ಚಿತ್ರದುರ್ಗ: ನಗರದ ಎಸ್‌ಜೆಎಂ ವಿದ್ಯಾಪೀಠದ ನೂತನ ಕಾರ್ಯನಿರ್ವಹಣಾ ನಿರ್ದೇಶಕರಾಗಿ ವಾಣಿಜ್ಯೋದ್ಯಮಿ ಭರತ್ ಕುಮಾರ್ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಭರತ್ ಕುಮಾರ್, ಮಠದಲ್ಲಿ ಈಗಾಗಲೇ ಆಗಿರುವ ಬೆಳವಣಿಗೆಗೆ ನಾವು ಸಹಕಾರ ನೀಡುತ್ತಾ ಕೆಲಸ ಮಾಡಬೇಕಾಗಿದೆ. ಸರ್ಕಾರದ ಜತೆ ಸೇರಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕು. ಈ ನಿಟ್ಟಿನಲ್ಲಿ ಎಸ್‌ಜೆಎಂ ವಿದ್ಯಾಪೀಠದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.
ಬಸವಪ್ರಭು ಸ್ವಾಮೀಜಿ ಮಾತನಾಡಿ, ಕಷ್ಟಕಾಲದಲ್ಲಿ ನೌಕರ ವರ್ಗ, ಆಡಳಿತ ಮಂಡಳಿ, ಸಲಹಾ ಸಮಿತಿ ಸದಸ್ಯರು ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ. ಶ್ರೀ ಮುರುಘಾರಾಜೇಂದ್ರ ಬೃಹನ್ಮಠವು ಜಾತ್ಯತೀತ ನಿಲುವುಗಳನ್ನು ಇಟ್ಟುಕೊಂಡು ಮುಂದೆ ಸಾಗುತ್ತಿದೆ ಎಂದು ಹೇಳಿದರು.
ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಎಸ್.ಜೆ.ಎಂ. ವಿದ್ಯಾಪೀಠದ ಕಾವ್ಯದರ್ಶಿ ಎಸ್.ಬಿ.ವಸ್ತ್ರಮಠ ಪಟೇಲ್ ಶಿವಕುಮಾರ್, ಎಚ್.ಆನಂದಪ್ಪ ಮತ್ತಿತರರು ಇದ್ದರು.
ಇದನ್ನೂ ಓದಿ | ದತ್ತ ಪೀಠ ವಿವಾದ | ಡಿ.6ರಿಂದ 3 ದಿನ ದತ್ತ ಜಯಂತಿ, ಚಿಕ್ಕಮಗಳೂರಿಗೆ 4000 ಪೊಲೀಸರ ಸರ್ಪಗಾವಲು