ಶಿಡ್ಲಘಟ್ಟ: ಕೋಲಾರ ಮೂಲದ ದಂತ ವೈದ್ಯ ಡಾ. ಬಿ.ಎನ್.ಜನಾರ್ಧನ್ ಅವರು ಕುಟುಂಬ ಸದಸ್ಯರ ಜತೆ ಸೇರಿ ತಂದೆ-ತಾಯಿ ಹೆಸರಿನಲ್ಲಿ ʼಸೇವೆಯೇ ಪರಮ ಧರ್ಮʼ ಧ್ಯೇಯದೊಂದಿಗೆ ‘ಲಕ್ಷ್ಮಮ್ಮ- ಬಿ. ನಾರಾಯಣ್ ಚಾರಿಟಬಲ್ ಟ್ರಸ್ಟ್ʼ ಅನ್ನು ಆರಂಭಿಸಿದ್ದಾರೆ. ತಂದೆ ಬಿ. ನಾರಾಯಣ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹುಟ್ಟೂರಾದ ತಾಲೂಕಿನ ಯಣ್ಣೂರು ಗ್ರಾಮದಲ್ಲಿ ಟ್ರಸ್ಟ್‌ಗೆ ಚಾಲನೆ ನೀಡಲಾಗಿದ್ದು, ಇದೇ ವೇಳೆ ಯಣ್ಣೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯವಿದ್ದ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ನಾವು ಬೆಳೆದು ಬಂದ ದಾರಿ ಮರೆಯಬಾರದು, ನಾವು ಹುಟ್ಟಿ ಬೆಳೆದ ಊರಿಗೆ ಏನಾದರೂ ಮಾಡಬೇಕು ಎಂಬ ಆಶಯದೊಂದಿಗೆ ದಂತ ವೈದ್ಯ ಡಾ. ಬಿ.ಎನ್.ಜನಾರ್ಧನ್ ಅವರು ಟ್ರಸ್ಟ್ ಆರಂಭಿಸಿದ್ದಾರೆ. ಈ ಮೂಲಕ ಶಿಕ್ಷಕ ವೃತ್ತಿಯಿಂದ ಖ್ಯಾತರಾಗಿ ಎಲ್ಲರಿಂದಲೂ ಮೇಷ್ಟ್ರು ಅಂತ ಕರೆಸಿಕೊಳ್ಳುವ ನಾರಾಯಣಪ್ಪ ಮಗನ ಕುಟುಂಬವು ಟ್ರಸ್ಟ್ ಮೂಲಕ ಸಮಾಜ ಸೇವೆಗೆ ಮುಂದಾಗಿದೆ.
ಡಾ. ಜನಾರ್ಧನ್ ಅವರು ಮಾತನಾಡಿ, ಧರ್ಮ, ಶಿಕ್ಷಣ, ಆರೋಗ್ಯ ಎಂಬ ಉದ್ದೇಶಗಳನ್ನು ಇಟ್ಟುಕೊಂಡು 72 ವರ್ಷದ ತಾಯಿ ಲಕ್ಷ್ಮಮ್ಮ ಹಾಗೂ 84 ವರ್ಷದ ತಂದೆ ಬಿ.ನಾರಾಯಣ್ ಅವರ ಹೆಸರಿನಲ್ಲಿ ಟ್ರಸ್ಟ್‌ಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಆರೋಗ್ಯ, ಶಿಕ್ಷಣ, ಧಾರ್ಮಿಕ ಕ್ಷೇತ್ರದಲ್ಲಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ
ಯಣ್ಣೂರು ಗ್ರಾಮದ ಜನರು, ಹಿತೈಷಿಗಳು, ಶಾಲೆಯ ಮಕ್ಕಳು ಸೇರಿ ನೂರಾರು ಜನರ ಸಮ್ಮುಖದಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