ಬಾಗಲಕೋಟೆ: ಚಿತ್ತೂರು ಬಳಿ ಅಪಘಾತದಲ್ಲಿ ಮೃತಪಟ್ಟಿರುವ ಬೆಂಗಳೂರು ಶಿವಾಜಿನಗರ ಠಾಣೆ ಪೊಲೀಸ್ ಕಾನ್ಸ್‌ಟೇಬಲ್ ಅನಿಲ್ ಮುಳಿಕ್(26) ಬಾಗಲಕೋಟೆ ಮೂಲದವರು.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದವರಾದ ಅನಿಲ್ ಕಳೆದ ಒಂದು ವಾರದ ಹಿಂದಷ್ಟೆ ಗ್ರಾಮಕ್ಕೆ ಬಂದಿದ್ದರು. ಕರ್ತವ್ಯದ ನಿಮಿತ್ತ ವಿಜಯಪುರಕ್ಕೆ ಬಂದಿದ್ದ ಅನಿಲ್, ಹತ್ತಿರದಲ್ಲಿ ಇದ್ದ ಚಿಕ್ಕಲಕಿ ಗ್ರಾಮಕ್ಕೆ ಬಂದು ಹೋಗಿದ್ದರು. ತಂದೆ-ತಾಯಿ, ಸಹೋದರನನ್ನು ಮಾತಾಡಿಸಿ ಹೋಗಿದ್ದರು.
ಇದನ್ನೂ ಓದಿ | ಗಾಂಜಾ ಆರೋಪಿಯ ಹಿಡಿಯಲು ಹೋಗಿದ್ದ ಬೆಂಗಳೂರಿನ ಇಬ್ಬರು ಪೊಲೀಸರು ಅಪಘಾತಕ್ಕೆ ಬಲಿ
2019ರ ಏಪ್ರಿಲ್‌ನಲ್ಲಿ ಪೊಲೀಸ್ ನೌಕರಿ ಸೇರಿದ್ದ ಅನಿಲ್ ಮೊದಲ ಪೋಸ್ಟಿಂಗ್ ಆಗಿ ಶಿವಾಜಿನಗರ ಠಾಣೆಗೆ ಹಾಜರಾಗಿದ್ದರು. ಇದೀಗ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಅನಿಲ್ ಅಪಘಾತದಲ್ಲಿ ಮೃತಪಟ್ಟ ಸುದ್ದಿ ತಿಳಿದು ಗ್ರಾಮದ ನೂರಾರು ಜನರು ಮನೆ ಬಳಿ ಜಮಾಯಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡಿರುವ ಕಾನ್ಸ್‌ಟೇಬಲ್ ಶರಣಬಸವ ಅವರನ್ನು ನೋಡಲು ವೆಲ್ಲೂರುಗೆ ಕುಟುಂಬಸ್ಥರು ದೌಡಾಯಿಸಿದ್ದಾರೆ. ಅಪಘಾತದ ಕುರಿತಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಟ್ವೀಟ್ ಮಾಡಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ | Accident |ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತ: ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