Site icon Vistara News

Rain News: ಮನೆ ಗೋಡೆ ಕುಸಿದು ವೃದ್ಧೆ ಸಾವು, ಇನ್ನೊಬ್ಬರು ವೃದ್ಧೆ ನೀರು ಪಾಲು

revamma drown

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುವ ಮಳೆಯ ನಡುವೆ (rain news) ಅಡಿಕೆ ತೋಟ ನೋಡಲು ತೆರಳಿದ ವೃದ್ಧೆಯೊಬ್ಬರು ಕಣ್ಮರೆಯಾಗಿದ್ದು, ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಹೊಸಸಿದ್ದರಹಳ್ಳಿ ಗ್ರಾಮದ ರೇವಮ್ಮ (62) ನಾಪತ್ತೆಯಾದವರು. ಇವರು ತಮ್ಮ ಅಡಿಕೆ ತೋಟ ನೋಡಲೆಂದು ಹೋಗಿದ್ದು, ತೋಟದ ಪಕ್ಕದಲ್ಲಿ ತಾಯಿ ಹಳ್ಳವಿದೆ. ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ತಾಯಿ ಹಳ್ಳದ ಬಳಿ‌ ವೃದ್ಧೆಯ ಚಪ್ಪಲಿ, ಉರುಗೋಲು ಪತ್ತೆಯಾಗಿದ್ದು, ಹಳ್ಳದಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ.

ಮನೆ ಗೋಡೆ ಕುಸಿದು ವೃದ್ಧೆ ಸಾವು

ಹಾಸನ: ಹಾಸನ‌ ಜಿಲ್ಲೆಯಲ್ಲಿ ಗಾಳಿ ಮಳೆಗೆ ಮನೆಗೋಡೆ ಕುಸಿದು ವೃದ್ಧೆಯೊಬ್ಬರು ಸಾವಿಗೀಡಾಗಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಡಿ.ಎಂ.ಕುರ್ಕೆ ಗ್ರಾಮದಲ್ಲಿ ಘಟನೆ ನಡೆದಿದೆ.

ಕುಸಿದ ಗೋಡೆಯಡಿ ಸಿಲುಕಿ ಗೌರಮ್ಮ(62) ಸಾವಿಗೀಡಾಗಿದ್ದು, ಪತಿ ನಟರಾಜ್ ಅವರಿಗೆ ಗಂಭೀರ ಗಾಯಗಳಾಗಿವೆ. ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ನಿರ್ಮಾಣ ಹಂತದ ಮನೆಯ ಗೋಡೆ ಕುಸಿದು ಅವಘಡ ಸಂಭವಿಸಿದೆ.

ನಿನ್ನೆ ರಾತ್ರಿ ಮನೆಯೊಳಗೆ ಅಡುಗೆ ಮಾಡುತ್ತಾ ಕುಳಿತಿದ್ದ ಗೌರಮ್ಮ ಅವರ ಮೇಲೆ ಏಕಾಏಕಿ ಗೋಡೆ ಕುಸಿದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಗಾಯಾಳು ಪತಿ ನಟರಾಜ್‌ಗೆ ಅರಸೀಕೆರೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Missing Case: ಒಂದೇ ಠಾಣೆಯಲ್ಲಿ 137 ನಾಪತ್ತೆ ಪ್ರಕರಣ! ಪೊಲೀಸರ ನಿದ್ದೆಗೆಡಿಸಿದ ಮಿಸ್ಸಿಂಗ್‌ ಕೇಸ್‌ಗಳು!

Exit mobile version