ಬೆಂಗಳೂರು: ಅಸ್ವಸ್ಥಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರು ಮೆಡಿಕಲ್ ಕಾಲೇಜು ಹಾಸ್ಟೆಲ್‌ನ 47 ವಿದ್ಯಾರ್ಥಿನಿಯರ ಪೈಕಿ 46 ವಿದ್ಯಾರ್ಥಿನಿಯರು ಗುಣಮುಖವಾಗಿ (Cholera Outbreak) ಭಾನುವಾರ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಒಬ್ಬ ವಿದ್ಯಾರ್ಥಿನಿಗೆ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ.
46 ವಿದ್ಯಾರ್ಥಿನಿಯರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಕಲ್ಚರ್ ಟೆಸ್ಟ್ ರಿಪೋರ್ಟ್ ಬಂದ ನಂತರ ಆಸ್ಪತ್ರೆಯಲ್ಲಿರುವ ವಿದ್ಯಾರ್ಥಿನಿ ನಾಳೆ ಡಿಸ್ಟಾರ್ಜ್ ಆಗುವ ಸಾಧ್ಯತೆ ಇದೆ ಎಂದು ಬಿಎಂಸಿಆರ್‌ಐ ಡೀನ್ ಡಾ.ರಮೇಶ್ ಕೃಷ್ಣ ಮಾಹಿತಿ ನೀಡಿದ್ದಾರೆ.
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ(Bangalore Medical College and Research Institute-BMCRI) ಹಾಸ್ಟೆಲ್‌ನಲ್ಲಿ ಅತಿಸಾರ ಮತ್ತು ನಿರ್ಜಲೀಕರಣದರಿಂದ ಅಸ್ವಸ್ಥಗೊಂಡಿದ್ದ 47 ವಿದ್ಯಾರ್ಥಿನಿಯರನ್ನು ಶುಕ್ರವಾರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಇಬ್ಬರು ವಿದ್ಯಾರ್ಥಿನಿಯರಿಗೆ ಕಾಲರಾ ದೃಢಪಟ್ಟಿತ್ತು. ಇದೀಗ 46 ವಿದ್ಯಾರ್ಥಿನಿಯರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಬೆಂಗಳೂರು ಮೆಡಿಕಲ್ ಕಾಲೇಜು ಹಾಸ್ಟೆಲ್ ವಾರ್ಡನ್ ಸಸ್ಪೆಂಡ್
ಬೆಂಗಳೂರು: ಅತಿಸಾರ ಮತ್ತು ನಿರ್ಜಲೀಕರಣದಿಂದ ಅಸ್ವಸ್ಥಗೊಂಡು (Cholera Outbreak) ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಸ್ಟೆಲ್ ವಿದ್ಯಾರ್ಥಿಗಳು ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದರು. ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿಕ್ಟೋರಿಯಾ ಆಸ್ಪತ್ರೆ ಕಿಚನ್‌ನಿಂದ ತಿಂಡಿ, ಊಟ ಸರಬರಾಜು ಆಗುತ್ತಿತ್ತು. ವಿದ್ಯಾರ್ಥಿಗಳಲ್ಲಿ ಕಾಲರಾ ಪತ್ತೆಯಾದ (Cholera disease) ಹಿನ್ನೆಲೆಯಲ್ಲಿ ಹಾಸ್ಟೆಲ್ ಕಿಚನ್ ಬಂದ್ ಮಾಡಲಾಗಿದೆ. ಜತೆಗೆ ಹಾಸ್ಟೆಲ್ ವಾರ್ಡನ್ ಅಖಿಲಾಂಡೇಶ್ವರಿ ಅವರನ್ನು ಅಮಾನತುಗೊಳಿಸಲಾಗಿದೆ. ಅಮಾನತು ಮಾಡಿ ಬೆಂಗಳೂರು ಮೆಡಿಕಲ್ ಕಾಲೇಜು ಡೀನ್ ಡಾ.ರಮೇಶ್ ಕೃಷ್ಣ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ | Water Crisis: ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆಗೆ ಮತ್ತೆ ಗಡುವು ವಿಸ್ತರಿಸಿದ ಜಲಮಂಡಳಿ; ತಪ್ಪಿದರೆ 5000 ರೂ. ದಂಡ!
