Site icon Vistara News

Godse photo: ಗಣಪತಿ ಶೋಭಾಯಾತ್ರೆಯಲ್ಲಿ ಗೋಡ್ಸೆ ಚಿತ್ರ ಪ್ರದರ್ಶನ, ದೂರು

nathuram godse photo on chitradurga procession

ಚಿತ್ರದುರ್ಗ: ಗಣಪತಿ ಶೋಭಾಯಾತ್ರೆಯಲ್ಲಿ ನಾಥೂರಾಂ ಗೋಡ್ಸೆ (Godse photo) ಭಾವಚಿತ್ರ ಪ್ರದರ್ಶಿಸಿದ ಘಟನೆ ನಡೆದಿದೆ. ಈ ಕುರಿತು ಎಫ್‌ಐಆರ್‌ ದಾಖಲಾಗಿದೆ.

ಇಲ್ಲಿನ (chitradurga news) ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಮಹಾತ್ಮ ಗಾಂಧಿಯವರ ಹಂತಕ ನಾಥೂರಾಂ ಗೋಡ್ಸೆ ಭಾವಚಿತ್ರಗಳನ್ನು ಕೆಲವರು ಹಿಡಿದು ಘೋಷಣೆ ಕೂಗಿದ್ದರು. ಗೋಡ್ಸೆ ಫೋಟೋ ಪ್ರದರ್ಶನ ಮಾಡಿದ ಅಪರಿಚಿತರ ವಿರುದ್ಧ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆ ನಿವಾಸಿ ಹನುಮಂತಪ್ಪ ಎಂಬವರು ದೂರು ದಾಖಲಿಸಿದ್ದಾರೆ. ಚಿತ್ರದುರ್ಗ ನಗರ ಠಾಣೆಯಲ್ಲಿ FIR ದಾಖಲಾಗಿದೆ.

ಮೆರವಣಿಗೆಯಲ್ಲಿ ಗೋಡ್ಸೆ ಫೋಟೋದ ಜತೆಗೆ ಸಾವರ್ಕರ್‌ ಫೋಟೋ, ಮೃತನಾದ ಹಿಂದೂ ಹರ್ಷನ ಫೋಟೊ ಕೂಡ ಕಂಡುಬಂದಿದೆ. ಗೋಡ್ಸೆ ಫೋಟೋದ ಮೇಲ್ಗಡೆ ʼಅಖಂಡ ಭಾರತದ ಕನಸುಗಾರʼ ಎಂದು ಬರೆಯಲಾಗಿದೆ. ಸಮಾಜದಲ್ಲಿ ಪ್ರಚೋದನೆಯ ಮೂಲಕ ಅಶಾಂತಿ ಸೃಷ್ಟಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಲುವಾಗಿ ಈ ಫೋಟೋ ಪ್ರದರ್ಶನ ಮಾಡಲಾಗಿದೆ. ಶಾಂತಿ ಕದಡಲು ಹಾಗೂ ಕೋಮುಗಳ ಮಧ್ಯೆ ಸೌಹಾರ್ದತೆಗೆ ಧಕ್ಕೆ ತರಲು ಫೋಟೋ ಪ್ರದರ್ಶನ ಮಾಡಿದ್ದಾರೆ. ಗೋಡ್ಸೆ ಫೋಟೋ ಪ್ರದರ್ಶಿಸಿದವರ ಹಾಗೂ ಅದಕ್ಕೆ ಕುಮ್ಮಕ್ಕು ನೀಡಿದವರನ್ನು ಪತ್ತೆ ಮಾಡಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ದೂರು ಕೊಡಲಾಗಿದೆ. IPC 505/1(C), 505/1(B) ಅಡಿಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಔರಂಗಜೇಬ್‌ ದಾಳಿಕೋರ, ಗೋಡ್ಸೆ ಭಾರತ ಮಾತೆಯ ಸುಪುತ್ರ; ಓವೈಸಿಗೆ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಟಾಂಗ್

Exit mobile version