ಹೊರನಾಡು(ಚಿಕ್ಕಮಗಳೂರು): ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಮಾರ್ಚ್ 11ರಿಂದ 15ರವರೆಗೆ ಜಾತ್ರಾ ಮಹೋತ್ಸವ ನೆರವೇರಲಿದ್ದು, ಮಾ.13ರಂದು ಮಧ್ಯಾಹ್ಮ 12.22ಕ್ಕೆ ಬ್ರಹ್ಮ ರಥೋತ್ಸವ ಹಾಗೂ ರಾತ್ರಿ 10ಗಂಟೆಗೆ ಶ್ರೀಮನ್ ಮಹಾ ರಥೋತ್ಸವ ನಡೆಯಲಿದೆ ಎಂದು ಶ್ರೀಕ್ಷೇತ್ರದ ಧರ್ಮದರ್ಶಿ ಅಂಬಾಚರಣದಾಸ ಜಿ. ಭೀಮೇಶ್ವರ ಜೋಷಿ ತಿಳಿಸಿದ್ದಾರೆ.
ರಥೋತ್ಸವ ಅಂಗವಾಗಿ ಮಾ.11ರಂದು ಶ್ರೀ ಗಣಪತಿ ಪೂಜೆ, ಶ್ರೀ ಮಹಾ ಗಣಪತಿ ಹೋಮ ಮತ್ತು ರಾತ್ರಿ ಮಹಾರಂಗಪೂಜೆ ನಡೆಯಲಿದೆ. ಮಾ. 12ರಂದು ಮಧ್ಯಾಹ್ನ 12:23ಕ್ಕೆ ಧ್ವಜಾರೋಹಣ, ರಾತ್ರಿ ಪುಷ್ಪಕಾರೋಹಣ, ಮಾ. 13ರಂದು ಮಧ್ಯಾಹ್ನ 12:22ಕ್ಕೆ ಶ್ರೀ ಬ್ರಹ್ಮರಥೋತ್ಸವ ಹಾಗೂ ರಾತ್ರಿ 10ಗಂಟೆಗೆ ಶ್ರೀಮನ್ ಮಹಾ ರಥೋತ್ಸವ ನಡೆಯಲಿದೆ. ಮಾ.14ರಂದು ಕುಂಕುಮೋತ್ಸವ, ಅವಭೃತಸ್ನಾನ, ರಾತ್ರಿ ಇಡಿಗಾಯಿ ಸೇವೆ, ಧ್ವಜಾವರೋಹಣ ಹಾಗೂ ಮಾ. 15ರಂದು ಸಂಪ್ರೋಕ್ಷಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ರಾಮಮಂದಿರ ಮಂಡಲೋತ್ಸವ; ಪೇಜಾವರ ಶ್ರೀಗಳ ನೇತೃತ್ವದಲ್ಲಿ ಕಟ್ಟಿ ಪ್ರಸನ್ನಾಚಾರ್ಯರ ತಂಡದಿಂದ ಪೂಜಾ ಕೈಂಕರ್ಯ