Site icon Vistara News

Datta Peetha | ದತ್ತ ಪೀಠದಲ್ಲಿ ಮಾಂಸಾಹಾರ ಮಾಡಲು ಅನುಮತಿ ನೀಡಿ: ಚಿಕ್ಕಮಗಳೂರು ಜಿಲ್ಲಾಧಿಕಾರಿಗೆ ಮನವಿ ಪತ್ರ

Datta Peetha

ಚಿಕ್ಕಮಗಳೂರು: ಜಿಲ್ಲೆಯ ಇನಾಂ ದತ್ತಾತ್ರೇಯಾ ಬಾಬಾಬುಡನ್ ಗಿರಿ ದರ್ಗಾ ಬಳಿ(Datta Peetha) 2004ರಲ್ಲಿ ಮಾಂಸದ ಅಂಗಡಿಯೇ ಇತ್ತು. ಹೀಗಾಗಿ ದತ್ತಪೀಠದಲ್ಲಿ ಮಾಂಸಹಾರ ಮಾಡಲು ಅನುಮತಿ ನೀಡಬೇಕು ಎಂದು ಟಿಪ್ಪು ಸುಲ್ತಾನ್ ಹಾಗೂ ಬಾಬಾಬುಡನ್ ಗಿರಿ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ.

ಪೊಲೀಸರು, ತಹಸೀಲ್ದಾರ್ ಹಾಗೂ ಕೆಲ ಸಂಘಟನೆಗಳು ಮಾಂಸ ಮಾಡಬೇಡಿ ಎನ್ನುತ್ತಾರೆ. ಕೋರ್ಟ್‌ ಆದೇಶವಿಲ್ಲದೆ ಜಿಲ್ಲಾಡಳಿತ ಮಾಂಸಹಾರಕ್ಕೆ ನಿಷೇಧ ಹೇರಿದ್ದು ತಪ್ಪು. ಆದ್ದರಿಂದ ದತ್ತಪೀಠದಲ್ಲಿ ಮಾಂಸಾಹಾರ ಮಾಡಲು ಅನುಮತಿ ನೀಡಬೇಕು ಎಂದ ಸಮಿತಿ ಒತ್ತಾಯಿಸಿದೆ.

ಹರಕೆ ತೀರಿಸಲು ರಾಜ್ಯ, ಹೊರ ರಾಜ್ಯಗಳಿಂದಲೂ ದತ್ತಪೀಠಕ್ಕೆ ಭಕ್ತರು ಆಗಮಿಸುತ್ತಾರೆ. ದತ್ತಪೀಠದಲ್ಲಿ ಮಾಂಸಹಾರ ತಯಾರಿಸಲು ಈ ಹಿಂದೆ ನಿಷೇಧ ಇರಲಿಲ್ಲ. ದತ್ತಪೀಠದ 200 ಮೀ.‌ದೂರದಲ್ಲಿ ಮಾಂಸದಂಗಡಿಗೆ 2004ರಲ್ಲಿ ಅಂದಿನ ಡಿಸಿ ಅವಕಾಶ ನೀಡಿದ್ದರು. ಮಾಂಸದ ಅಂಗಡಿ ನಡೆಸಲು ತಹಸೀಲ್ದಾರ್ ಕಚೇರಿಗೆ ಹಣ ಕಟ್ಟಿರುವ ರಸೀದಿಯೂ ಇದೆ. ಹೀಗಾಗಿ ಮಾಂಸಾಹಾರ ತಯಾರಿಕೆಗೆ ಕೋರ್ಟ್‌ ನಿಷೇಧವಿದ್ದರೆ ಬಹಿರಂಗಪಡಿಸಲಿ ಎಂದು ಸಮಿತಿ ಆಗ್ರಹಿಸಿದೆ.

ಇದನ್ನೂ ಓದಿ | Ganja in jail | ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಗಾಂಜಾ ಸೇವಿಸಿ ವಿಚಾರಣಾಧೀನ ಕೈದಿ ಅಸ್ವಸ್ಥ

Exit mobile version