Site icon Vistara News

ಕಸಾಯಿಖಾನೆಗಳ ವಿರುದ್ಧ ಗರ್ಜಿಸಿದ ಜೆಸಿಬಿ

cow slaughter

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿಂದು ಜೆಸಿಬಿ ಗರ್ಜಿಸಿದವು. ಇದಕ್ಕೆ ಕಾರಣವಾಗಿದ್ದು, ಅಕ್ರಮ ಕಟ್ಟಡಗಳ ಅಲ್ಲ. ಬದಲಿಗೆ ಅಕ್ರಮ ಕಸಾಯಿಖಾನೆ ಶೆಡ್‌ಗಳು. ಅಕ್ರಮ ಕಸಾಯಿಖಾನೆ ಕಟ್ಟಡ ಹಾಗೂ ಗೋವುಗಳ ಹತ್ಯೆ ಬಗ್ಗೆ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ದಾಳಿ ನಡೆಸಿದ್ದರು.

ವಿಜಯ ಮಹಾಂತೇಶ್ವರ ಗದ್ದುಗೆ ರಸ್ತೆಯ ಬಲಭಾಗದಲ್ಲಿ ಅಕ್ರಮವಾಗಿದ್ದ ಎರಡು ಕಸಾಯಿಖಾನೆಗಳನ್ನು ನೆಲಸಮ ಮಾಡಲಾಯಿತು. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದೂರು ನೀಡಿದ್ದ ಕಾರಣಕ್ಕೆ ಬೆಳಗ್ಗೆ ಇಳಕಲ್ ನಗರ ಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.. ರಬ್ಬಾನಿ ಮಹಮದ್ ಯೂಸುಫ್ ಬೇಪಾರಿ, ಇನಾಯತ್ ಮಹಮ್ಮದ್ ಯೂನುಸ್ ಬೇಪಾರಿ, ಜಿಲಾನಿ ಮೊಹಮ್ಮದ್ ಯೂಸುಫ್ ಬೇಪಾರಿ ಎಂಬುವರು ಇದೀಗ ಪೊಲೀಸ್‌ ವಶದಲ್ಲಿ ಇದ್ದಾರೆ.

ಇದನ್ನೂ ಓದಿ | ಗಂಡನೇ ಬಂದಿದ್ದಾನೆ ಎಂದು ಭ್ರಮಿಸಿ ನಾಲ್ಕು ದಿನ ಹಾವನ್ನು ಮನೇಲಿಟ್ಟುಕೊಂಡ ಮಹಿಳೆ!

ಇತ್ತ ಚಿಕ್ಕಮಗಳೂರಿನ ತಮಿಳು ಕಾಲೊನಿಯಲ್ಲೂ ಜೆಸಿಬಿ ಗರ್ಜನೆ ಜೋರಾಗಿತ್ತು. ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು ನಿರ್ಮಾಣವಾಗಿದ್ದ ಶೆಡ್ ಅನ್ನು ಜೆಸಿಬಿ ಸಹಾಯದಿಂದ ತೆರವು ಮಾಡಲಾಯಿತು. ನಗರ ಸಭೆಯ ಅಧ್ಯಕ್ಷ ವೇಣು,  ಪೌರಾಯುಕ್ತ ಬಸವರಾಜ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ವೇಳೆ ಅಕ್ರಮ ಗೋಮಾಂಸ ಮಾರಾಟದ ಶೆಡ್ ಪತ್ತೆಯಾಗಿದೆ. ಇನ್ನು ಅಕ್ರಮ ಗೋಮಾಂಸದಲ್ಲಿ ಭಾಗಿಯಾದವರು ಪರಾರಿಯಾಗಿದ್ದು, ಪತ್ತೆ ಕಾರ್ಯದಲ್ಲಿ ಪೊಲೀಸ್‌ ತಂಡ ಮಗ್ನವಾಗಿದೆ.

ಅಕ್ರಮ ಗೋಮಾಂಸ ಶೆಡ್‌ ಗಳ ತೆರವು ಒಂದು ಕಡೆಯಾದರೆ, ಮತ್ತೊಂದು ಕಡೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ಹಿಂದೂ ಕಾರ್ಯಕರ್ತರು ತಡೆದಿರುವ ಘಟನೆ ನಡೆದಿದೆ.

ಕುಂದಾಪುರದಿಂದ ಭಟ್ಕಳ ಕಡೆಗೆ ಮುಸ್ಲಿಂ ಮಹಿಳೆಯರನ್ನು ಬಳಸಿಕೊಂಡು ಗೋ ಮಾಂಸ ಸಾಗಾಟ ಮಾಡಲಾಗುತ್ತಿತ್ತು. ವಿಷಯ ತಿಳಿದ  ಬೈಂದೂರಿನ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಥಳೀಯ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲು ಮಾಡಿದ್ದಾರೆ.  

Exit mobile version