Site icon Vistara News

Child Honour Award: ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆಗೆ ರಾಜ್ಯ ಮಟ್ಟದ ಬಾಲ ಗೌರವ ಪ್ರಶಸ್ತಿ‌

Thulasi Hegde Child Honour award Bala Yakshagana Bettakoppa

#image_title

ಶಿರಸಿ: ವಿಶ್ವ ಶಾಂತಿಗೆ ಎಂಟು ಪ್ರತ್ಯೇಕ ಯಕ್ಷ ನೃತ್ಯ ರೂಪಕಗಳನ್ನು ನೀಡುತ್ತಿರುವ ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಅವಳಿಗೆ ಮಹಿಳಾ‌ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕರ್ನಾಟಕ ಬಾಲ ವಿಕಾಸ ಅಕಾಡೆಮಿ‌ ನೀಡುವ ರಾಜ್ಯ ಮಟ್ಟದ ಬಾಲ ಗೌರವ ಪ್ರಶಸ್ತಿ‌ (Child Honour Award) ಪ್ರಕಟವಾಗಿದೆ.

ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಎಂಟು ಪ್ರತ್ಯೇಕ ವಿಭಾಗದಲ್ಲಿ ಮಕ್ಕಳ‌ ಪ್ರತಿಭೆ ಗುರುತಿಸಿ ನೀಡಲಾಗುವ ಪ್ರಶಸ್ತಿ ಇದಾಗಿದೆ. ಧಾರವಾಡದಲ್ಲಿ ಮಾ.27 ರಂದು ಪ್ರಶಸ್ತಿ‌ ಪ್ರದಾನ ಸಮಾರಂಭ ನಡೆಯಲಿದೆ.
ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಯಕ್ಷಗಾನ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ ತುಳಸಿ ಹೆಗಡೆ, ಪ್ರಸ್ತುತ ಮಾರಿಕಾಂಬಾ ಸರ್ಕಾರಿ‌ ಪ್ರೌಢಶಾಲೆಯಲ್ಲಿ‌ ಎಂಟನೇ ವರ್ಗ ಓದುತ್ತಿದ್ದಾಳೆ.

ಇದನ್ನೂ ಓದಿ: Rishi Sunak: ಟಿ20 ಚಾಂಪಿಯನ್​ ತಂಡದೊಂದಿಗೆ ಕ್ರಿಕೆಟ್​ ಆಡಿದ ಪ್ರಧಾನಿ ರಿಷಿ ಸುನಕ್; ವಿಡಿಯೊ ವೈರಲ್​

ತಾಲೂಕಿನ ಬೆಟ್ಟಕೊಪ್ಪದ ತುಳಸಿ, ಈಗಾಗಲೇ ರಾಜ್ಯ, ರಾಷ್ಟ್ರದ‌‌ ಮಟ್ಟದ ಅನೇಕ ವೇದಿಕೆಗಳಲ್ಲಿ ವಿಶ್ವ ಶಾಂತಿ ಸರಣಿ ಯಕ್ಷ ನೃತ್ಯ ಪ್ರದರ್ಶಿಸಿ ಗಮನ ಸೆಳೆದಿದ್ದಾಳೆ. ಕಳೆದ ವರ್ಷ ಇಂಡಿಯಾ ಬುಕ್ ಆಫ್ ರೆಕಾರ್ಡ್‌ ಹಾಗೂ ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್‌ ಸೇರಿದಂತೆ ಅನೇಕ‌ ಪ್ರಶಸ್ತಿ ಪುರಸ್ಕಾರಗಳೂ ಈಕೆಗೆ ಸಂದಿವೆ ಎಂಬುದು ಉಲ್ಲೇಖನೀಯ.

ಇದನ್ನೂ ಓದಿ: Amit Shah visit : ಮಾದಕ ದ್ರವ್ಯದ ವಿರುದ್ಧ ತಂತ್ರಜ್ಞಾನ ಸಮರ: ಗೃಹ ಸಚಿವ ಅಮಿತ್‌ ಶಾ ಮಂಡಿಸಿದರು ತ್ರಿಸೂತ್ರ

Exit mobile version