Site icon Vistara News

Rain News | ಮಲೆನಾಡಲ್ಲಿ ‌ಮಳೆ ಅವಾಂತರಕ್ಕೆ ಧರೆ ಕುಸಿತ: ಸಂಚಾರ ಅಸ್ತವ್ಯಸ್ತ

Rain News

ಚಿಕ್ಕಮಗಳೂರು : ಜಿಲ್ಲೆಯಲ್ಲಿ ವರುಣನ ಆರ್ಭಟ (Rain News) ಹೆಚ್ಚಾಗಿದ್ದು, ಮಳೆ ಅವಾಂತರಕ್ಕೆ ಧರೆ ಕುಸಿದಿದೆ. ಜಿಲ್ಲೆಯ ಕಳಸ ತಾಲೂಕಿನ ಹಿರೇಬೈಲ್ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ (ಸೆ.9) ಧರೆ ಕುಸಿತಗೊಂಡಿದೆ.

ಧರೆ ಕುಸಿತಗೊಂಡ ಹಿನ್ನೆಲೆಯಲ್ಲಿ ಹಿರೇಬೈಲ್-ಕೊಟ್ಟಿಗೆಹಾರ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ರಸ್ತೆಯಲ್ಲಿದ್ದ ಮಣ್ಣನ್ನು ಸ್ಥಳೀಯರು ತೆರುವುಗೊಳಿಸಿದ್ದಾರೆ. ಧರೆ ಕುಸಿತದಿಂದ ಕೆಲ ಗಂಟೆ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಮೂರು ವರ್ಷದ ಹಿಂದೆ ಈ ಸ್ಥಳದ ಪಕ್ಕದಲ್ಲಿ ಕುಸಿತವಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ | Rain news | ಬೆಂಗಳೂರಿನ ಮಳೆಪೀಡಿತ ಪ್ರದೇಶಗಳಿಗೆ ಎಫ್‌ಟಿಎಚ್ ಡೈಲಿಯಿಂದ ಅಗತ್ಯ ವಸ್ತುಗಳ ಪೂರೈಕೆ

Exit mobile version