Site icon Vistara News

Chitradurga News: ಜಾತಿಗಣತಿ ವರದಿ ಬಿಡುಗಡೆಗೆ ರಾಜ್ಯ ಸರ್ಕಾರಕ್ಕೆ ಆಗ್ರಹ

Chitradurga News Demand for release of caste census report at Holalkere

ಹೊಳಲ್ಕೆರೆ: ದಶಕಗಳಿಂದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ತುಳಿಯಲ್ಪಟ್ಟ ಅತೀ ಹಿಂದುಳಿದ ಜಾತಿಗಳನ್ನು ಮುನ್ನಲೆಗೆ ತರಲು ರಾಜ್ಯ ಸರ್ಕಾರ (State Government) ಕೂಡಲೇ ಜಾತಿಗಣತಿ ವರದಿಯನ್ನು (Caste Census Report) ಬಿಡುಗಡೆ ಮಾಡಬೇಕು ಎಂದು ರಾಜ್ಯದ ಅತೀ ಹಿಂದುಳಿದ ಜಾತಿಗಳ ಒಕ್ಕೂಟವು ಆಗ್ರಹಿಸಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಸದಸ್ಯರಾದ ಚೇತನ್ ಕಣಿವೇಹಳ್ಳಿ, ಎ.ಚಿತ್ತಪ್ಪ ಯಾದವ್ ಹಾಗೂ ಇತರರು ಮಾತನಾಡಿ, ಅತೀ ಹಿಂದುಳಿದ ಜಾತಿಗಳಿಗೆ ರಾಜಕೀಯವಾಗಿ ಮೀಸಲಾತಿ ದೊರಕಬೇಕಾದರೆ, ನ್ಯಾಯ ಸಿಗಬೇಕಾದರೆ ಜಾತಿ ಗಣತಿ ವರದಿಯು ಪ್ರಮುಖ ಆಧಾರವಾಗಿದೆ. ಆದ್ದರಿಂದ ಕೂಡಲೇ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿ, ಸಾಮಾಜಿಕ ನ್ಯಾಯವನ್ನು ಅತೀ ಹಿಂದುಳಿದ ಜಾತಿಗಳಿಗೆ ನೀಡಬೇಕು ಎಂದು ಒಕ್ಕೂಟವು ಆಗ್ರಹಿಸುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Cycling Benefits: ಒಂದಷ್ಟು ಹೊತ್ತು ಸೈಕಲ್‌ ಹೊಡೆಯಿರಿ, ಉತ್ತಮ ಆರೋಗ್ಯ ಖಚಿತ!

ಈ ಸಂದರ್ಭದಲ್ಲಿ ಒಕ್ಕೂಟದ ಸದಸ್ಯರಾದ ವೇದಮೂರ್ತಿ, ಪ್ರವೀಣ್, ಮಂಜುನಾಥ್, ನಟರಾಜ್, ಮಲ್ಲಿಕಾರ್ಜುನ, ಪ್ರಕಾಶ್, ಪ್ರಸನ್ನ ಕುಮಾರ್, ಮೋಹನ್ ಕುಮಾರ್, ಸುರೇಶ್, ಲೋಹಿತ್ ಕುಮಾರ್, ರಂಗಸ್ವಾಮಿ ಸೇರಿದಂತೆ ಇತರೆ ಮುಖಂಡರುಗಳು ಭಾಗವಹಿಸಿದ್ದರು.

Exit mobile version