Site icon Vistara News

Karnataka Election: ಹೊಳಲ್ಕೆರೆಯಲ್ಲಿ ಕಾಂಗ್ರೆಸ್‌ಗೆ ಕೈ ಕೊಟ್ಟು ಬಿಜೆಪಿ ಸೇರಿದ ನಾಯಕರು

Holalkere assembly constituency candidataes leave congress and join bjp

Holalkere assembly constituency candidataes

ಹೊಳಲ್ಕೆರೆ: ವಿಧಾನಸಭಾ ಚುನಾವಣೆಗೆ (Karnataka Election) ದಿನಗಣನೆ ಆರಂಭವಾಗಿದ್ದು, ಎಲ್ಲೆಡೆ ಪ್ರಚಾರದ ಜತೆಯಲ್ಲಿ ಮತಾಂತರವೂ ಜೋರಾಗಿಯೇ ನಡೆಯುತ್ತಿದೆ. ಅದರಂತೆ ಹೊಳಲ್ಕೆರೆಯಲ್ಲಿಯೂ(Holalkere) ಸಾಕಷ್ಟು ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ತೊರೆದು ಮಂಗಳವಾರ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಪಟ್ಟಣದ ಸ್ನೇಹ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಅದರಲ್ಲಿ ಗುಜರಾತ್‌ನ ಬೋರ್ಬಿ ಕ್ಷೇತ್ರದ ಮಂತ್ರಿ ಪ್ರಕಾಶ್ ವರ್ಮ ಅವರ ಸಮ್ಮುಖದಲ್ಲಿ ಪುರಸಭೆಯ ಸದಸ್ಯ ಸೇರಿದಂತೆ ನೂರಾರು ಯುವಕರು ಬಿಜೆಪಿ ಪಕ್ಷ ಸೇರ್ಪಡೆಯಾದರು. ಪಕ್ಷ ಸೇರ್ಪಡೆಯಾದ ಕಾರ್ಯಕರ್ತರನ್ನು ಪ್ರಕಾಶ್ ವರ್ಮ ಅವರು ಬಿಜೆಪಿ ಶಾಲು ಹಾಕಿ ಸ್ವಾಗತ ಮಾಡಿಕೊಂಡರು.

“ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸಗಳು ಕಣ್ಣಿಗೆ ಕಾಣುತ್ತವೆ. ಚಿತ್ರದುರ್ಗದಿಂದ ಬರುವಾಗ ಕಣಿವೆ ದಾಟಿ ಮುಂದೆ ಬಂದರೆ ಅಲ್ಲಿಂದ ಎಡಕ್ಕೆ ಬಲಕ್ಕೆ ತಿರುಗಿ ನೋಡಿದರೆ ಅಭಿವೃದ್ಧಿಯ ಕೆಲಸಗಳನ್ನು ನಾವು ನೋಡಬಹುದಾಗಿದೆ. ‌ಇದು ಈ ಚುನಾವಣೆಯಲ್ಲಿ ಕೂಡ ಗೆಲ್ಲುವುದಕ್ಕೆ ಸಾಕ್ಷಿಯಾಗಿದೆ” ಎಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬಿಜೆಪಿ ಮುಖಂಡ ಮಲ್ಲಿಕಾರ್ಜುನ್ ಹೇಳಿದರು.

“ಹೊಳಲ್ಕೆರೆಗೆ ಬಂದರೆ ನಾವು ಹೊಳಲ್ಕೆರೆಗೆ ಬಂದಿದ್ದೇವೋ ಅಥವಾ ಬೇರೆ ಯಾವುದಾದರೂ ನಗರಕ್ಕೆ ಬಂದಿದ್ದೇವೆಯೋ ಎಂದು ಅನಿಸುತ್ತದೆ. ಇನ್ನಷ್ಟು ಶಾಲಾ ಕಾಲೇಜುಗಳ ಅಭಿವೃದ್ಧಿಯಾಗಬೇಕಿದೆ. ಇದರ ಜತೆಗೆ ಹೊಳಲ್ಕೆರೆಯ ಸಮಗ್ರ ಅಭಿವೃದ್ಧಿಗಾಗಿ ಕಾರ್ಯಕರ್ತರು ಶಾಸಕ ಚಂದ್ರಪ್ಪ ಅವರನ್ನು ಗೆಲ್ಲಿಸುವಲ್ಲಿ ಶ್ರಮವಹಿಸಬೇಕು” ಎಂದು ಅವರು ಮನವಿ ಮಾಡಿದರು.

“ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಚಂದ್ರಪ್ಪ ಅವರನ್ನು ಗೆಲ್ಲಿಸಲು ಹೊಳಲ್ಕೆರೆ ಜನತೆ ನಿಶ್ಚಯ ಮಾಡಿದ್ದಾರೆ. ಅಭಿವೃದ್ಧಿಯ ಸರ್ಕಾರ ಎಂದರೆ ಅದು ಬಿಜೆಪಿ ಸರ್ಕಾರವಾಗಿದೆ. ಈ ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಮಾಡಲಾಗಿದೆ. ಆದ್ದರಿಂದ ಇಂದು‌ ಜನರು ಚಂದ್ರಪ್ಪ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ನಿರ್ಧರಿಸಿದ್ದಾರೆ. ನೀವೆಲ್ಲರೂ ಕೂಡ ಬರುವ 10ರಂದು ಮತವನ್ನು ಚಂದ್ರಪ್ಪ ಅವರಿಗೆ ಚಲಾಯಿಸಬೇಕು” ಎಂದು ಮನವಿ ಮಾಡಿದರು.

ಇದನ್ನೂ ಓದಿ: Karnataka Election: ಪಾವಗಡದಲ್ಲಿ ಜೆಡಿಎಸ್‌ ಭಾರಿ ಪ್ರಚಾರ; ಹಳ್ಳಿ ಹಳ್ಳಿಗಳಲ್ಲಿ ರೋಡ್‌ ಶೋ

ಹಾಗೆಯೇ ಗುಜರಾತ್‌ನ ಸಚಿವ ಪ್ರಕಾಶ್‌ ವರ್ಮ ಮಾತನಾಡಿ, “ದೇಶದಲ್ಲಿ‌ ಎಲ್ಲೆಡೆ ಬಿಜೆಪಿಯ ಸರ್ಕಾರಗಳನ್ನು ರಚಿಸಬೇಕಿದೆ. ಆದ್ದರಿಂದ ಕಾರ್ಯಕರ್ತರು ಶ್ರಮವಹಿಸಿ ಬಿಜೆಪಿಯನ್ನು ಹಾಗೂ ಚಂದ್ರಪ್ಪ ಅವರನ್ನು ಗೆಲ್ಲಿಸಬೇಕು. ಕರ್ನಾಟಕದಲ್ಲಿ ಬಿಜೆಪಿ ಈ ಚುನಾವಣೆಯಲ್ಲಿ‌ ಗೆದ್ದು ಅಧಿಕಾರಕ್ಕೆ ಬರಬೇಕಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಕೆಲಸ ಮಾಡಬೇಕು. ಮತ್ತಷ್ಟು ಅಭಿವೃದ್ಧಿ ಕೆಲಸಗಳು ನಡೆಯಬೇಕಿದೆ. ಆದ್ದರಿಂದ ಮೋದಿಯವರ ಕೈ ಬಲ‌ಪಡಿಸಲು ನೀವೆಲ್ಲರೂ ಉತ್ಸಾಹದಿಂದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ‌ ಮೊದಲಾಗಬೇಕು” ಎಂದರು.

ಈ ಕಾರ್ಯಕ್ರಮದಲ್ಲಿ‌ ಶಾಸಕ ಎಂ. ಚಂದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ್, ಶರಣಪ್ಪ, ಮತ್ತಿತರರು ಇದ್ದರು.

Exit mobile version