ಹೊಳಲ್ಕೆರೆ: ತಾಲೂಕು ಆಡಳಿತದ ವತಿಯಿಂದ ಬುಧವಾರ ತಾಲೂಕು ಕಛೇರಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು (Sri Krishna Janmashtami) ಆಚರಿಸಲಾಯಿತು.
ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಶಾಸಕ ಡಾ. ಎಂ ಚಂದ್ರಪ್ಪ ಅವರು ಉದ್ಛಾಟಿಸಿದರು.
ಬಳಿಕ ಮಾತನಾಡಿದ ಅವರು, ಶ್ರೀ ಕೃಷ್ಣ ಅಧರ್ಮವನ್ನು ಮಟ್ಟ ಹಾಕಿ ಧರ್ಮವನ್ನು ಉಳಿಸುತ್ತಾ ಬಂದಿದ್ದಾನೆ. ಕೃಷ್ಣನ ಬಗ್ಗೆ ಎಷ್ಟು ಗುಣಗಾನ ಮಾಡಿದರೂ ಸಾಲದು ಎಂದು ತಿಳಿಸಿದರು.
ಇದನ್ನೂ ಓದಿ: Chandrayaan 3: ಚಂದ್ರನ ಅಂಗಳದಲ್ಲಿ ವಿಕ್ರಮನ ಬೆನ್ನತ್ತಿದ ನಾಸಾ; ಲ್ಯಾಂಡಿಂಗ್ ಫೋಟೊಗಳೂ ರಿಲೀಸ್
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ತಪ್ಪ ಮಾತನಾಡಿ. ನಮ್ಮ ದೇಶದಲ್ಲಿ ಅಲ್ಲದೇ ವಿದೇಶಗಳಲ್ಲೂ ಶ್ರೀಕೃಷ್ಣನನ್ನು ಆರಾಧಿಸುವ ಅಪಾರ ಭಕ್ತರು ಇದ್ದಾರೆ, ಇಡೀ ಜಗತ್ತೆ ಶ್ರೀ ಕೃಷ್ಣನ ಬಗ್ಗೆ ಅಪಾರವಾದ ಭಕ್ತಿ ಗೌರವ ಹೊಂದಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಉಮೇಶ್ ವಿಶೇಷ ಉಪನ್ಯಾಸ ನೀಡಿ, ಮಾತನಾಡಿದರು.
ಇದನ್ನೂ ಓದಿ: National Nutrition Week 2023: ಈ ಆಹಾರಗಳ ಬಗ್ಗೆ ಎಷ್ಟೊಂದು ಡೌಟ್! ಯಾವುದು ಸತ್ಯ? ಯಾವುದು ಸುಳ್ಳು?
ಈ ಸಂದರ್ಭದಲ್ಲಿ ತಹಸೀಲ್ದಾರ್ ಬಿಬಿ ಫಾತೀಮಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ, ಪುರಸಭೆ ಮುಖ್ಯಾಧಿಕಾರಿ ವಾಸೀಂ, ಬಿಸಿಎಂ ಇಲಾಖೆಯ ಪ್ರದೀಪ್. ಯಾದವ ಸಮಾಜದ ಮುಖಂಡರಾದ ತಿಮ್ಮಣ್ಣ, ಚಿತ್ತಪ್ಪ, ಬಂಗಾರಪ್ಪ, ಬಸವರಾಜ್, ಸುರೇಶ್, ಅಣ್ಣಪ್ಪ ಸೇರಿದಂತೆ ಅನೇಕ ಮುಖಂಡರು ಹಾಗೂ ಇತರರು ಹಾಜರಿದ್ದರು. ಯಾದವ ಸಮಾಜದ ಮುಖಂಡ ಶಿವಮೂರ್ತಿ ಸ್ವಾಗತಿಸಿದರು.