Site icon Vistara News

Chitradurga News: ಸದೃಢ ಆರೋಗ್ಯದತ್ತ ಗಮನ ಕೊಡಿ: ಸಚಿವ ಡಿ. ಸುಧಾಕರ್

Minister D Sudhakar inaugurated a free health camp in Hiriyur

ಹಿರಿಯೂರು: ಆರೋಗ್ಯ (Health) ಕಾಪಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದ್ದು, ಪ್ರತಿಯೊಬ್ಬರೂ (Everyone) ಸದೃಢ ಆರೋಗ್ಯದತ್ತ ಗಮನಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ಜಿಲ್ಲಾ ಮತ್ತು ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ, ಕೆಂಪೇಗೌಡ ಪತ್ತಿನ ಸಹಕಾರ ಸಂಘ, ಬಸವರಾಜ್ ನರ್ಸಿಂಗ್ ಕಾಲೇಜ್, ರೋಟರಿ, ಇನ್ನರ್ ವೀಲ್, ಲಯನ್ಸ್ ಕ್ಲಬ್ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ದಿನೇ ದಿನೇ ಪರಿಸರ ನಾಶದಿಂದ ಕಲುಷಿತ ವಾತಾವಾರಣ ಸೃಷ್ಟಿಯಾಗುತ್ತಿದ್ದು, ಅದು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಜೀವನ ಶೈಲಿಯಲ್ಲಿನ ಹಲವು ತಪ್ಪುಗಳು ಮನುಷ್ಯನನ್ನು ಅನಾರೋಗ್ಯಕ್ಕೆ ತಳ್ಳುತ್ತಿದೆ.

ಇದನ್ನೂ ಓದಿ: Karnataka CET, NEET UG Counselling 2023: ಎರಡನೇ ಸುತ್ತಿನ ಆಪ್ಷನ್ ಎಂಟ್ರಿ ಆರಂಭ, ಈ ಸ್ಟೆಪ್ಸ್ ಫಾಲೋ ಮಾಡಿ…

ಸಾಧ್ಯವಾದಷ್ಟು ಶಿಸ್ತಿನ ಜೀವನ ನಡೆಸುತ್ತಾ, ಪೌಷ್ಟಿಕಾಂಶಯುಕ್ತ ಆಹಾರ ಬಳಸುತ್ತಾ ಎಲ್ಲರೂ ಸದೃಢ ಆರೋಗ್ಯದತ್ತ ಗಮನ ನೀಡಬೇಕು. ಆರೋಗ್ಯವಂತರ ಸಂಖ್ಯೆಯ ಆಧಾರದ ಮೇಲೆ ದೇಶದ ಅಭಿವೃದ್ಧಿಯು ಸಾಧ್ಯವಾಗುವುದು ಎಂದು ತಿಳಿಸಿದರು.

ಇದೇ ರೀತಿ ಇನ್ನೂ ಹೆಚ್ಚಿನ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಏರ್ಪಡಲಿ. ತಾಲೂಕಿನ ನಾಗರೀಕರು ಇಂತಹ ಆರೋಗ್ಯ ಮೇಳಗಳ ಸದುಪಯೋಗ ಪಡೆದುಕೊಳ್ಳಲಿ ಎಂದು ಹೇಳಿದರು.

ಈ ವೇಳೆ ನಗರ ಭಾಗದ ಮತ್ತು ಹಳ್ಳಿಗಳಿಂದ ಆಗಮಿಸಿದ್ದ ನೂರಾರು ನಾಗರೀಕರು ಉಚಿತ ಆರೋಗ್ಯ ತಪಾಸಣಾ ಶಿಬಿರದ ಲಾಭ ಪಡೆದರು.

ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕೀಲು ಮೂಳೆ, ಬಿಪಿ ಶುಗರ್, ಕಣ್ಣಿನ ತಪಾಸಣೆ, ಚರ್ಮ, ವಿವಿಧ ಆರೋಗ್ಯ ಸಮಸ್ಯೆ ತಪಾಸಣೆ ನಡೆಸಲಾಯಿತು.

ಇದನ್ನೂ ಓದಿ: Aditya L1 Mission: ಸೂರ್ಯಯಾನಕ್ಕೆ ಆದಿತ್ಯ ಎಲ್‌ 1 ಮಿಷನ್‌ ರೆಡಿ; ತಾಲೀಮು ಅಂತ್ಯ, ಉಡಾವಣೆಯೊಂದೇ ಬಾಕಿ

ಈ ಸಂದರ್ಭದಲ್ಲಿ ಶಿಬಿರದ ಆಯೋಜಕ, ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಂದಿಕೆರೆ ಜಗದೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಕೆಪಿಸಿಸಿ ಸದಸ್ಯ ಅಮೃತೇಶ್ವರ ಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗೇಂದ್ರ ನಾಯ್ಕ, ಮುಖಂಡರಾದ ಗಿಡ್ಡೋಬನಹಳ್ಳಿ ಅಶೋಕ್, ಫಕ್ರುದ್ದೀನ್, ಮಹಂತೇಶ್, ನಗರಸಭೆ ಮಾಜಿ ಅಧ್ಯಕ್ಷೆ ಗೀತಾ ಗಂಗಾಧರ್, ಸದಸ್ಯರಾದ ಮೊದಲ ಮರಿಯಾ, ಕವಿತಾ, ಪದ್ಮಾವತಿ, ವಕೀಲ ಶಿವಕುಮಾರ್, ರಂಗಸ್ವಾಮಿ, ಬಬ್ಬೂರು ಹೇಮಂತ್, ಗಿರೀಶ್, ಶಿವಕುಮಾರ್, ಗುರುಪ್ರಸಾದ್ ಹಾಗೂ ಆಶಾ ಕಾರ್ಯಕರ್ತೆಯರು, ಬಸವರಾಜ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.

Exit mobile version