Site icon Vistara News

Pavagada News : ಸೋತಿರುವ ಆಂಜನೇಯರನ್ನು ಎಂಎಲ್‌ಸಿ ಮಾಡಿ ಸಚಿವರನ್ನಾಗಿಸಲು ಒತ್ತಾಯ

#image_title

ಪಾವಗಡ: ಚಿತ್ರದುರ್ಗದ ಹೊಳಲ್ಕೆರೆ ಕ್ಷೇತ್ರದಲ್ಲಿ ಸೋಲು ಕಂಡಿರುವ ಕಾಂಗ್ರೆಸ್‌ ಅಭ್ಯರ್ಥಿ ಎಚ್‌. ಆಂಜನೇಯ ಅವರನ್ನು ಎಂಎಲ್‌ಸಿಯಾಗಿ ಮಾಡಿ ಸಚಿವ ಸ್ಥಾನ (New Government) ಕೊಡಬೇಕು ಎಂದು ದಲಿತ ಸಂಘಟನೆಗಳು ಒತ್ತಾಯಿಸಿವೆ.

ಈ ಕುರಿತಾಗಿ ಪಾವಗಡ ಪಟ್ಟಣದ ಎಸ್.ಎಸ್.ಕೆ.ಭವನದಲ್ಲಿ ದಲಿತ ಮುಖಂಡ ಹಾಗೂ ವಕೀಲರ ಸಂಘದ ಅಧ್ಯಕ್ಷ ಎಚ್.ಶೇಷ ನಂದನ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಈ ಹಿಂದೆ 2013-14ರ ಚುನಾವಣೆಯಲ್ಲಿ ಡಾ. ಪರಮೇಶ್ವರ್‌ಗೆ ನೀಡಿದಂತಹ ರೀತಿಯಲ್ಲಿ ಈ ಬಾರಿ ಹೊಳಲ್ಕೆರೆ ಕ್ಷೇತ್ರದಲ್ಲಿ ಸೋತಿರುವ ಎಚ್. ಆಂಜನೇಯ ಅವರಿಗೂ ಸಹ ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡಬೇಕು ಎಂದು ಅವರು ಕೇಳಿಕೊಂಡಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕು ಎಂದು ರಾಜ್ಯ ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Karnataka Election : ನಾನಾಗಿ ಕಣಕ್ಕಿಳಿದಿಲ್ಲ, ಚಂದ್ರಪ್ಪರನ್ನು ಸೋಲಿಸಲು ಜನರೇ ನನ್ನನ್ನು ನಿಲ್ಲಿಸಿದರು ಎಂದ ಕೈ ಅಭ್ಯರ್ಥಿ ಎಚ್‌.ಆಂಜನೇಯ
ಡಿ.ಎಸ್.ಎಸ್‌ ಮುಖಂಡ ನಾರಾಯಣಪ್ಪ ಮಾತನಾಡಿ, “ಈ ಹಿಂದೆ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಆಂಜನೇಯ ಅವರು ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಉತ್ತಮ ಕಾರ್ಯ ಮಾಡಿದ್ದರು. ಹಾಗೆಯೇ ವಸತಿ ಶಾಲೆಗಳನ್ನು ನಿರ್ಮಾಣ ಮಾಡಿದಂತಹ ಕೀರ್ತಿ ಆಂಜನೇಯ ಅವರಿಗೆ ಸೇರುತ್ತದೆ. ಅವರ ಅವಧಿಯಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ಸಹ ಆಗಿವೆ. ಎಚ್. ಆಂಜನೇಯವರು ಹಿರಿಯ ಮುತ್ಸದ್ದಿ. ಪ್ರಾಮಾಣಿಕವಾಗಿ ಪಕ್ಷಕ್ಕೆ ದುಡಿದಿದ್ದಾರೆ. ಹಾಗಾಗಿ ಅವರಿಗೆ ಸಚಿವ ಸ್ಥಾನ ನೀಡಬೇಕು” ಎಂದು ಕೇಳಿಕೊಂಡಿದ್ದಾರೆ.

ಎ. ಎಸ್. ಯೋಗಶ್ ಮಾತನಾಡಿ, “ಈ ಹಿಂದೆ ಎಚ್. ಆಂಜನೇಯ ಅವರು ಅಧಿಕಾರದಲ್ಲಿ ಇದ್ದಾಗ ಸಾವಿರಾರು ಕೋಟಿ ಅನುದಾನ ನೀಡಿ ಅಲ್ಪಸಂಖ್ಯಾತರ ಹಾಗೂ ದಲಿತರ ಕಾಲೋನಿಗಳಲ್ಲಿ ಉತ್ತಮ ರಸ್ತೆಗಳು, ಚರಂಡಿಗಳನ್ನು ನಿರ್ಮಾಣ ಮಾಡಿದ್ದರು” ಎಂದು ಹೇಳಿದರು.

ಇದನ್ನೂ ಓದಿ: Karnataka Election 2023: ಸಿಎಂ ಬಳಿಕ ಸಂಪುಟ ಪ್ಲ್ಯಾನ್‌; ಸಚಿವರ ಆಯ್ಕೆಗೆ ಹೈಕಮಾಂಡ್‌ 10 ಅಂಶ ಸೂತ್ರ
ಈ ವೇಳೆ ನಲಿಗಾನಹಳ್ಳಿ ದುಗ್ಗಪ್ಪ, ವೈ.ಎನ್.ಹೊಸಕೋಟೆ ಅಂಜಿಬಾಬು, ಕಾಂಗ್ರೆಸ್ ಪರಿಶಿಷ್ಟ ಪಂಗಡದ ನಗರ ಅಧ್ಯಕ್ಷ ಶ್ರೀನಿವಾಸ್ ಪ್ರಸಾದ್, ಗಂಗಧರ್, ಮಾರಪ್ಪ, ವಿಜಯ್ ಕುಮಾರ್, ತಿಮ್ಮಾರಾಜು, ನಂದೀಶ್, ಮೋಹನ್ ಕುಮಾರ್, ಹನಮಂತರಾಯಪ್ಪ, ಅಳಪ್ಪ, ಅಂಜನ್, ಮದ್ದೇಟಪ್ಪ ‌ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Exit mobile version