ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ (Holalkere) ತಾಲೂಕಿನ ರಾಮಗಿರಿ ಹೋಬಳಿಯ ದೊಗ್ಗನಾಳ್ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ದೊಗ್ಗನಾಳ್ ಮತ್ತು ನುಲೇನೂರು ಗ್ರಾಮಗಳ ನಡುವೆ ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿಗೆ (Road construction work) ಶಾಸಕ ಡಾ.ಎಂ.ಚಂದ್ರಪ್ಪ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ರಂಗಾಪುರದಿಂದ ಮಲ್ಲಾಡಿಹಳ್ಳಿ ರಸ್ತೆ ಅಭಿವೃದ್ಧಿಗೆ ಒಂದು ಕೋಟಿ ರೂ. ಗಳನ್ನು ನೀಡಿದ್ದೇನೆ. ಇನ್ನು ಐದು ವರ್ಷಗಳಲ್ಲಿ ಹಂತ ಹಂತವಾಗಿ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ: Gruhajyothi : ಜುಲೈ ತಿಂಗಳ ಫ್ರೀ ಕರೆಂಟ್ ಬಿಲ್ ಸ್ವೀಕರಿಸಲು ರೆಡಿಯಾಗಿ; ಹೊಸ ಬಿಲ್ ಹೇಗಿರುತ್ತೆ ಅಂತ ಇಲ್ಲಿ ನೋಡಿ
ತಾಲೂಕಿನ ಬೊಮ್ಮನಕಟ್ಟೆ, ಬಿ.ದುರ್ಗ ಹಾಗೂ ಹೊಳಲ್ಕೆರೆ ಪಟ್ಟಣದ ಬಳಿ ಗುಡ್ಡಗಳನ್ನು ಆಯ್ಕೆ ಮಾಡಿಕೊಂಡು ಸ್ವಚ್ಚಂದ ಪರಿಸರದಲ್ಲಿ ವಸತಿ ಶಾಲೆ, ಕಾಲೇಜುಗಳನ್ನು ನಿರ್ಮಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿರುವುದಾಗಿ ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: Tourist Spot : ಚಿಕ್ಕಮಗಳೂರು ಪ್ರವಾಸಿ ತಾಣಗಳಿಗೆ ಹೇರಿದ್ದ ನಿಷೇಧ ವಾಪಸ್
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ ನಾಗರಾಜ್, ಸದಸ್ಯರಾದ ಆಶಾ ಪ್ರಕಾಶ್, ಮಹೇಶಣ್ಣ, ಕೃಷ್ಣಮೂರ್ತಿ, ರುದ್ರಪ್ಪ, ರಮೇಶ್ ಗೌಡ ಹಾಗೂ ಗ್ರಾಮದ ಮುಖಂಡರು, ಇತರರು ಪಾಲ್ಗೊಂಡಿದ್ದರು.