Site icon Vistara News

Chikkamagaluru News: ಮಗಳ ಸಾವಿಗೆ ನ್ಯಾಯ ಕೊಡಿಸಿ; ಎಸ್‌ಪಿ ಕಚೇರಿ ಎದುರು ಕಣ್ಣೀರಿಟ್ಟ ಪೋಷಕರು

The cries of the Rukminis parents

ಚಿಕ್ಕಮಗಳೂರು: ಮಗಳ ಅನುಮಾನಾಸ್ಪದ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಪೋಷಕರು ಕಣ್ಣೀರಿಟ್ಟ ಘಟನೆ ನಗರದ (Chikkamagaluru News) ಎಸ್‌ಪಿ ಕಚೇರಿ ಎದುರು ನಡೆದಿದೆ. ಮಂಡ್ಯ ಮೂಲದ ರುಕ್ಮಿಣಿ (31) ಕಡೂರು ನಗರದಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದರು. ಕಡೂರು ಪೊಲೀಸರು ದೂರು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಎಸ್‌ಪಿ ಕಚೇರಿ ಬಳಿ ಆಗಮಿಸಿ ಕುಟುಂಬಸ್ಥರು ಗೋಳಾಡಿದ್ದಾರೆ.

ಮಂಡ್ಯ ಜಿಲ್ಲೆಯ ರಾಗಿ ಮುದ್ದನಹಳ್ಳಿ ಮೂಲದ ರುಕ್ಮಿಣಿ ಭಾನುವಾರ ಮಧ್ಯಾಹ್ನ ಕಡೂರಿನಲ್ಲಿ ಮೃತಪಟ್ಟಿದ್ದರು. ಸಾವಿನ ಬಳಿಕ ಇಬ್ಬರು ಮೊಮ್ಮಕ್ಕಳು ಕಣ್ಮರೆಯಾಗಿದ್ದಾರೆ. ಮಕ್ಕಳನ್ನು ಹುಡುಕಿಕೊಡಬೇಕು ಹಾಗೂ ಮಗಳ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಪೋಷಕರು ಹಾಗೂ ಸಂಬಂಧಿಕರು ಒತ್ತಾಯಿಸಿದ್ದಾರೆ.

ಗಂಡ, ಮಗನೊಂದಿಗೆ ಮೃತ ಮಹಿಳೆ ರುಕ್ಮಿಣಿ

ಪ್ರಕರಣವನ್ನು ಆತ್ಮಹತ್ಯೆಯೆಂದು ಹೇಳಿ ಮುಚ್ಚಿಹಾಕಲು ಪೊಲೀಸರ ಯತ್ನಿಸಿದ್ದಾರೆ ಎಂದು ಆರೋಪಿಸಿರುವ ಮಹಿಳೆ ಪೋಷಕರು, ರುಕ್ಮಿಣಿ ಗಂಡ ಕಣ್ಣನ್ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಕಳೆದ 14 ವರ್ಷಗಳ ಹಿಂದೆ ಕಡೂರಿನ ಕಣ್ಣನ್‌ ಜತೆ ರುಕ್ಮಿಣಿ ವಿವಾಹವಾಗಿದ್ದರು. ಮದುವೆ ಆದಾಗಿನಿಂದಲೂ ಅತ್ತೆ, ಮಾವ, ಗಂಡ ಕಿರುಕುಳ ನೀಡುತ್ತಿದ್ದರು. ರುಕ್ಮಿಣಿ ಸಾವಿನ ನಂತರ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿರುವ ಕಣ್ಣನ್ ಆಡಿಯೋ ಲಭ್ಯವಾಗಿದೆ ಎಂದು ಆರೋಪಿಸಿರುವ ಪೋಷಕರು, ಮೊಮ್ಮಕ್ಕಳನ್ನು ಹುಡುಕಿ ಕೊಡುವ ಜತೆಗೆ ಮಗಳ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಬೇಡಿಕೊಂಡಿದ್ದಾರೆ.

ಇದನ್ನೂ ಓದಿ | Snake News : ಮತ್ತೆ ಮಂಚಕ್ಕೆ ಬಂದ ಬುಸ್‌ ಬುಸ್‌ ನಾಗಪ್ಪ; ಯುವಕನ ಪಕ್ಕ ತಣ್ಣಗೆ ಮಲಗಿದ್ದ!

