Site icon Vistara News

Karnataka Election 2023: ಮದ್ದನಕುಂಟೆಯನ್ನು ಮಾದರಿ ಗ್ರಾಮವಾಗಿ ಮಾಡುವೆ: ಕಾಂಗ್ರೆಸ್‌ ಅಭ್ಯರ್ಥಿ ಡಿ. ಸುಧಾಕರ್‌

#image_title

ಹಿರಿಯೂರು: ತಾಲೂಕಿನ ಮದ್ದನಕುಂಟೆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸುತ್ತೇನೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ (Karnataka Election) ಡಿ.ಸುಧಾಕರ್ ಹೇಳಿದ್ದಾರೆ.

ಮದ್ದನಕುಂಟೆ ಗ್ರಾಮಕ್ಕೆ ಶುಕ್ರವಾರ ರಾತ್ರಿ ಭೇಟಿ ನೀಡಿ ಮತ ಪ್ರಚಾರ ನಡೆಸಿದ ಅವರು ಮತದಾರರನ್ನು ಉದ್ದೇಶಿಸಿ ಮಾತನಾಡಿ, “ಮೊಟ್ಟ ಮೊದಲ ಬಾರಿಗೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮದ್ದನಕುಂಟೆ ಗ್ರಾಮಕ್ಕೆ ಬಂದಾಗ ನನಗೆ ಹಾಲು ಕುಡಿದಷ್ಟು ಸಂತೋಷವಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮತ ಹಾಕುವುದಕ್ಕೆ ಅವಕಾಶ ನೀಡುವುದು ಸಂವಿಧಾನದ ಕರ್ತವ್ಯ ಹಾಗೂ ಆಶಯವಾಗಿದೆ. ಈ ನಿಟ್ಟಿನಲ್ಲಿ ಈ ಗ್ರಾಮದ ಸ್ನೇಹಿತರು ಕಾಂಗ್ರೆಸ್ ಪಕ್ಷದ ಪರವಾಗಿ ಮತ ಪ್ರಚಾರ ನಡೆಸಲು ಅವಕಾಶವನ್ನು ಮಾಡಿಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು” ಎಂದು ಅವರು ಹೇಳಿದರು.

ಇದನ್ನೂ ಓದಿ: Karnataka Election 2023: ಚುನಾವಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ: ಹಿರಿಯೂರು ತಹಸೀಲ್ದಾರ್ ಪ್ರಶಾಂತ್

“ಈ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಅಭಿವೃದ್ಧಿಪಡಿಸುತ್ತೇನೆ. ನಾನು ಈ ಗ್ರಾಮದ ದೇವಸ್ಥಾನದ ಮುಂದೆ ನಿಂತು ಹೇಳುತ್ತಿದ್ದೇನೆ. ಜತೆಗೆ ಈ ಊರಿನಲ್ಲಿರುವ ಕರಿಯಣ್ಣ ದೇವಸ್ಥಾನವನ್ನು ಅಭಿವೃದ್ಧಿಪಡಿಸಲಾಗುವುದು. ಮಹಿಳೆಯರಿಗೆ ಉದ್ಯೋಗ, ದುಡಿಮೆಗೆ ಸಬ್ಸಿಡಿ ದರದಲ್ಲಿ ಸಾಲ ನೀಡಲಾಗುವುದು. ಹಾಗೆಯೇ ಬಡ್ಡಿ ರಹಿತ ಸಾಲವನ್ನು ಕೊಡುತ್ತೇವೆ” ಎಂದು ಅವರು ಭರವಸೆ ನೀಡಿದರು.

“ಮದ್ದನಕುಂಟೆ ಗ್ರಾಮದಲ್ಲಿರುವವರು ಎಲ್ಲರೂ ನನ್ನ ಬಂಧುಗಳು. ನಾನು ಚಳ್ಳಕೆರೆ ಕ್ಷೇತ್ರದಲ್ಲಿ ಕಾಡುಗೊಲ್ಲ ಸಮುದಾಯದ ಬೆಂಬಲದಿಂದ ಬೆಳೆದು ಬಂದವನು. ನನ್ನ ಕುಟುಂಬವನ್ನು ಇದೇ ಊರುಗಳ ಜನರು ಬೆಳೆಸಿದರು” ಎಂದು ಹೇಳಿದರು.

ಇದನ್ನೂ ಓದಿ: Theft Case: ಶೃಂಗೇರಿ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಮನೆಗೆ ಕನ್ನ; ವಿದೇಶಿ ಕರೆನ್ಸಿ ಹೆಸರಲ್ಲಿ ವಂಚಿಸುತ್ತಿದ್ದವರ ಬಂಧನ

“ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾಡುಗೊಲ್ಲರನ್ನು ಗುರುತಿಸಿ ಕ್ಯಾಬಿನೆಟ್‌ನಲ್ಲಿ ಜಾತಿ ಪಟ್ಟಿಯನ್ನು ನೀಡಿದೆ. ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಡತವನ್ನು ಕಳಿಸಿದೆ. 2023ರಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ನಾವು ಬೆಂಬಲವಾಗಿ ನಿಲ್ಲುತ್ತೇವೆ” ಎಂದು ಭರವಸೆ ಕೊಟ್ಟರು.

ಚುನಾವಣೆಯ ಕುರಿತಾಗಿ ಮಾತು ಮುಂದುವರಿಸಿದ ಅವರು, “ಮೇ 10ರಂದು ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರವಾಗಿ ಗಾಳಿ ಬೀಸುತ್ತಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸ್ವಾಮಿ, ಮುಖಂಡರಾದ ಗೌಡರ ಪರಮೇಶ್, ಶಿವಣ್ಣ, ಮಹಾಲಿಂಗಪ್ಪ, ಡಿ.ಎಸ್.ತಿಪ್ಪೇಸ್ವಾಮಿ, ಸಂಪತ್ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

Exit mobile version