ಹಾಸ್ಟೆಲ್ ತೊರೆದ ವಿದ್ಯಾರ್ಥಿನಿಯರು
ಬೆಂಗಳೂರು ವೈದ್ಯಕೀಯ ಕಾಲೇಜು ಹಾಸ್ಟೆಲ್‌ನ ಕೆಲ ವಿದ್ಯಾರ್ಥಿಗಳಿಗೆ ಕಾಲರಾ ಪತ್ತೆಯಾದ ಹಿನ್ನೆಲೆಯಲ್ಲಿ ಈಗಾಗಲೇ ಹಲವು ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದಿದ್ದಾರೆ. ಹಾಸ್ಟೆಲ್‌ನಲ್ಲಿ ಉಳಿದಿರುವ ಕೆಲ ವಿದ್ಯಾರ್ಥಿಗಳು ಬಾಟೆಲ್ ನೀರಿನ ಮೊರೆ ಹೋಗಿದ್ದಾರೆ. ಹೊರಗಿನಿಂದ ಬಾಟೆಲ್ ನೀರು ಖರೀದಿಸಿ ಬಳಸುವಂತಾಗಿದೆ. ಹಾಸ್ಟೆಲ್‌ನಲ್ಲಿ ಕಲುಷಿತ ನೀರು ಅಥವಾ ಕಲುಷಿತ ಆಹಾರದಿಂದ ಕಾಲರಾ ಬಂದಿರುವ ಶಂಕೆ ಇದೆ. ಈ ಹಿನ್ನೆಲೆ ಈಗಾಗಲೇ ಹಾಸ್ಟೆಲ್ ಆಹಾರ ಮತ್ತು ನೀರಿನ ಸ್ಯಾಂಪಲ್ ಅನ್ನು ಬಿಬಿಎಂಪಿ ಪರೀಕ್ಷೆಗೆ ಒಳಪಡಿಸಿದೆ. ಹಾಸ್ಟೆಲ್ ಆಹಾರ ಪದಾರ್ಥಗಳು ಹಾಗೂ ಜಲಮಂಡಳಿ ನೀರು, ಆರ್‌ಓ ವಾಟರ್ ಪರೀಕ್ಷೆಗೆ ಒಳಪಡಿಲಾಗಿದೆ.
ಕಾಲರಾ ಹರಡುವಿಕೆ ಹೇಗೆ?
ವಿಬ್ರಿಯೊ ಕಾಲರೇ ಎಂಬ ಬ್ಯಾಕ್ಟೀರಿಯಾದ ಕಾಲಾರಾ ಸೋಂಕು ಹರಡುತ್ತದೆ. ಕಲುಷಿತ ನೀರು ಮತ್ತು ಆಹಾರದ ಮೂಲಕ ಈ ಬ್ಯಾಕ್ಟೀರಿಯಾ ಮಾನವರಿಗೆ ಹರಡುತ್ತದೆ. ಕಾಲರಾ ಕರುಳಿನ ಸೋಂಕು ಆಗಿದ್ದು, ತೀವ್ರವಾದ ಅತಿಸಾರ ಭೇದಿ, ವಾಂತಿ ಇದರ ಪ್ರಮುಖ ಲಕ್ಷಣವಾಗಿದೆ. ಉಳಿದಂತೆ ಈ ರೋಗ ಹೆಚ್ಚಿನ ಲಕ್ಷಣಗಳು ತೋರಿಸಿಕೊಳ್ಳುವುದಿಲ್ಲ. ತ್ವರಿತವಾಗಿ ಚಿಕಿತ್ಸೆ ದೊರೆಯದಿದ್ದರೆ, ತೀವ್ರ ನಿರ್ಜಲೀಕರಣಕ್ಕೆ ಒಳಗಾಗಿ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ.
ಇದನ್ನೂ ಓದಿ | Benefits Of Ginger: ಶುಂಠಿ ಅಡುಗೆಗೆ ಮಾತ್ರವಲ್ಲ, ಆರೋಗ್ಯಕರ ಜೀವನಕ್ಕೂ ಸಿದ್ಧೌಷಧ!
ಮುನ್ನೆಚ್ಚರಿಕಾ ಕ್ರಮಗಳೇನು?
- ಕುಡಿಯುವ ನೀರನ್ನು ಕಾಯಿಸಿ ಆರಿಸಿ ಕುಡಿಯಬೇಕು.
- ಮನೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಬೇಕು.
- ದೇಹವು ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಬೇಕು.
- ವಾಂತಿ, ಭೇದಿಯಿಂದ ದೇಹದೊಳಗಿನ ನೀರಿನ ಅಂಶ ಹೊರಬರುತ್ತದೆ. ಹೀಗಾಗಿ ನೀರಿಗೆ ಎಲೆಕ್ಟ್ರೋಲೈಟ್ ಬೆರೆಸಿ ಕುಡಿಯಿರಿ.
- ವಾಂತಿ, ಭೇದಿ ಕಾಣಿಸಿಕೊಂಡ ಕೂಡಲೇ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸಿ
- ಕಾಲರಾ ಬ್ಯಾಕ್ಟೀರಿಯಾ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.