Site icon Vistara News

Sri Kshetra Belaguru | ಶ್ರೀ ಕ್ಷೇತ್ರ ಬೆಲಗೂರಿನಲ್ಲಿ ನಾದಾರಾಧನೆ ಸಂಪನ್ನ

Sri Kshetra Belaguru

ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀ ಕ್ಷೇತ್ರ ಬೆಲಗೂರಿನಲ್ಲಿ (Sri Kshetra Belaguru) ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಹಾಗೂ ಶ್ರೀ ವೀರ ಪ್ರತಾಪ ಅಂಜನೇಯ ಸ್ವಾಮಿ ಮಹಾ ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ಸೋಮವಾರ ನಾದಾರಾಧನೆ ಕಾರ್ಯಕ್ರಮ ನೆರವೇರಿತು.

ಬೆಂಗಳೂರಿನ ಗಾಯಕ ಸಿದ್ಧಾರ್ಥ ಬೆಳ್ಮಣ್ಣು, ತಬಲಾ ವಾದಕ ರೂಪಕ ಕಲ್ಲೂರಕರ್, ವಯೋಲಿನ್‌ ವಾದಕ ರಂಜನ್ ಕುಮಾರ್ ಬೆವುರಾ, ಯಲ್ಲಾಪುರ ಹೆಗ್ಗಾರದ ಹಾರ್ಮೋನಿಯಂ ವಾದಕ ಸತೀಶ ಭಟ್ಟ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಬಳಿಕ ಕಲಾವಿದರನ್ನು ಸನ್ಮಾನಿಸಲಾಯಿತು.

ಶ್ರವಣಾನಂದಕರವಾದ ನಾದಾರಾಧನೆ ಕುರಿತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಸಪ್ತಕ ಸಂಸ್ಥೆ ಸಂಚಾಲಕ ಜಿ.ಎಸ್‌.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

ಶಿವಮೊಗ್ಗದಲ್ಲಿ ಅರುಣ ಹಂಪಿಹೊಳಿಗೆ ನಾದ ನಮನ

ಶಿವಮೊಗ್ಗ: ಬೆಂಗಳೂರಿನ ಸಪ್ತಕ ಸಂಸ್ಥೆ ಹಾಗೂ ಸಪ್ತಸ್ವರ ಸಂಗೀತ ಸಭಾ ಸಹಯೋಗದಲ್ಲಿ ನಗರದ ಕುವೆಂಪು ರಂಗ ಮಂದಿರದಲ್ಲಿ ಅರುಣ ಹಂಪಿಹೊಳಿ ಅವರಿಗೆ ನುಡಿ ನಮನ ಹಾಗೂ ನಾದ ನಮನದ ಮೂಲಕ ಭಾನುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಹಿಂದೂಸ್ತಾನಿ ಸಂಗೀತದ ಮಾರ್ವಾ ಹಾಗೂ ಹಮೀರ್‌ ರಾಗಗಳಲ್ಲಿ ಬೆಂಗಳೂರಿನ ಗಾಯಕ ಸಿದ್ಧಾರ್ಥ ಬೆಳ್ಳಣ್ಣು ಅವರು ಕಂಠದಲ್ಲಿ ಮೂಡಿಬಂದ ಹಾಡುಗಳು ಪ್ರೇಕ್ಷಕರನ್ನು ತಲೆದೂಗುವಂತೆ ಮಾಡಿದವು. ನಂತರ ಸಪ್ತಕ ಸಂಚಾಲಕ ಜಿ.ಎಸ್.ಹೆಗಡೆ ಹಾಗೂ ಶಿವಮೊಗ್ಗದ ಸಂಗೀತ ಸಭಾ ವತಿಯಿಂದ ನುಡಿ ನಮನ ಸಲ್ಲಿಸಿದರು. ಬಳಿಕ ಕಲಾವಿದರಿಗೆ ಸನ್ಮಾನ ಮಾಡಲಾಯಿತು.

ಸಹ ಕಲಾವಿದರಾದ ತಬಲಾ ವಾದಕ ರೂಪಕ ಕಲ್ಲೂರಕರ್, ವಯೋಲಿನ್ ವಾದಕ ರಂಜನ್ ಕುಮಾರ್ ಬೆವುರಾ, ಯಲ್ಲಾಪುರದ ಹೆಗ್ಗಾರದ ಹಾರ್ಮೋನಿಯಂ ವಾದಕ ಸತೀಶ ಭಟ್ಟ ಕಾರ್ಯಕ್ರಮದಲ್ಲಿದ್ದರು.

ಇದನ್ನೂ ಓದಿ | ಕನ್ನಡ ಸಾರಸ್ವತ ಲೋಕದ ರಾಜ ರತ್ನ, ರತ್ನನ ಪದಗಳ ರಾಜರತ್ನಂ

Exit mobile version