ತವರು ಮನೆ ಸೇರಿದವಳನ್ನು ಭೀಮನ ಅಮಾವಾಸ್ಯೆಯಂದೇ ಅಪಹರಿಸಿದ ಪತಿ!

ಶಿವಮೊಗ್ಗ : ಭೀಮನ ಅಮಾವಾಸ್ಯೆಯಂದೇ ಪತಿಯೊಬ್ಬ ಪತ್ನಿಯನ್ನು ಅಪಹರಿಸಿರುವ (Kidnap case) ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದಂದು (Shivamogga News) ಹಾಡಹಗಲೇ ಯುವತಿಯೊಬ್ಬಳ ಅಪಹರಣವಾಗಿತ್ತು. ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಯುವತಿಯನ್ನು ಕಿಡ್ನ್ಯಾಪ್‌ ಮಾಡಿದ್ದರು. ಇದೀಗ ಆ ಕಿಡ್ನ್ಯಾಪರ್‌ ಯುವತಿಯ ಪತಿ ಎಂದು ತಿಳಿದು ಬಂದಿದೆ.

ಇಲ್ಲಿನ ನಗರ ಬಸ್‌ ಸ್ಟ್ಯಾಂಡ್‌ ಹತ್ತಿರದ ಅಶೋಕ ಹೋಟೆಲ್‌ ಬಳಿ ಜು.17ರ ಬೆಳಗ್ಗೆ ಇನ್ನೋವಾ ಕಾರಿನಲ್ಲಿ ಬಂದು ಪತ್ನಿಯನ್ನು ಎಳೆದುಹೋಗಿದ್ದಾನೆ. ಮದುವೆಯಾಗಿ ತಂದೆ ಮನೆಗೆ ವಾಪಸ್ ಆಗಿದ್ದಳು ಎಂಬ ಕಾರಣಕ್ಕೆ ಕಿಡ್ನ್ಯಾಪ್‌ ನಡೆದಿದೆ ಎನ್ನಲಾಗಿದೆ. ಸೋಮವಾರ (ಜು.17) ಕುಟುಂಬದವರ ಜತೆ ದೇವಾಲಯಕ್ಕೆ ಹೋಗುವಾಗ ಪತ್ನಿಯನ್ನು ಅಪಹರಿಸಿ ಪರಾರಿ ಆಗಿದ್ದಾನೆ. ಈ ಸಂಬಂಧ ಗಂಡನಿಂದಲೇ ಅಪಹರಣ ಆಗಿದೆ ಎಂದು ಯುವತಿಯ ಪಾಲಕರು ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ | 40 ಕೋಟಿಯ ಒಡತಿಯನ್ನು ಕೊಂದ ಸಂಬಂಧಿಕರು; ಶವ ಸಾಗಿಸುವ ಯತ್ನ ವಿಫಲಗೊಳಿಸಿದ ಕ್ಯಾಬ್ ಡ್ರೈವರ್​

ಜನರ ಓಡಾಟ ಇರುವಾಗಲೇ ಕುಟುಂಬಸ್ಥರು ಜತೆಗೆ ಇರುವಾಗಲೇ ಈ ಕಿಡ್ನ್ಯಾಪ್‌ ನಡೆದಿದೆ. ಕಾರಿನಲ್ಲಿ ಬಂದವನೇ ಪತ್ನಿಯನ್ನು ಎಳೆದುಕೊಂಡು ಹೋಗಿದ್ದಾನೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೊಡ್ಡಪೇಟೆ ಠಾಣೆ ಪೊಲೀಸರು ದೌಡಾಯಿಸಿದ್ದಾರೆ. ಸದ್ಯ ಕಿಡ್ನ್ಯಾಪ್‌ ಆಗಿರುವ ಯುವತಿ ಹೆಸರು ಏನು ಎಂಬುದು ತಿಳಿದಿಲ್ಲ. ಪೊಲೀಸರು ಸುತ್ತಮುತ್ತಲ ಸಿಸಿ ಕ್ಯಾಮೆರಾವನ್ನು ಪರಿಶೀಲಿಸುತ್ತಿದ್ದು, ಎಲ್ಲ ಠಾಣಾ ವ್ಯಾಪ್ತಿಗೂ ಮಾಹಿತಿಯನ್ನು ರವಾನಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version