Site icon Vistara News

Chitradurga News: ಕನ್ನಡಪರ ಚಟುವಟಿಕೆಗಳಿಗೆ ಹಣಕ್ಕಿಂತ ಕನ್ನಡ ಮನಸ್ಸುಗಳು ಬೇಕು: ಎನ್.ಶಿವಮೂರ್ತಿ

Inauguration of Kannada Bhavan at Ramgiri Hobali Kannada Primary School at holalkere

ಹೊಳಲ್ಕೆರೆ: ಕನ್ನಡ ಸಾಹಿತ್ಯ ಪರಿಷತ್ತು (kannada Sahitya Parishath) ಸರ್ವ ಜನರ ಪರಿಷತ್ತು ಆಗಬೇಕು. ಕನ್ನಡಪರ ಚಟುವಟಿಕೆಗಳನ್ನು ನಡೆಸಲು ಹಣಕ್ಕಿಂತಲೂ ಇಂದು ಕನ್ನಡ ಮನಸ್ಸುಗಳು ಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಹೊಳಲ್ಕೆರೆ ಅಧ್ಯಕ್ಷ ಎನ್.ಶಿವಮೂರ್ತಿ ಅಭಿಪ್ರಾಯಪಟ್ಟರು. ರಾಮಗಿರಿ ಹೋಬಳಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಭವನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸಾಹಿತ್ಯ ಪರಿಷತ್ತು ಮಕ್ಕಳು, ಮಹಿಳೆಯರು, ಕಾರ್ಮಿಕರನ್ನು ಒಳಗೊಂಡು ಸಮಾಜದ ಎಲ್ಲ ಜನ ವರ್ಗಗಳನ್ನು ಒಳಗೊಂಡು ಮುನ್ನಡೆಯಬೇಕು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ದತ್ತಿ ಉಪನ್ಯಾಸಗಳ ಜತೆ ಸ್ಥಳೀಯ ಕಲಾವಿದರ ಪ್ರೋತ್ಸಾಹಿಸಲು ಜಾನಪದ, ಸ್ಥಳೀಯ ಕಲೆ ಸಂಸ್ಕೃತಿ ಬಿಂಬಿಸುವ ರಂಗನೃತ್ಯ, ಕಂಸಾಳೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ಇದನ್ನೂ ಓದಿ: Theft Case : ಟೀಯಲ್ಲಿ ನಿದ್ರೆ ಮಾತ್ರೆ ಹಾಕಿ ಚಿನ್ನಾಭರಣ ಲೂಟಿ!

ಡಿಸೆಂಬರ್ ತಿಂಗಳಲ್ಲಿ ಸಾಣೆಹಳ್ಳಿಯಲ್ಲಿ ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಅವಳಿ ಜಿಲ್ಲೆಗಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಸಾಂಸ್ಕೃತಿಕ ಸಾಹಿತ್ಯಿಕ ಕಾರ್ಯಕ್ರಮಗಳ ಜತೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕಾರ್ಯಯೋಜನೆ ನಡೆಸಬೇಕಾಗಿದೆ. ಇದಕ್ಕೆ ರಾಮಗಿರಿ ಭಾಗದ ಎಲ್ಲ ಕನ್ನಡಪರ ಮನಸ್ಸುಗಳು ಸಹಕರಿಸಬೇಕು ಎಂದು ಹೇಳಿದರು.

ರಾಮಗಿರಿ ಹೋಬಳಿ ಕಸಾಪ ಅಧ್ಯಕ್ಷ ಜಿ.ದೇವರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಕೇವಲ ಪಟ್ಟಣ ನಗರಗಳಿಗೆ ಸೀಮಿತವಾಗಬಾರದು ಹಳ್ಳಿಗಳಿಗೂ ಪಸರಿಸಬೇಕು ಎಂಬ ಉದ್ದೇಶದಿಂದ ಹೊಳಲ್ಕೆರೆ ತಾಲೂಕಿನಲ್ಲಿ ಹೋಬಳಿ ಘಟಕಗಳನ್ನು ಆರಂಭಿಸಿರುತ್ತೇವೆ. ಇಂದು ರಾಮಗಿರಿಯಲ್ಲಿ ಕನ್ನಡ ಸಾಹಿತ್ಯ ಚಟುವಟಿಕೆಗಳಿಗಾಗಿ ಕನ್ನಡ ಭವನ ಉದ್ಘಾಟನೆ ಮಾಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: Asian Games: ಐತಿಹಾಸಿಕ ಚಿನ್ನ ಗೆದ್ದ ಚಿರಾಗ್‌-ಸಾತ್ವಿಕ್‌ ಜೋಡಿ; ಶತಕದ ಗಡಿ ದಾಟಿದ ಪದಕ ಸಂಖ್ಯೆ

ಕಾರ್ಯಕ್ರಮದಲ್ಲಿ ಕಸಾಪ ಹೊಳಲ್ಕೆರೆ ಕಾರ್ಯದರ್ಶಿ ಎನ್.ನಾಗೇಶ್, ಕೆ.ಎಸ್.ಸೋಮಶೇಖರ್ ಮಾತನಾಡಿದರು. ಕಸಾಪ ಅಧ್ಯಕ್ಷರಾದ ಎನ್.ಶಿವಮೂರ್ತಿ, ಹೋಬಳಿ ಘಟಕದ ಅಧ್ಯಕ್ಷರಾದ ಜಿ.ದೇವರಾಜು ತಾಳಿಕಟ್ಟೆ, ಕಾರ್ಯದರ್ಶಿ ಬಡ್ತಿ ಮುಖ್ಯೋಪಾಧ್ಯಾಯ ಗಂಗಾಧರಪ್ಪ, ಮುಖ್ಯೋಪಾಧ್ಯಾಯ ಆರ್.ಎಸ್ ತಿಮ್ಮಯ್ಯ, ಡಿ.ಸಿದ್ದಪ್ಪ, ಕೆ.ಎಸ್. ಸೋಮಶೇಖರ, ಶಾಲಾ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ವರ್ತಕ ಮಲ್ಲಾರಾಂ, ಕಸಾಪ ಸಂಘಟನಾ ಕಾರ್ಯದರ್ಶಿ ಎಸ್.ತಿಪ್ಪೇಸ್ವಾಮಿ, ಎಸ್.ಬಂಗಾರಪ್ಪ ಹೊಳಲ್ಕೆರೆ, ಶಿಕ್ಷಕರಾದ ಪ್ರವೀಣಕುಮಾರ, ಮಾದಪ್ಪ, ಓ.ಆರ್.ಪುಷ್ಪಲತಾ ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version