Site icon Vistara News

Elephant attack: ಕಾಡಾನೆ ತುಳಿತಕ್ಕೆ ಮತ್ತೊಬ್ಬ ಕಾರ್ಮಿಕ ಮಹಿಳೆ ಬಲಿ

elephant attack

ಚಿಕ್ಕಮಗಳೂರು: ಕಾಫಿನಾಡಲ್ಲಿ ಕಾಡಾನೆ ದಾಳಿಗೆ (Elephant attack) ಮತ್ತೊಂದು ಬಲಿಯಾಗಿದೆ. ಕಾರ್ಮಿಕ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಅರಣ್ಯ ವಲಯದ ಆಲ್ದೂರು ಸಮೀಪದ ಹೆಡದಾಳು ಗ್ರಾಮದಲ್ಲಿ ಘಟನೆ ನಡೆದಿದೆ.

ವೀಣಾ (45) ಮೃತ ಮಹಿಳೆ. ಮಹಿಳೆ ಮುಂಜಾನೆ ಕಾಫಿ ತೋಟದ ಕೆಲಸಕ್ಕೆ ಹೋಗುವಾಗ ಘಟನೆ ನಡೆದಿದೆ. ಕಾಡಾನೆಯ ಇರವು ಗೊತ್ತಾಗದೆ ಸಮೀಪದಲ್ಲಿ ಹೋದುದರಿಂದ ತುಳಿತಕ್ಕೆ ಬಲಿಯಾಗಿದ್ದಾರೆ. ಸ್ಥಳಕ್ಕೆ ಆಲ್ದೂರು ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಇದು ಆನೆ ತುಳಿತಕ್ಕೆ ಕಳೆದ ಎರಡು ತಿಂಗಳಲ್ಲಿ ಎರಡನೇ ಬಲಿಯಾಗಿದೆ. ಆಲ್ದೂರು ವಲಯದ ಅರಣ್ಯದಲ್ಲಿ 7 ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು, ಅಲ್ಲೇ ಸುತ್ತಮುತ್ತಲಿನ ತೋಟದಲ್ಲಿ ಓಡಾಡುತ್ತಿವೆ. ಆನೆಗಳನ್ನು ಓಡಿಸುವಂತೆ ಸ್ಥಳೀಯರು ಈ ಹಿಂದೆ ಪ್ರತಿಭಟನೆ ನಡೆಸಿ, ಆಗ್ರಹಿಸಿದ್ದರು. ಈಗಲೂ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಫಿತೋಟದ ಕೆಲಸಕ್ಕೆ ಕಾರ್ಮಿಕರು ಬರಲು ಅಂಜುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಹಾಸನ‌ ಜಿಲ್ಲೆಯ ಸಕಲೇಶಪುರ ತಾಲೂಕಿನ ವಡೂರು ಗ್ರಾಮದ ಬಳಿ ಒಬ್ಬರು ಮಹಿಳೆ ಹಾಗೂ ನಾಗರಹೊಳೆ ಅರಣ್ಯ ಪ್ರದೇಶದ ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿ ಮಾಸ್ತಿ ಗುಡಿ ಪುನರ್ವಸತಿ ಕೇಂದ್ರದ ನಿವಾಸಿಯೊಬ್ಬರು ಕಾಡಾನೆ ತುಳಿತದಿಂದ ಸಾವಿಗೀಡಾಗಿದ್ದರು.

ಚಿರತೆಯೊಂದಿಗೆ ಕಾದಾಡಿ ಮಗುವನ್ನು ಉಳಿಸಿಕೊಂಡ ತಂದೆ

ತುಮಕೂರು: ಬಾಲಕಿ ಮೇಲೆ ದಾಳಿ ಮಾಡಿ ಹೊತ್ತೊಯ್ಯಲು ಯತ್ನಿಸಿದ ಚಿರತೆಯೊಂದಿಗೆ (leopard attack) ಕಾದಾಡಿ ಮಗುವನ್ನು ತಂದೆ ಉಳಿಸಿಕೊಂಡ ಘಟನೆ ತುಮಕೂರು (tumkur news) ತಾಲ್ಲೂಕಿನ ಬೆಳ್ಳಾವಿ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಬೆಳ್ಳಾವಿ ಗ್ರಾಮದಲ್ಲಿ ನಡೆದಿದೆ.

7 ವರ್ಷದ ಲೇಖನ ಚಿರತೆ ದಾಳಿಗೆ ತುತ್ತಾದ ಮಗು. ರಾಕೇಶ್, ಹರ್ಷಿತಾ ದಂಪತಿಯ ಮಗು ಮನೆಯ ಮುಂದೆ ಆಟವಾಡುತ್ತಿದ್ದಾಗ ಚಿರತೆ ದಾಳಿ ನಡೆಸಿತ್ತು. ಕೂಡಲೇ ತಂದೆ ರಾಕೇಶ್‌ ಜೋರಾಗಿ ಕೂಗಿಕೊಂಡು, ದೊಣ್ಣೆಯಿಂದ ಚಿರತೆಗೆ ಬೆದರಿಸಿದ್ದರು. ಕೂಡಲೇ ಚಿರತೆ ಮಗುವನ್ನು ಬಿಟ್ಟು ಓಡಿ ಹೋಗಿತ್ತು. ಬಾಲಕಿಯ ಕಾಲನ್ನು ಚಿರತೆ ಪರಚಿದ್ದು, ಆಳವಾದ ಗಾಯಗಳಾಗಿವೆ.

ಇದನ್ನೂ ಓದಿ: Leopard Attack : ಬೆಂಗಳೂರಿಗೆ ಪ್ರತ್ಯೇಕ ಚಿರತೆ ಕಾರ್ಯಪಡೆ ರಚನೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ

Exit mobile version