ಜಗಳೂರು: ಹಿಂದೂ – ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವನ್ನು (Muharram Festival) ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮಸ್ಥರು ಅದ್ಧೂರಿಯಾಗಿ ಆಚರಿಸಿದರು.
ತಾಲೂಕಿನ ತೊರೆಸಾಲು ಭಾಗದ ಕೇಂದ್ರ ಸ್ಥಾನವಾದ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಸರ್ವ ಸಮುದಾಯಗಳು ಶತ ಶತ ಮಾನಗಳ ಆಚರಿಸಿಕೊಂಡು ಬರುತ್ತಿದ್ದು ಈ ವರ್ಷವೂ ಸಹ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಹಲವು ವರ್ಷಗಳಿಂದಲೂ ನಡೆದುಕೊಂಡ ಬಂದ ಸಂಪ್ರದಾಯದಂತೆ ಗ್ರಾಮದ ಜನರು ಶ್ರದ್ಧಾ ಭಕ್ತಿಯಿಂದ ತಮ್ಮ ಇಷ್ಠಾರ್ಥಗಳನ್ನು ದೇವರಲ್ಲಿ ಪ್ರಾರ್ಥಿಸಿಕೊಂಡರು. ಹೂವಿನ ಹಾರ, ಊದುಬತ್ತಿ, ಲೋಭಾನ, ಸಕ್ಕರೆ ಬೆಲ್, ಪಾನಕ ನೈವೇದ್ಯ ಆರ್ಪಿಸಿದರು.
ಕಳೆದೊಂದು ವಾರದಿಂದ ನಡೆದ ವಿಶೇಷ ಪೂಜೆಗಳಿಗೂ ತೆರೆಬಿದ್ದಿತು.