ಟ ಎಂಬ ಖುಷಿಯಲ್ಲಿ ರತ್ನಮ್ಮನವರು ಇದ್ದರು. ಇಂದು (ಮೇ 20) ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಎಕ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡುವ ಸಂಭ್ರಮದಲ್ಲಿ ಪ್ರದೀಪ್ ಈಶ್ವರ್ ಇದ್ದರು. ಆದರೆ ಸಾಕು ತಾಯಿ ನಿಧನದ ಸುದ್ದಿಯು ಪ್ರದೀಪ್ ಅವರನ್ನು ದುಃಖತಪ್ತರಾಗುವಂತೆ ಮಾಡಿದೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version