Site icon Vistara News

Sri Kshetra Belaguru | ಡಿ.5ರಂದು ಚಿತ್ರದುರ್ಗದ ಶ್ರೀ ಕ್ಷೇತ್ರ ಬೆಲಗೂರಿನಲ್ಲಿ ನಾದಾರಾಧನೆ ಕಾರ್ಯಕ್ರಮ

Sri Kshetra Belaguru

ಚಿತ್ರದುರ್ಗ: ಬೆಂಗಳೂರಿನ ಸಪ್ತಕ ಸಂಸ್ಥೆ ಹಾಗೂ ಶ್ರೀ ಕ್ಷೇತ್ರ ಬೆಲಗೂರಿನ ಶ್ರೀ ಮಾರುತಿ ಪೀಠದ ಬಿಂದು ಮಾಧವ ರಿಲಿಜಿಯಸ್ ಟ್ರಸ್ಟ್ ವತಿಯಿಂದ ಡಿ.5ರಂದು ಸಂಜೆ 6.30ಕ್ಕೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀ ಕ್ಷೇತ್ರ ಬೆಲಗೂರಿನಲ್ಲಿ (Sri Kshetra Belaguru) ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ಹಾಗೂ ಶ್ರೀ ವೀರ ಪ್ರತಾಪ ಅಂಜನೇಯ ಸ್ವಾಮಿ ಮಹಾ ಬ್ರಹ್ಮರಥೋತ್ಸವ ನಿಮಿತ್ತ ನಾದಾರಾಧನೆ ಹಮ್ಮಿಕೊಳ್ಳಲಾಗಿದೆ ಎಂದು ಸಪ್ತಕ ಸಂಸ್ಥೆ ಸಂಚಾಲಕ ಜಿ.ಎಸ್‌.ಹೆಗಡೆ ತಿಳಿಸಿದ್ದಾರೆ.

ಬೆಂಗಳೂರಿನ ಗಾಯಕ ಸಿದ್ಧಾರ್ಥ ಬೆಳ್ಮಣ್ಣು, ತಬಲಾ ವಾದಕ ರೂಪಕ ಕಲ್ಲೂರಕರ್, ವಯೋಲಿನ್‌ ವಾದಕ ರಂಜನ್ ಕುಮಾರ್ ಬೆವುರಾ, ಯಲ್ಲಾಪುರ ಹೆಗ್ಗಾರದ ಹಾರ್ಮೋನಿಯಂ ವಾದಕ ಸತೀಶ ಭಟ್ಟ ಅವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Love jihad | ರಾಜ್ಯದಲ್ಲಿ ಕಠಿಣ ಲವ್‌ ಜಿಹಾದ್‌ ನಿಗ್ರಹ ಕಾಯಿದೆ ಜಾರಿಗೆ ಆಗ್ರಹಿಸಿ ಡಿ.11ರಿಂದ ಆಂದೋಲನ

Exit mobile version