ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ (Chitradurga News) ತಾಲೂಕಿನ ಬಿಜೆಪಿ ಮಂಡಲ ಅಧ್ಯಕ್ಷರಾಗಿರುವ ಸೂರನಹಳ್ಳಿ ಶ್ರೀನಿವಾಸ್ ಅವರ ಮೇಲೆ ಕಿಡಿಗೇಡಿಗಳು ಭಾನುವಾರ ಹಲ್ಲೆ ನಡೆಸಿದ್ದಾರೆ. ಈ ವಿಚಾರವನ್ನು ಖಂಡಿಸಿರುವ ಬಿಜೆಪಿ ಕಾರ್ಯಕರ್ತರು ತಡರಾತ್ರಿಯಲ್ಲಿ ತುರನೂರು ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ದು, ಹಲ್ಲೆ ನಡೆಸಿದ ಅಪರಾಧಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಬಂಧಿಸದೇ ಇದ್ದರೆ ಚಳ್ಳಕೆರೆ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.
ಏನಿದು ಪ್ರಕರಣ?
ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಸೂರನಳ್ಳಿ ಶ್ರೀನಿವಾಸ್ ಅವರು ಭಾನುವಾರ ರಾತ್ರಿ 9:30 ಸುಮಾರಿಗೆ ಪ್ರಚಾರಕ್ಕೆ ತೆರಳುವ ಸಂದರ್ಭದಲ್ಲಿ ತೂರುವನೂರು ಹೋಬಳಿಯ ಬೆಳಗಟ್ಟ ರಸ್ತೆ ಮಧ್ಯದಲ್ಲಿ ಶ್ರೀನಿವಾಸ್ ಅವರ ಕಾರನ್ನು ಕಿಡಿಗೇಡಿಗಳು ಅಡ್ಡಗಟ್ಟಿದ್ದಾರೆ. ನಂತರ ಶ್ರೀನಿವಾಸ್ ಅವರ ಮೇಲೆ ಮಚ್ಚು, ಚೂರಿ, ರಾಡುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಾಯಾಳುವಾಗಿದ್ದ ಶ್ರೀನಿವಾಸ್ ಅವರನ್ನು ತಕ್ಷಣ ತುರುವನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ತಾಲೂಕು ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿ ಅನಿಲ್ ಕುಮಾರ್ ಮತ್ತು ಬಾಳೆ ಮಂಡಿ ರಾಮದಾಸ್ ಅವರ ನೇತೃತ್ವದಲ್ಲಿ ತುರುವನೂರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಹಲ್ಲೆ ಮಾಡಿದವರನ್ನು ಬಂಧಿಸಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: Karnataka Election 2023: ಚುನಾವಣೆ ಅಶಯ: ಕಳೆಯಿಲ್ಲದ ಕರಾವಳಿ ಕರ್ನಾಟಕ ಹೊಳೆಯುವುದು ಹೇಗೆ?
ಚಳ್ಳಕೆರೆ ಬಂದ್ ಮಾಡುತ್ತೇವೆ
ಬಿಜೆಪಿ ಎಸ್‌ಟಿ ರಾಜ್ಯ ಕಾರ್ಯದರ್ಶಿ ಮಾಂತೇಶ ನಾಯಕ ಮಾತನಾಡಿ, “ಕರ್ನಾಟಕ ಮಂಡಲದ ಅಧ್ಯಕ್ಷರಾದ ಸೂರನಹಳ್ಳಿ ಶ್ರೀನಿವಾಸ್ ಅವರ ಮೇಲೆ ಅಲ್ಲಿ ಖಂಡಿಸಿ ಚಳ್ಳಕೆರೆ ಬಿಜೆಪಿ ಅಭ್ಯರ್ಥಿಯಾದ ಆರ್. ಅನಿಲ್ ಕುಮಾರ್ ಅವರು ತುರುವನೂರು ಪೊಲೀಸ್ ಠಾಣೆ ಬಳಿ ಧರಣಿ ಕೂತಿದ್ದಾರೆ. ಸೋಮವಾರ ಬೆಳಿಗ್ಗೆ ಕಿಡಿಗೇಡಿಗಳನ್ನು ಬಂಧಿಸಿದೆ ಹೋದರೆ ಚಳ್ಳಕೆರೆ ಬಂದ್‌ಗೆ ಕರೆ ನೀಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.