ಮೊಳಕಾಲ್ಮೂರು: ವಿವಿಧ ಬೇಡಿಕೆಗಳನ್ನು (Various demands) ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘದಿಂದ (Farmers Union) ಪಟ್ಟಣದಲ್ಲಿ ಪ್ರತಿಭಟನೆ (Protest) ನಡೆಸಲಾಯಿತು.
ಭೂ ಕಾಯ್ದೆ , ಎಪಿಎಂಸಿ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇಧಗಳಂತಹ ರೈತ ವಿರೋಧಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು. ಅವೈಜ್ಞಾನಿಕವಾದ ವಿದ್ಯುತ್ ದರ ಹೆಚ್ಚಿಸಿದ್ದು ಅನಗತ್ಯ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕು.
ರೈತರ ಸಾಲ ಮನ್ನಾ ಮಾಡಬೇಕು,ರೈತರ ಪಂಪ್ ಸೆಟ್ ಗಳಿಗೆ ತೆಲಂಗಾಣ ಸರ್ಕಾರದ ರೀತಿ ದಿನದ 24 ಗಂಟೆ ಒಳಗೆ ತ್ರೀ ಫೇಸ್ ವಿದ್ಯುತ್ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಇದನ್ನೂ ಓದಿ: Hero Xtreme : ಹೆಚ್ಚು ತೂಕ, ಹೊಸ ಲುಕ್! ಇನ್ನೇನಿವೆ ಹೊಸ ಹೀರೊ ಎಕ್ಸ್ಟ್ರೀಮ್ 160 ಆರ್4 ವಿ ಬೈಕ್ನಲ್ಲಿ?
ಬಳಿಕ ಮನವಿ ಪತ್ರವನ್ನು ತಹಶೀಲ್ದಾರ್ ಎಂ ವಿ ರೂಪಾ ಅವರಿಗೆ ನೀಡಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ತಾಲೂಕು ಅಧ್ಯಕ್ಷ ಮರ್ಲಹಳ್ಳಿ ರವಿಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.