Site icon Vistara News

Chitradurga News: ಜನತಾ ದರ್ಶನ ಕಾರ್ಯಕ್ರಮ ಸದುಪಯೋಗಪಡಿಸಿಕೊಳ್ಳಿ: ಸಚಿವ ಡಿ. ಸುಧಾಕರ್

Janatha Darshan programme inauguration by Minister D.Sudhakar at Holalkere

ಹೊಳಲ್ಕೆರೆ: ಸರ್ಕಾರದ ಗ್ಯಾರಂಟಿ ಸೇರಿ ವಿವಿಧ ಯೋಜನೆ, ಸೌಲಭ್ಯಗಳು ಜನರಿಗೆ ತ್ವರಿತಗತಿಯಲ್ಲಿ ತಲುಪಿಸುವ ಉದ್ದೇಶದಿಂದ ಜನತಾ ದರ್ಶನ (Janatha Darshan) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.

ಪಟ್ಟಣದ ಸಂವಿಧಾನ ಸೌಧದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆಗಳು ಹಮ್ಮಿಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಜನರ ಕಲ್ಯಾಣಕ್ಕೆ ಮುಂದಾಗಿದೆ. ಗ್ರಾಮೀಣ ಜನರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಜನರ ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಲು ಜನತಾ ದರ್ಶನ ಕಾರ್ಯಕ್ರಮ ರೂಪಿಸಿದೆ. ಜನರ ಕುಂದುಕೊರತೆ ಪರಿಹರಿಸಲು ಆಧಿಕಾರಿಗಳಿಗೆ ಸೂಚಿಸಿದೆ. ಅಧಿಕಾರಿಗಳು ಜನರ ಭಾವನೆಗೆ ಸ್ಪಂದಿಸಿ ಸರ್ಕಾರಿ ಸೌಲಭ್ಯಗಳನ್ನು ತಲುಪಿಸಬೇಕು. ಕಚೇರಿಗೆ ಅಲೆದಾಟವನ್ನು ತಪ್ಪಿಸಬೇಕು.

ಇದನ್ನೂ ಓದಿ: Raichur News: ಲಿಂಗಸುಗೂರಿನ ಸರ್ಕಾರಿ ಶಾಲೆಯಲ್ಲಿ ಹಳ್ಳಿ ಸೊಗಡು ಅನಾವರಣ

ಪ್ರತಿಯೊಬ್ಬರು ಸಮಾಜ ಮುಖ್ಯವಾಹಿನಿಗೆ ಬರಲು ಸರ್ಕಾರದ ಸಮಗ್ರ ಸೌಲಭ್ಯಗಳನ್ನು ಜನರು ಸದ್ಭಳಕೆ ಮಾಡಿಕೊಳ್ಳಬೇಕು. ಅಧಿಕಾರಿಗಳು, ಜನರು ಸಲ್ಲಿಸಿರುವ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಹಳ್ಳಿ ಹಂತದ ಸಮಸ್ಯೆಗಳು ಜಿಲ್ಲೆಯ ತನಕ ಬರುವುದು ಬೇಡವೆಂದು ಸರ್ಕಾರವು ಜನತಾ ದರ್ಶನ ಕಾರ್ಯಕ್ರಮ ರೂಪಿಸಿದೆ. ಜನರು ತಮ್ಮ ಸಮಸ್ಯೆಗಳನ್ನು ಗಣಕೀಕೃತ ಯಂತ್ರದಲ್ಲಿ ದಾಖಲಿಸಿದಲ್ಲಿ 1 ತಿಂಗಳೊಳಗಾಗಿ ಪರಿಹರಿಸಲಾಗುತ್ತದೆ. ಎಲ್ಲವೂ ನಿಮಗೆ ಮಾಹಿತಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ 7 ಕಡೆ ಜನತಾದರ್ಶನ ನಡೆಸಿದ್ದು 1585 ಅರ್ಜಿ ಬಂದಿವೆ. 1286 ಅರ್ಜಿ ವಿಲೆ ಮಾಡಿದೆ. 291 ಅರ್ಜಿ ಬಾಕಿ ಇವೆ. 144 ಅರ್ಜಿ ಕಂದಾಯ ಇಲಾಖೆಗೆ, 156 ಅರ್ಜಿ ವಿವಿಧ ಇಲಾಖೆಗೆ ಸೇರಿವೆ. ಅರ್ಜಿಗಳನ್ನು ನಿತ್ಯ ಪರಿಶೀಲಿಸಿ ಪಾರದರ್ಶಕವಾಗಿ ಪರಿಹಾರ ನೀಡುತ್ತೇವೆ. ರೈತರಿಗೆ ಬರಗಾಲದ ಪರಿಹಾರಕ್ಕೆ ಸರ್ಕಾರದ ಹೊಸ ತಂತ್ರಾಂಶ ಸಿದ್ದವಾಗಿದೆ. ಶ್ರೀಘದಲ್ಲಿ ಪರಿಹಾರ ಬಿಡುಗಡೆಗೆ ಎಲ್ಲಾ ಕ್ರಮ ವಹಿಸಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಾಸಕ ಡಾ. ಎಂ.ಚಂದ್ರಪ್ಪ ಮಾತನಾಡಿದರು.

ಇದನ್ನೂ ಓದಿ: Coronavirus News: 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ; ರಾಜ್ಯ ಸರ್ಕಾರ ಸಲಹೆ

ಈ ವೇಳೆ ಜಿ.ಪಂ. ಸಿಎಸ್ ಸೋಮಶೇಖರ್, ಎಸಿ ಕಾರ್ತಿಕ್, ಎಎಸ್ಪಿ ಕುಮಾರಸ್ವಾಮಿ, ಪುರಸಭೆ ಸದಸ್ಯರಾದ ಎಚ್.ಆರ್. ನಾಗರತ್ನ ವೇದಮೂರ್ತಿ, ಪಿ.ಆರ್. ಮಲ್ಲಿಕಾರ್ಜುನ್, ಡಿ.ಎಸ್.ವಿಜಯ್, ಕೆ.ಸಿ.ರಮೇಶ್, ಬಿ.ಎಸ್.ರುದ್ರಪ್ಪ, ಸೈಯದ್ ಸಜೀಲ್, ವಿಜಯ ಸಿಂಹಖಟ್ರೋತ್, ಸೈಯದ್ ಮನ್ಸೂರು, ಪಿ.ಎಚ್.ಮುರುಗೇಶ್, ಆರ್.ಎ.ಆಶೋಕ್, ಪುರಸಭೆ ಮುಖ್ಯಾಧಿಕಾರಿ ಎ.ವಾಸಿ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು. ತಹಸೀಲ್ದಾರ್ ಬೀಬಿ ಪಾತೀಮಾ ಸ್ವಾಗತಿಸಿದರು.

Exit mobile version