Site icon Vistara News

ಹರಿಹರಪುರ ಧರ್ಮಸಭೆ; ಸನಾತನ ಹಿಂದು ಸಮಾಜ ಕಟ್ಟುವುದು ನಮ್ಮೆಲ್ಲರ ಧ್ಯೇಯ ಎಂದ ತ್ರಯಾಚಾರ್ಯರು

ಹರಿಹರಪುರ ಧರ್ಮಸಭೆ

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ದಿವ್ಯ ಕ್ಷೇತ್ರ ಹರಿಹರಪುರದಲ್ಲಿ (Divyakshetra Hariharapura) ಬ್ರಹ್ಮೋತ್ಸವದ ಪ್ರಯುಕ್ತ ಎರಡನೇ ದಿನವಾದ ಶನಿವಾರ ಧರ್ಮಸಭೆ ಏರ್ಪಡಿಸಲಾಗಿತ್ತು. ಹರಿಹರಪುರದ ಪೀಠಾಧೀಶ್ವರರಾದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ದೊಡ್ಡಮಠ ಅರಕಲಗೂಡು ಹಾಗೂ ಬೆಂಗಳೂರಿನ ಶ್ರೀ ಸರ್ಪಭೂಷಣ ಮಠದ ಪೀಠಾಧಿಪತಿಗಳಾದ ಶ್ರೀ ನಿರಂಜನ ಪ್ರಣವ ಮಲ್ಲಿಕಾರ್ಜುನ ಮಹಾಸ್ವಾಮಿ ಹಾಗೂ ಅರಕಲಗೂಡಿನ ಅರೆಮಾದನಹಳ್ಳಿಯ ವಿಶ್ವಕರ್ಮ ಜಗದ್ಗುರು ಪೀಠದ ಪೀಠಾಧಿಪತಿಗಳಾದ ಶಿವಸುಜ್ಞಾನ ತೀರ್ಥ ಮಹಾಸ್ವಾಮಿ ಅವರು ನಂದಾದೀಪವನ್ನು ಬೆಳಗುವ ಮುಖಾಂತರ ಚಾಲನೆ ನೀಡಿದರು.

ವೇದಿಕೆ ಮೇಲೆ ಸಾನಿಧ್ಯ ವಹಿಸಿದ್ದ ತ್ರಯಾಚಾರ್ಯರು ನಾವು ಮೂವರು ಯತಿಗಳು ದೇಹ ಮಾತ್ರ ಬೇರೆಯಾದರೂ ಆತ್ಮದಲ್ಲಿ ನಾವೆಲ್ಲರೂ ಒಬ್ಬರೇ ಆಗಿದ್ದೇವೆ. ನಮ್ಮೆಲ್ಲರ ಚಿಂತನೆ ಒಂದೇ ಆಗಿರುತ್ತದೆ. ಜಾತಿ ಭೇದವನ್ನು ಅಳಿಸಿ ಎಲ್ಲರನ್ನೂ ಒಂದಾಗಿ ಸಮಾನತೆಯಿಂದ ಕಾಣುತ್ತಾ, ಪರಸ್ಪರ ಪ್ರೀತಿ- ವಾತ್ಸಲ್ಯ- ಸ್ನೇಹ ಸೌಹಾರ್ದದಿಂದ ಬಾಳುವಂತಹ ಸದೃಢ ಸನಾತನ ಹಿಂದು ಸಮಾಜವನ್ನು ಕಟ್ಟುವುದು ನಮ್ಮೆಲ್ಲರ ಧ್ಯೇಯವಾಗಿದೆ ಎಂದು ಘೋಷಿಸಿದರು. ಜಗಜ್ಯೋತಿ ಬಸವಣ್ಣನವರು, ವಿಶ್ವಕರ್ಮ, ಆದಿ ಶಂಕರಾಚಾರ್ಯ ಭಗವತ್ಪಾದರು ಎಲ್ಲರೂ ಸಮಾನರು ಎಂಬ ಅಂಶದ ಬಗ್ಗೆ ಸಮಾಜದಲ್ಲಿ ಅರಿವನ್ನು ಮೂಡಿಸಿದ್ದರು. ನಮ್ಮ ಅಭಿಪ್ರಾಯವೂ ಸಮಾನತೆಯ ಸಮಾಜದ ನಿರ್ಮಾಣವೇ ಆಗಿದೆ ಎಂದು ಘೋಷಿಸಿದರು.

ಇದನ್ನೂ ಓದಿ | ರಾಜಮಾರ್ಗ ಅಂಕಣ: ಶ್ರೀರಾಮ ಆಗುವುದು ಕಷ್ಟ, ರಾವಣ ಆಗುವುದು ಕೂಡ ಕಷ್ಟವೇ!

ಶ್ರೀಮಠದ ಆಡಳಿತಾಧಿಕಾರಿಗಳಾದ ಡಾ. ಬಿ.ಎಸ್. ರವಿಶಂಕ ಅವರು ಸ್ವಾಗತ ಹಾಗೂ ಪ್ರಸ್ತಾವಿಕ ನುಡಿಗಳೊಂದಿಗೆ ತ್ರಯಾಚಾರ್ಯರನ್ನು ಹಾಗೂ ಆಗಮಿಸಿದ ಸಮಸ್ತರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಕರಾವಳಿಯ ಪ್ರಸಿದ್ಧ ಕಹಳೆ ನ್ಯೂಸ್‌ನ ಶಾಮ್ ಸುದರ್ಶನ್ ಹಾಗೂ ತೆಲುಗು ಚಿತ್ರರಂಗದ ಪ್ರಸಿದ್ಧ ನಿರ್ಮಾಪಕ ಕೊರ‍್ರಪಾಟಿ ಸಾಯಿರವರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಖ್ಯಾತ ಸಾಹಿತಿ, ಶಿಕ್ಷಣ ತಜ್ಞ, ನಟ ಕಲ್ಕಟ್ಟೆ ನಾಗರಾಜ್, ಖ್ಯಾತ ಕೃಷಿಕ ಕಳಸಾದ ಬಿ.ಕೆ. ಮಂಜಪ್ಪಯ್ಯ ಹಾಗೂ ಹರಿಹರಪುರ ಮಠದ ಆಸ್ಥಾನ ವಿಶ್ವಕರ್ಮರಾದ ನಾಗರಾಜ್ ಆಚಾರ್ ಅವರನ್ನು ತ್ರಯಾಚಾರ್ಯರು ಗೌರವಿಸಿ ಅನುಗ್ರಹಿಸಿ ಸನ್ಮಾನಿಸಿದರು.

Exit mobile version