ಹೊಳಲ್ಕೆರೆ: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬುಧವಾರ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಎಸ್‌ಬಿಐ ಬ್ಯಾಂಕ್ ಸಹಯೋಗದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ (Vikasit Bharat Sankalpa Yatra) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಪುರಸಭೆಯ ಸದಸ್ಯ ಕೆ.ಸಿ.ರಮೇಶ್ ಚಾಲನೆ ನೀಡಿ ಮಾತನಾಡಿ, ವಿಕಸಿತ ಭಾರತ ಸಂಕಲ್ಪ ಯಾತ್ರೆ ಜನರಿಗೆ ಸರ್ಕಾರಿ ಯೋಜನೆಗಳ ಅರಿವು ಮೂಡಿಸುತ್ತಿದ್ದು, ಸಾರ್ವಜನಿಕರು ಸದ್ಭಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.
ಮುಖ್ಯಾಧಿಕಾರಿ ಎ.ವಾಸಿಂ ಮಾತನಾಡಿ, ಪಟ್ಟಣದ 350 ಜನ ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ 30 ಸಂಘಗಳಿಗೆ 1 ರಿಂದ 3 ಲಕ್ಷ ರೂ ವರೆಗೆ ಸಾಲ ಸೌಲಭ್ಯ ವಿತರಿಸಿದೆ. ಆರ್ಥಿಕ ದುರ್ಬಲರು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಪುರಸಭೆ ಇತರೆ ಇಲಾಖೆಯ ಸಂಪರ್ಕ ಮಾಡಬೇಕು ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ರೇಖಾ ಮತ್ತು ಆರ್ಥಿಕ ಸಾಕ್ಷರತಾ ಕೇಂದ್ರದ ಸಂಯೋಜಕ ಅಜಿತ್ ಕುಮಾರ್ ಮಾತನಾಡಿದರು.
ಇದನ್ನೂ ಓದಿ: Karnataka Weather: ಇನ್ನೊಂದು ವಾರ ಬೆಳಗ್ಗೆ ಬಿಸಿಲು, ರಾತ್ರಿ ಚಳಿ! ದಕ್ಷಿಣ ಒಳನಾಡಲ್ಲಿ 5 ಡಿಗ್ರಿ ಬಿಸಿಲು ಹೆಚ್ಚಳ?
ಕೆನರಾ ಬ್ಯಾಂಕ್ ವ್ಯವಸ್ಥಾಪಕ ಪುಲ್ಲರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.
ಇದನ್ನೂ ಓದಿ: Stress Relieving Foods: ಒತ್ತಡ ನಿವಾರಣೆಗೆ ನೆರವಾಗುವ ಆಹಾರಗಳಿವು
ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ಎಚ್.ಆರ್.ನಾಗರತ್ನ ವೇದಮೂರ್ತಿ, ಬ್ಯಾಂಕ್ ಅಫ್ ಬರೋಡದ ವ್ಯವಸ್ಥಾಪಕ ಶೇಷನಾಯ್ಕ, ಎಸ್.ಬಿ.ಐ. ಉಪ ವ್ಯವಸ್ಥಾಪಕ ಗುರುಮೂರ್ತಿ, ಸಿಡಿಪಿಒ ಇಲಾಖೆ ದಾಸಪ್ಪ, ರೋಟರಿ ಕ್ಲಬ್ ಅಧ್ಯಕ್ಷ ಕ್ಯಾತಪ್ಪ, ತಿಪ್ಪೇಸ್ವಾಮಿ, ವಕೀಲ ಎಸ್.ವೇದಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು.