Site icon Vistara News

Chitradurga News: ಮನೆ ಬಾಗಿಲಿಗೆ ಇ-ಸ್ವತ್ತು ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಎಚ್.ಆರ್.ನಾಗರತ್ನ

asset account movement in Holalkere

ಹೊಳಲ್ಕೆರೆ: ಪುರಸಭೆಯು ಮನೆ ಬಾಗಿಲಿಗೆ ಬಂದು ಇ-ಸ್ವತ್ತು (E-Asset) ಮಾಡಿಕೊಡಲಿದೆ. ಜನರು ಈ ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪುರಸಭೆ ಸದಸ್ಯೆ ಎಚ್.ಆರ್.ನಾಗರತ್ನ ವೇದಮೂರ್ತಿ (Chitradurga News) ತಿಳಿಸಿದರು.

ಪಟ್ಟಣದ 1ನೇ ವಾರ್ಡ್ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಪುರಸಭೆಯಿಂದ ಮನೆ ಬಾಗಿಲಿಗೆ ಇ-ಆಸ್ತಿ ಖಾತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ಇದನ್ನೂ ಓದಿ:UPI service: ಶ್ರೀಲಂಕಾ, ಮಾರಿಷಸ್‌ನಲ್ಲಿ ಭಾರತೀಯ ಯುಪಿಐ ಸೇವೆ ಆರಂಭ

ಸಾರ್ವಜನಿಕರು ತಮ್ಮ ಸ್ವತ್ತುಗಳ ಸುರಕ್ಷತೆಗೆ ಖಾತೆಗಳು ಪ್ರಮುಖವಾಗಿದ್ದು, ಸ್ವತ್ತುಗಳನ್ನು ಡಿಜಿಟಲ್ ಮಾದರಿಯಲ್ಲಿ ಇ-ಸ್ವತ್ತಿಗೆ ಒಳಪಡಿಸಲು ಪುರಸಭೆ ಮುಂದಾಗಿದೆ. ಅದು ಮನೆ ಬಾಗಿಲಿಗೆ ಬಂದು ಸೇವೆ ನೀಡಲು ಜಾಗೃತಿ ಆಂದೋಲನ ನಡೆಸಿದೆ. ಸಾರ್ವಜನಿಕರು ತಮ್ಮ ಸ್ವತ್ತುಗಳ ಮಾಹಿತಿ ನೀಡಿ ಇ-ಖಾತೆ ಪಡೆದುಕೊಳ್ಳಲು ಇದು ಉತ್ತಮ ಅವಕಾಶ ಎಂದರು.

ಪುರಸಭೆ ಮುಖ್ಯಾಧಿಕಾರಿ ಎ.ವಾಸಿಂ ಮಾತನಾಡಿ, ಸಾರ್ವಜನಿಕರಿಗೆ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಲು ವಾರ್ಡ್‌ಗಳಲ್ಲಿ ಜಾಗೃತಿ ಅಂದೋಲನವನ್ನು ಕೈಗೊಂಡಿದೆ. ಜನರು ಕಚೇರಿ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಮನೆ ಭಾಗಿಲಿಗೆ ಬಂದು ಇ-ಸ್ವತ್ತು ಮಾಡಿಕೊಡುತ್ತೇವೆ. ಜನರು ಮನೆ ಬಾಗಿಲಿನಲ್ಲಿ ತಮ್ಮಲ್ಲಿರುವ ದಾಖಲೆ ಸಲ್ಲಿಸಿ ಇ-ಸ್ವತ್ತು ಪಡೆದುಕೊಳ್ಳಬೇಕೆಂದರು.

ಇದನ್ನೂ ಓದಿ: Star Fruit Benefits: ಕರಿಮಾದಲ ಹಣ್ಣು ಸೇವನೆಯಿಂದ ಎಷ್ಟೊಂದು ಲಾಭ!

ಈ ಸಂದರ್ಭದಲ್ಲಿ ವ್ಯವಸ್ಥಾಪಕಿ ರಾಧ, ನೌಶಾದ್, ನಾಗಭೂಷಣ್‌, ವಿನಯ್, ಹಾಲೇಶ್, ಮಲ್ಲಿಕಾರ್ಜುನ್, ರುದ್ರಮ್ಮ, ಅನ್ನಪೂರ್ಣಮ್ಮ, ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version