Site icon Vistara News

Chikkaballapura festival | ಚಿಕ್ಕಬಳ್ಳಾಪುರ ಉತ್ಸವಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಇಂದು ಚಾಲನೆ

bdget-session-budget session will start from february tenth

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಉತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು (Chikkaballapura festival) ಇಂದು ಉದ್ಘಾಟಿಸಲಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ರೂಪಗೊಂಡು ಒಂದೂವರೆ ದಶಕ ಪೂರ್ಣವಾಗಿರುವ ಹಿನ್ನೆಲೆಯಲ್ಲಿ, ಇಂದಿನಿಂದ ಏಳುದಿನಗಳ ಕಾಲ ಉತ್ಸವ ನಡೆಯಲಿದೆ. ಇಂದು ಮದ್ಯಾಹ್ನ ಎರಡು ಗಂಟೆಗೆ ಚಾಲನೆ ಸಿಗಲಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆ, ಸಚಿವರಾದ ಡಾ. ಕೆ. ಸುಧಾಕರ್‌, ಸುನಿಲ್ ಕುಮಾರ್, ಬೈರತಿ ಬಸವರಾಜ್, ನಟ ಕಿಚ್ಚ ಸುದೀಪ್‌ ಭಾಗವಹಿಸುವ ನಿರೀಕ್ಷೆ ಇದೆ. ಬೃಹತ್ ಮೆರವಣಿಗೆಯೊಂದಿಗೆ ಉತ್ಸವಕ್ಕೆ ಚಾಲನೆ ಸಿಗಲಿದೆ. ಮೆರವಣಿಗೆಯಲ್ಲಿ ಸ್ಥಬ್ದಚಿತ್ರಗಳು, ಜನಪದ ಕಲಾತಂಡಗಳು ಭಾಗವಹಿಸಲಿವೆ. ಇಂದಿನಿಂದ ಏಳುದಿನಗಳ ಕಾಲ ಉತ್ಸವ ನಡೆಯಲಿದ್ದು, ಸಂಕ್ರಾಂತಿಗೆ ಕೊನೆಗೊಳ್ಳಲಿದೆ.

Exit mobile version