Site icon Vistara News

Food Fraud: ಪ್ರವಾಸಿಗರೇ, ಮಟನ್‌ ಬಿರಿಯಾನಿ ಅಂತ ತಿನ್ನುವ ಮೊದಲು ಎಚ್ಚರ! ಬೀಫ್‌ ಮಿಕ್ಸ್ ಪತ್ತೆ, ಈಟರಿ ಕ್ಲೋಸ್

beef in mutton biryani

ಚಿಕ್ಕಮಗಳೂರು: ಮಲೆನಾಡು ಜಿಲ್ಲೆಗೆ ಹೋಗುವ ಪ್ರವಾಸಿಗರೇ ಎಚ್ಚರವಿರಲಿ. ಲೋಕಲ್‌, ಟೇಸ್ಟಿ ನಾನ್‌ವೆಜ್‌ ಫುಡ್‌ (Nonveg food) ಐಟಂ ಸಿಗಬಹುದು ಎಂದು ಮಟನ್‌ ಬಿರಿಯಾನಿ (mutton biryani) ತಿನ್ನಲು ಹೊರಟರೆ ಗೊತ್ತಾಗದಂತೆ ಬೀಫ್‌ (beef) ತಿನ್ನಿಸುವವರಿದ್ದಾರೆ! ಹೀಗೊಂದು ಆಹಾರ ವಂಚನೆ (Food Fraud) ಪತ್ತೆಯಾಗಿದೆ.

ಸ್ಥಳೀಯವಾಗಿ ರುಚಿಕರ ಮಟನ್‌ ಬಿರಿಯಾನಿ ಸಿಗಬಹುದು ಎಂದು ಅಂತ ಆರ್ಡರ್ ಮಾಡುವ ಮೊದಲು ಈ ಸ್ಟೋರಿ ನೋಡಿ. ನಾನ್ ವೆಜ್ ಹೋಟೆಲ್‌ಗಳಲ್ಲಿ ಬೀಫ್ ಮಿಕ್ಸಿಂಗ್ ದಂಧೆ ನಡೆಯುತ್ತಿರುವುದು ಚಿಕ್ಕಮಗಳೂರು ನಗರದ ಹಲವು ಹೋಟೆಲ್‌ಗಳಲ್ಲಿ ಪತ್ತೆಯಾಗಿದೆ. ಇಂಥ (fraud case) ಈಟರಿಗಳನ್ನು ಕ್ಲೋಸ್‌ ಮಾಡಿಸಲಾಗಿದೆ.

ಈ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು, ದಾಳಿ ವೇಳೆ ದನದ ಮಾಂಸದ ಮಿಕ್ಸಿಂಗ್ ದಂಧೆ ಪತ್ತೆಯಾಗಿದೆ. ಕುರಿ ಬಿರಿಯಾನಿಗೆ ದನದ ಮಾಂಸ ಮಿಕ್ಸ್ ಮಾಡಿ ಗ್ರಾಹಕರಿಗೆ ಸರ್ವ್ ಮಾಡಲಾಗುತ್ತಿದೆ. ಈ ಮೂಲಕ ಮಟನ್‌ ಬಿರಿಯಾನಿ ಪ್ರಿಯರಿಗೆ ಗೊತ್ತೇ ಆಗದಂತೆ ಶಾಕ್ ನೀಡಿದ್ದಾರೆ ಕೆಲವು ಹೋಟೆಲ್ ಮಾಲೀಕರು.

ಚಿಕ್ಕಮಗಳೂರ ನಗರದ ಎವರೆಸ್ಟ್ ಹೋಟೆಲ್, ಬೆಂಗಳೂರು ಹೋಟೆಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮಾಂಸದ ಮಿಕ್ಸಿಂಗ್ ದಂಧೆಯಲ್ಲಿ ತೊಡಗಿದ್ದ ಎರಡು ಹೋಟೆಲ್‌ಗಳನ್ನು ಮುಚ್ಚಿಸಲಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಲತೀಫ್, ಶಿವರಾಜ್ ಎಂದು ಬಂಧಿತ ಆರೋಪಿಗಳನ್ನು ಗುರುತಿಸಲಾಗಿದೆ.

ಇದನ್ನೂ ಓದಿ: JOB Fraud case : ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ಪಡೆದು ರೈಲು ಬಿಟ್ಟ ವಂಚಕಿ!

Exit mobile version