Site icon Vistara News

Karnataka Election: ಹೊಳಲ್ಕೆರೆ ಪಕ್ಷೇತರ ಅಭ್ಯರ್ಥಿಯಾಗಿ ಡಾ. ಜಯಸಿಂಹ ನಾಮಪತ್ರ ಸಲ್ಲಿಕೆ

#image_title

ಹೊಳಲ್ಕೆರೆ: ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರವಾಗಿರುವ ಹೊಳಲ್ಕೆರೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಡಾ. ಜಯಸಿಂಹ ಮಂಗಳವಾರ ನಾಮಪತ್ರ ಸಲ್ಲಿಸಿದರು. ಅವರು ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ಚುನಾವಣಾಧಿಕಾರಿ ವಿವೇಕಾನಂದರವರಿಗೆ ನಾಮಪತ್ರ ಸಲ್ಲಿಸಿದರು.

ಜಯಸಿಂಹ ಅವರು ನಾಮಪತ್ರ ಸಲ್ಲಿಕೆಗೂ ಮುನ್ನ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಕುಕ್ವಾಡೇಶ್ವರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲಿಂದ ತಮ್ಮ ಬೆಂಬಲಿಗರೊಂದಿಗೆ ಪಟ್ಟಣದ ಮುಖ್ಯ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಸಹಸ್ರಾರು ಜನರು ಸೇರಿದ್ದರು.

ನಾಮಪತ್ರ ಸಲ್ಲಿಸಿ ಮಾತನಾಡಿದ ಅವರು, “ಕ್ಷೇತ್ರದ ಜನರ ಒಮ್ಮತದ ತೀರ್ಮಾನದಂತೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಕಳೆದ 10 ವರ್ಷಗಳಿಂದ ತಾಲೂಕು ಆರೋಗ್ಯಾಧಿಕಾರಿ ಕೆಲಸ ಮಾಡಿದ್ದೇನೆ. ಜನರ ಒತ್ತಾಸೆ ಮೇರೆಗೆ ಸರ್ಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದೆ. 11 ತಿಂಗಳ ಬಳಿಕ ರಾಜೀನಾಮೆ ಸ್ವೀಕೃತವಾಯಿತು. ಅಂದಿನಿಂದ ಕ್ಷೇತ್ರದ ಪ್ರತಿಯೊಂದು ಹಳ್ಳಿ ಹಳ್ಳಿಗೂ ಭೇಟಿ ನೀಡಿ ಪ್ರಚಾರ ನಡೆಸಿದೆ. ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗಲು ಭಾರಿ ಪ್ರಯತ್ನ ನಡೆಸಿದೆ. ಆದರೆ, ರಾಜಕೀಯ ಪಕ್ಷಕ್ಕೆ ಸೇರ್ಪಡೆಯೂ ಆಗಲಿಲ್ಲ, ಟಿಕೆಟ್ ಕೂಡ ಸಿಗಲಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: MLA Satish Reddy: ಶಾಸಕ ಸತೀಶ್‌ ರೆಡ್ಡಿ ಕೊಲೆಗೆ ಸ್ಕೆಚ್‌: ಹೊಳಲ್ಕೆರೆಯಲ್ಲಿ ಮೂವರ ಸೆರೆ; ಪ್ಲ್ಯಾನ್‌ ಲೀಕ್‌ ಆಗಿದ್ದು ಹೇಗೆ?

“ಅದಾದ ನಂತರ ಕ್ಷೇತ್ರದ ಜನರ ಮುಂದೆ ಬಂದೆ. ಅವರು ಸರ್ಕಾರಿ ಸೇವೆಯಲ್ಲಿದ್ದ ನಿಮ್ಮನ್ನು ರಾಜೀನಾಮೆ ಕೊಡಿಸಿ ರಾಜಕೀಯಕ್ಕೆ ಕರೆತಂದಿದ್ದೇವೆ. ನೀವು ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆ ಇಲ್ಲ. ಇಟ್ಟಿರುವ ಹೆಜ್ಜೆ ಹಿಂದೆ ಇಡಬೇಡಿ, ಪಕ್ಷೇತರ ಅಭ್ಯರ್ಥಿಯಾಗುವಂತೆ ಅವರ ಆದೇಶದ ಮೇರೆಗೆ ನಾಮಪತ್ರ ಸಲ್ಲಿಸಿದ್ದೇನೆ. ಪ್ರತಿದಿನ 25 ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದೇವೆ. ಸ್ಥಳೀಯ ಅಭ್ಯರ್ಥಿಯನ್ನು ಬೆಂಬಲಿಸುವ ಉದ್ದೇಶದಿಂದ‌ ಜನ ನನಗೆ ಬೆಂಬಲವಾಗಿ ನಿಂತಿದ್ದಾರೆ. 10 ರಿಂದ 15 ವರ್ಷಗಳಿಂದ ಕ್ಷೇತ್ರದ ಜನರಿಗೆ ಅನ್ಯಾಯವಾಗಿದೆ. ಮೀಸಲು ಕ್ಷೇತ್ರದಲ್ಲಿ ಒಳ್ಳೆಯ ಹಾಗೂ ಸ್ಥಳೀಯ ವ್ಯಕ್ತಿ ಬರಬೇಕು ಎಂಬುದು ಅವರ ಆಶಯವಾಗಿತ್ತು. ಅವರ ಆಶಯದಂತೆ ನಡೆದುಕೊಳ್ಳುವುದಾಗಿ ತಿಳಿಸಿದರು.

ಆಸ್ತಿ ವಿವರ

ಡಾ.ಜಯಸಿಂಹ ಅವರ ಬಳಿ 25,05,548 ರೂ. ಚರಾಸ್ತಿ, 40 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಪತ್ನಿ ಹೆಸರಿನಲ್ಲಿ 28,20,908 ರೂ. ಚರಾಸ್ತಿ, 1,49,30,400 ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಇವರಿಬ್ಬರದ್ದು 30 ಲಕ್ಷ ರೂ. ಬ್ಯಾಂಕ್‌ ಸಾಲ ಮತ್ತು 10 ಲಕ್ಷ ರೂ. ಇತರೆ ಸಾಲ ಇದೆ. ಜಯಸಿಂಹ ಅವರು ಚಿತ್ರದುರ್ಗದಲ್ಲಿ 72 ಲಕ್ಷ ಬೆಲೆ ಬಾಳುವ ನಿವೇಶನ, ಬೆಂಗಳೂರಿನಲ್ಲಿ 40 ಲಕ್ಷ ರೂ. ಮೌಲ್ಯದ ಅಪಾರ್ಟ್ಮೆಂಟ್‌ ಹೊಂದಿದ್ದಾರೆ.

Exit mobile version