ಚಿಕ್ಕಮಗಳೂರು: ಶೋಕಿ ಸೈಲೆನ್ಸರ್ ಹಾಗೂ ಅರ್ಧ ಹೆಲ್ಮೆಟ್‌ಗಳ ಮೇಲೆ ಪೊಲೀಸರು ಬುಲ್ಡೋಜರ್ ಹತ್ತಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದಲ್ಲಿ ಹಲವು ಯುವಕರು ಬೈಕಿನ ಸೈಲೆನ್ಸರ್‌ಗಳನ್ನು ಮೋಡಿಫೈ ಮಾಡಿಸಿಕೊಂಡು ಬೈಕ್ ವೀಲಿಂಗ್ ಮಾಡಿ ನಗರದಲ್ಲಿ ಕರ್ಕಶ ಶಬ್ದದೊಂದಿಗೆ ಓಡಾಡುತ್ತಿದ್ದರು. ಇದರಿಂದ ಸ್ಥಳೀಯರಿಗೂ ತೊಂದರೆಯಾಗುತ್ತಿತ್ತು. ಜೊತೆಗೆ ಯುವಕರು ಬೈಕ್‌ನಲ್ಲಿ ನಗರದೊಳಗೆ ವೀಲಿಂಗ್ ಮಾಡುತ್ತಿದ್ದರು. ಭಾನುವಾರ ಕೂಡ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮಧ್ಯೆಯೇ ಐದಾರು ಯುವಕರು ವೀಲಿಂಗ್ ಮಾಡುತ್ತಿದ್ದರು. ನಡು ರಸ್ತೆ ರೇಸಿಗೆ ಬಿದ್ದ ಯುವಕರು ವೀಲಿಂಗ್ ಮಾಡಿಕೊಂಡು ಇತರ ಪ್ರಯಾಣಿಕರನ್ನು ಅಂಜಿಸುವಂತೆ ಹೋಗುತ್ತಿದ್ದರು. ಇದರಿಂದ ವಾಹನ ಸವಾರರು ಕೂಡ ಗಾಬರಿಯಾಗಿದ್ದರು.
ಯುವಕರ ಈ ಹುಚ್ಚಾಟದ ವಿಡಿಯೋ ಸೆರೆ ಹಿಡಿದು ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಿದ್ದರು. ಎಸ್ಪಿ ಸೂಚನೆ ಮೇರೆಗೆ ಭಾನುವಾರ 5 ಬೈಕ್‌ಗಳನ್ನು ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಅಯ್ಯನಕೆರೆ ಬಳಿ ವಶಕ್ಕೆ ಪಡೆದಿದ್ದಾರೆ.
ಈ ಬೈಕ್‌ಗಳಿಗೆ ಇನ್ಸೂರೆನ್ಸ್ ಸೇರಿದಂತೆ ಯಾವುದೇ ದಾಖಲೆಗಳು ಇರಲಿಲ್ಲ. ಯುವಕರ ಬಳಿ ಡಿಎಲ್ ಕೂಡ ಇರಲಿಲ್ಲ. ಸೈಲೆನ್ಸರ್‌ಗಳು ಹಾಗೂ ಅರ್ಧ ಹೆಲ್ಮೆಟ್‌ಗಳ ಮೇಲೆ ಬುಲ್ಡೋಜರ್ ಹತ್ತಿಸಿ ಬೈಕ್ ಸವಾರರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ| ಬೆಂಗಳೂರಿನಲ್ಲಿ ಮೀತಿ ಮೀರಿದ ಬೈಕ್ ವ್ಹೀಲಿಂಗ್: ಪುಂಡರ ಹಾವಳಿಗೆ ಸಾರ್ವಜನಿಕರ ಆಕ್ರೋಶ