ಚಿಕ್ಕಮಗಳೂರು : ಕಾಫಿ ನಾಡಲ್ಲಿ ವರುಣನ ಆರ್ಭಟಕ್ಕೆ (Rain News) ಸೋಮವಾರ (ಸೆ.5) ಅರ್ಧಕರ್ಧ ಗ್ರಾಮ ಮುಳುಗಡೆ ಆಗಿದೆ. ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಗ್ರಾಮದಲ್ಲಿ ಭಾರಿ ಮಳೆಗೆ ಹಲವು ಮನೆಗಳು ಜಲಾವೃತಗೊಂಡಿವೆ.
ಇದ್ದಕ್ಕಿದ್ದಂತೆ ಸುರಿದ ಭಾರಿ ಮಳೆಗೆ ಜನ ಕಂಗಾಲು ಆಗಿದ್ದಾರೆ. ನೋಡು ನೋಡುತ್ತಿದ್ದಂತೆ ಗ್ರಾಮದ ರಸ್ತೆಗಳು ನದಿಯಂತಾಗಿದೆ. ಗ್ರಾಮದ ಅಂಚಿನ ಶೆಟ್ಟಿಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ರಸ್ತೆಯ ಮೇಲೆ ಮಳೆ ನೀರು ಭೋರ್ಗರಿಯುತ್ತಿವೆ.
ಇದನ್ನೂ ಓದಿ | Rain News | ಚಾಮರಾಜ ನಗರದಲ್ಲಿ ಭಾರಿ ಮಳೆ: ಮನೆ ಗೋಡೆ ಕುಸಿದು ಯುವಕ ಸಾವು
ಗ್ರಾಮದ ಇತಿಹಾಸದಲ್ಲೇ ಕಂಡು ಕೇಳರಿಯದ ಈ ಮಳೆಗೆ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಗ್ರಾಮದ ಹೃದಯ ಭಾಗದಲ್ಲಿ ಕೃತಕ ನದಿ ಸೃಷ್ಟಿಯಾಗಿದೆ. ಶೆಟ್ಟಿಕೆರೆ ಗ್ರಾಮದ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗ್ರಾಮದಲ್ಲಿ ಸೃಷ್ಟಿಯಾದ ನೆರೆಗೆ ಸಾವಿರಾರು ಜನರು ಕಂಗಾಲಾಗಿದ್ದಾರೆ.
ದನ್ನೂ ಓದಿ | Rain news| ಕಂಡು ಕೇಳರಿಯದ ಮಳೆಗೆ ನಲುಗಿದ ಚಿಕ್ಕಮಗಳೂರು, ನದಿಯಂತಾದ ರಸ್ತೆಗಳು, ಹೆದ್ದಾರಿಗಳು ಬಂದ್