Site icon Vistara News

Chitradurga News: ಮೊಳಕಾಲ್ಮೂರಿಗೆ ಕಲುಷಿತ ನೀರು ಸರಬರಾಜು ಆರೋಪ: ಸ್ಥಳೀಯ ನಿವಾಸಿಗಳಿಂದ ಪ್ರತಿಭಟನೆ

Protest by locals alleging that contaminated water is being supplied to Molakalmuru

ಮೊಳಕಾಲ್ಮೂರು: ರಂಗಯ್ಯನದುರ್ಗ ಜಲಾಶಯದಿಂದ ಮೊಳಕಾಲ್ಮೂರು ಪಟ್ಟಣಕ್ಕೆ ಸರಬರಾಜಾಗುತ್ತಿರುವ ನೀರು ಕಲುಷಿತಗೊಂಡಿದ್ದು (Contaminated water) ಬಳಸಲು ಯೋಗ್ಯವಲ್ಲ ಎಂದು ಆರೋಪಿಸಿ ಪಟ್ಟಣದಲ್ಲಿ ವಿವಿಧ ವಾರ್ಡ್ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ಒಂದೆರೆಡು ವಾರ್ಡ್‌ಗಳಿಗೆ ಮಾತ್ರ ಕೊಳವೆ ಬಾವಿ ನೀರು ಸರಬರಾಜು ಆಗುವುದು ಹೊರತುಪಡಿಸಿದರೆ ಉಳಿದ ವಾರ್ಡ್‌ಗಳ ಜನರು ಜಲಾಶಯದ ನೀರನ್ನೇ ಆಶ್ರಯಿಸಿದ್ದಾರೆ, ರಂಗಯ್ಯನದುರ್ಗ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದರೂ ಈ ನೀರನ್ನು 8-10 ದಿನಗಳಿಗೊಮ್ಮೆ ಸರಬರಾಜು ಮಾಡಲಾಗುತ್ತಿದ್ದು ಇದರಿಂದ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಶ್ರೀರಂಗಪಟ್ಟಣದಲ್ಲಿ ಬೀದಿಗೆ ಬಿದ್ದ ಗದ್ದೆ ರಂಗನಾಥ; ದೇಗುಲ ಕೆಡವಿ ದೇವರನ್ನೇ ಬಯಲಿಗೆ ತಂದ ಅಧಿಕಾರಿಗಳು!

ಪಟ್ಟಣದ ಹೊರವಲಯದಲ್ಲಿರುವ ನೀರು ಶುದ್ಧೀಕರಣ ಘಟಕ ವೈಜ್ಞಾನಿಕವಾಗಿ ನಿರ್ಮಾಣ ಆಗದೇ ಇರುವುದರಿಂದ ಕಲುಷಿತ ನೀರು ಬರುತ್ತಿದೆ, ಸ್ಥಳೀಯ ಪಟ್ಟಣ ಪಂಚಾಯಿತಿ ನೀರಿನ ಮಾದರಿಯನ್ನು ಪರೀಕ್ಷಿಸಬೇಕು ಈ ನೀರನ್ನು ಬಳಸುವುದರಿಂದ ತುರಿಕೆ, ಚರ್ಮರೋಗಗಳಂತಹ ಸಾಂಕ್ರಾಮಿಕ ಕಾಯಿಲೆಗಳು ದಿನೇ ದಿನೇ ಹೆಚ್ಚುತ್ತಿವೆ ಎಂದು ಪಟ್ಟಣದ ನಿವಾಸಿಗಳು ಆರೋಪಿಸಿದ್ದಾರೆ, ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಪಟ್ಟಣ ಪಂಚಾಯಿತಿಗೆ ಮನವಿ ಪತ್ರ ಸಲ್ಲಿಸಿದರು.

ಇದನ್ನೂ ಓದಿ: Wrestlers Protest: ಕುಸ್ತಿಪಟುಗಳ ಸಮಸ್ಯೆಯನ್ನು ಕೇಂದ್ರ ಸೂಕ್ಷ್ಮವಾಗಿ ಗಮನಿಸುತ್ತಿದೆ; ಅನುರಾಗ್ ಠಾಕೂರ್

ಪ್ರತಿಭಟನೆಯಲ್ಲಿ ಪಟ್ಟಣದ ನಿವಾಸಿಗಳಾದ ರಾಘವೇಂದ್ರ ಸಂತೋಷ್ ಮಂಜುನಾಥ್ ನಾಗೇಶ್ ರೇಖಾ ಎರ್ರಿಸ್ವಾಮಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Exit mobile version