Site icon Vistara News

Students Abuse : ವಿದ್ಯಾರ್ಥಿನಿಯರಿಗೆ ಲೋಫರ್ಸ್‌ ಎಂದ ಉಪನ್ಯಾಸಕರು; ಪೋಷಕರಿಂದ ಫುಲ್ ಕ್ಲಾಸ್‌

Students Abuse

ಚಿಕ್ಕಬಳ್ಳಾಪುರ : ಮಕ್ಕಳಿಗೆ ಪಾಠ ಹೇಳಿ ಕೊಡುವ ಉಪನ್ಯಾಸಕರಿಗೆ ಇಂದು ಪೋಷಕರೇ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಪಿಯುಸಿ ವಿದ್ಯಾರ್ಥಿನಿಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ (Students Abuse) ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಚಿಕ್ಕಬಳ್ಳಾಪುರ‌ ನಗರದ ಶಾಂತಿನಿಕೇತನ ಪಿಯು ಕಾಲೇಜಿನ ಉಪನ್ಯಾಸಕರಾದ ನರಸಿಂಹಮೂರ್ತಿ ಹಾಗೂ ನಾಗರಾಜು ಎಂಬುವವರಿಗೆ ಪೋಷಕರು ಚಳಿ ಬಿಡಿಸಿದ್ದಾರೆ. ಈ ಇಬ್ಬರು ಉಪನ್ಯಾಸಕರು ವಿದ್ಯಾರ್ಥಿನಿಯರ ಜತೆಗೆ ಹಗುರವಾಗಿ ಮಾತನಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಉಪನ್ಯಾಸಕರಿಗೆ ತರಾಟೆಗೆ ತೆಗೆದುಕೊಂಡ ಪೋಷಕರು

ವಿದ್ಯಾರ್ಥಿನಿಯರಿಗೆ ಲೋಫರ್ಸ್ ಹಾಗೂ ಥರ್ಡ್‌ ಕ್ಲಾಸ್ ಮುಂಡೆಗಳು ಎಂದು ನಿಂದನೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ವಿದ್ಯಾರ್ಥಿನಿಯರ ವೈಯಕ್ತಿಕ ವಿಚಾರಗಳ ಬಗ್ಗೆ ಟೀಕೆ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ವಿದ್ಯಾರ್ಥಿನಿಯರು ಪೋಷಕರ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ವಿದ್ಯಾರ್ಥಿನಿಯರಿಗೆ ಬರೆ ಬರುವಂತೆ ಹೊಡೆದ ಕಾರಣಕ್ಕೆ ಉಪನ್ಯಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಲೇಜು ಮುಂದೆ ಪೋಷಕರು ಹಾಗು ಆಡಳಿತ ಮಂಡಳಿ ವಾಗ್ವಾದವನ್ನೇ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಪ್ರಕರಣ ಇತ್ಯಾರ್ಥ ಮಾಡಿಕೊಂಡಿದ್ದಾರೆ. ಉಪನ್ಯಾಸಕರ ಪರವಾಗಿ ಆಡಳಿತ ಮಂಡಳಿ ಪೋಷಕರ ಜತೆಗೆ ಕ್ಷಮೆಯಾಚಿಸಿದ್ದಾರೆ. ಉಪನ್ಯಾಸಕರ ಜತೆ ಸಭೆ ಮಾಡಿ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version