Site icon Vistara News

Operation Elephant : ಬೀಟಮ್ಮ ಗುಂಪನ್ನು ಬೀಟ್‌ ಮಾಡಲು ಎಂಟ್ರಿ ಕೊಟ್ಟ ಅಭಿಮನ್ಯು ಟೀಂ

Abhimanyus team arrives in Chikmagalur to capture elephants

ಚಿಕ್ಕಮಗಳೂರು: ಆಹಾರಕ್ಕಾಗಿ ಕಾಡು ಬಿಟ್ಟು ನಾಡಿಗೆ ಕಾಡಾನೆಗಳು ಹಿಂಡಾಗಿ ಬರುತ್ತಿವೆ. ಹಾಸನದಲ್ಲಿ ಉಪಟಳ ನೀಡುತ್ತಿದ್ದ ಬೀಟಮ್ಮ ಗುಂಪಿನ ಕಾಡಾನೆಗಳು ಈಗ ಚಿಕ್ಕಮಗಳೂರಿಗೆ ಲಗ್ಗೆ ಇಟ್ಟಿವೆ. ಚಿಕ್ಕಮಗಳೂರಲ್ಲಿ ಬೀಡುಬಿಟ್ಟಿರುವ 30ಕ್ಕೂ ಹೆಚ್ಚು ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಅಭಿಮನ್ಯು ತಂಡ (Operation Elephant) ಆಗಮಿಸಿವೆ.

ಅಭಿಮನ್ಯು ನೇತೃತ್ವದಲ್ಲಿ ಬೀಟಮ್ಮ ಗುಂಪಿನ ಆನೆಗಳನ್ನು ಕಾಡಿಗಟ್ಟಲು ಸಿದ್ಧತೆ ನಡೆದಿದೆ. ಚಿಕ್ಕಮಗಳೂರು ಬಳಿಯ ಮತ್ತಾವರಕ್ಕೆ ನಾಗರಹೊಳೆ ಹಾಗೂ ದುಬಾರೆಯಿಂದ ಎಂಟು ಸಾಕಾನೆಗಳು ಬಂದಿವೆ. ಸಾಕಾನೆಗಳಾದ ಅಭಿಮನ್ಯು, ಕರ್ನಾಟಕ ಭೀಮ, ಹರ್ಷ, ಧನಂಜಯ ಹಾಗೂ ಅಶ್ವತ್ಥಾಮ, ಸುಗ್ರೀವರಿಂದ ಮಂಗಳವಾರ ಮಧ್ಯಾಹ್ನದ ನಂತರ ಕಾರ್ಯಾಚರಣೆ ನಡೆಸಲಾಗುತ್ತದೆ.

30 ಕಾಡಾನೆಗಳ ಹಿಂಡು ಸೋಮವಾರ ಇಡೀ ದಿನ ಚಿಕ್ಕಮಗಳೂರು ನಗರದ ವಸತಿ ಶಾಲೆಯ ಬಳಿ ಬೀಡು ಬಿಟ್ಟಿತ್ತು. ಕಳೆದ ರಾತ್ರಿ ಪಟಾಕಿ ಸಿಡಿಸಿ ಕಾಡಿಗಟ್ಟುವ ಪ್ರಯತ್ನವು ವಿಫಲವಾಗಿತ್ತು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸೋಮವಾರ ಸಂಜೆಯಿಂದ ಮಂಗಳವಾರ ಬೆಳಗ್ಗೆ 10 ಗಂಟೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಚಿಕ್ಕಮಗಳೂರು ನಗರದ ಸುತ್ತಮುತ್ತಲಿನ 9 ಗ್ರಾಮಗಳಲ್ಲಿ 144 ಸೆಕ್ಷನ್ ಜಾರಿ‌ ಮಾಡಲಾಗಿತ್ತು. ಇದೀಗ ಬೀಟಮ್ಮ ಟೀಂ ಕೆ.ಆರ್‌.ಪೇಟೆಯ ನೀಲಗಿರಿ ಪ್ಲಾಂಟೇಶನ್ ಬಳಿ ಬಂದಿವೆ. ಇವುಗಳನ್ನು ಕಾಡಿಗಟ್ಟಲು ಸಿದ್ಧತೆ ನಡೆದಿದೆ. ಈ ಕಾರ್ಯಚರಣೆಗಾಗಿ ನೂರಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಹಾಗೂ ನುರಿತ ತಜ್ಞರು, ಅಧಿಕಾರಿಗಳು ಭಾಗಿಯಾಗಿದ್ದಾರೆ.

ಇದನ್ನೂ ಓದಿ: Shivamogga News : ಕಾಡಿಗೆ ಓಡೋಗಿ ಮರಕ್ಕೆ ನೇಣು ಬಿಗಿದುಕೊಂಡ ವಿದ್ಯಾರ್ಥಿನಿ!

ಬೀಟಮ್ಮ ಗ್ಯಾಂಗ್‌ ಸೇರಿರುವ ಭೀಮ

ಭೀಮ ಎಂಬ ಆನೆಯು ಬೀಟಮ್ಮ ಗ್ಯಾಂಗ್ ಸೇರಿದೆ. ಹಿಂದೆಲ್ಲ ಹಲವರನ್ನು ಭೀಮ ಬಲಿ ಪಡೆದಿದ್ದ. ಹೀಗಾಗಿ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ. ಬೇಲೂರಿನಲ್ಲಿ ದಾಂಧಲೆ ಎಬ್ಬಿಸಿದ್ದ ಬೀಟಮ್ಮ ಬೇಲೂರು ಮಾರ್ಗವಾಗಿ ಕೆ.ಆರ್.ಪೇಟೆ ಗ್ರಾಮಕ್ಕೆ ಆಗಮಿಸಿವೆ.

ಉಡುಪಿಯಲ್ಲಿ ನೀರಿನ ಟ್ಯಾಂಕ್‌ಗೆ ಬಿದ್ದ ಚಿರತೆ

ಆಹಾರ ಹುಡುಕುತ್ತಾ ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ನೀರಿನ ಟ್ಯಾಂಕ್‌ಗೆ ಬಿದ್ದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಚಂದಣದಲ್ಲಿ ಈ ಘಟನೆ ನಡೆದಿದೆ. ಚಿರತೆ ಸುದ್ದಿ ಹರಿದಾಡುತ್ತಿದ್ದಂತೆ ಸ್ಥಳೀಯರು ಮುಗಿಬಿದ್ದಿದ್ದರು. ಅರಣ್ಯಾಧಿಕಾರಿಗಳು ಸ್ಥಳೀಯರ ಸಹಕಾರದೊಂದಿಗೆ ಚಿರತೆ ಸೆರೆಹಿಡಿದಿದ್ದಾರೆ. ಉಪವಲಯ ಅರಣ್ಯಾಧಿಕಾರಿ ಸಿದ್ದೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version