Site icon Vistara News

Challakere Election Result : ಚಳ್ಳಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ವಿಜಯೋತ್ಸವ

Congress victory celebration in Challakere constituency

#image_title

ಚಿತ್ರದುರ್ಗ: ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಟಿ. ರಘುಮೂರ್ತಿ ಗೆಲುವು (Challakere Election Result) ದಾಖಲಿಸಿದ್ದಾರೆ. ಅವರು ಸತತ ಮೂರನೇ ಬಾರಿಗೆ ಅತ್ಯಧಿಕ ಮತಗಳನ್ನು ಪಡೆದು ಗೆಲವು ಸಾಧಿಸಿ ಹ್ಯಾಟ್ರಿಕ್ ಹೀರೋ ಆಗಿ ಹೊರ ಮೊಮ್ಮಿದ್ದಾರೆ. ಇವರ ಗೆಲುವಿಗೆ ಕ್ಷೇತ್ರದ ಎಲ್ಲೆಡೆ ಕಾಂಗ್ರೆಸ್‌ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದಾರೆ.

ಪರಶುರಾಂಪುರ ಗ್ರಾಮ ಸೇರಿದಂತೆ ಸುತ್ತ ಮುತ್ತಲ ಹಳ್ಳಿಗಳಾದ ಚೌಳೂರು, ಪರಶುರಾಂಪುರ, ಕ್ಯಾದಿಗುಂಟೆ, ದೊಡ್ಡಚೆಲ್ಲೂರು, ಟಿ.ಎನ್ ಕೋಟೆ ಮತ್ತಿತರೆ ಹಳ್ಳಿಗಳಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಮಹಿಳೆಯರು, ಶಾಲಾ ಕಾಲೇಜು ಯುವಕರು ಸಿಹಿ ಹಂಚಿ, ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸುವ ಮೂಲಕ ವಿಜಯೋತ್ಸವ ಆಚರಿಸುತ್ತಿದ್ದಾರೆ.

ಇದನ್ನೂ ಓದಿ: Karnataka Election Results 2023 : ಬಿಜೆಪಿ ಸೋಲು; ನೈತಿಕ ಹೊಣೆ ಹೊತ್ತು ಸಿಎಂ ಬೊಮ್ಮಾಯಿ ರಾಜೀನಾಮೆ
ಶಾಸಕ ಟಿ. ರಘುಮೂರ್ತಿ ಕಳೆದ ಹತ್ತು ವರ್ಷದಿಂದ ಕ್ಷೇತ್ರದಲ್ಲಿ ರೈತರ ಪರ, ಶೈಕ್ಷಣಿಕ ಹಾಗೂ ನಾನಾ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನ ಮನಗೆದ್ದಿದ್ದಾರೆ. ಜತಗೆ ಇಡೀ ಕ್ಷೇತ್ರದಲ್ಲಿ ಶಾಂತಿಯುತ ವಾತಾವರಣ ಸೃಷ್ಟಿಸುವ ಮೂಲಕ ಮತದಾರರ ಮನ ಗೆದ್ದೆರುವುದಿಂದ ಈ ಭಾರಿಯೂ ಸಹ ವಿಜಯದ ಮಾಲೆ ಜನ ಅವರ ಕೊರಳಿಗೆ ಹಾಕುವ ಮೂಲಕ ಕ್ಷೇತ್ರವನ್ನು ಮತ್ತಷ್ಟು ಕ್ಷೇತ್ರ ಅಭಿವೃದ್ಧಿ ಮಾಡುವ ಕನಸು ಕಾಣುವ ಮೂಲಕ ಕ್ಷೇತ್ರದ ಜನತೆ ಈ ಸಲವೂ ಸಹ ಜನತೆ ಮತ್ತೊಮ್ಮೆ ಅವರ ಕೈ ಹಿಡಿದಿದ್ದಾರೆ.

Exit mobile version