Site icon Vistara News

Hindu Janajagruti Samiti: ಕಾನ್ವೆಂಟ್ ಬದಲು ಸಂಸ್ಕಾರಯುತ ಶಿಕ್ಷಣ ನೀಡುವ ಶಾಲೆಗಳನ್ನು ಆರಿಸಿ: ಗೌರಿ ದ್ವಿವೇದಿ

Head Madam Gauri Dwivedi

ಬೆಂಗಳೂರು: ಕಾನ್ವೆಂಟ್ ಶಾಲೆಗಳಲ್ಲಿ (convent school) ಕಲಿತಿರುವ ವಿದ್ಯಾರ್ಥಿಗಳು ಹಿಂದು ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದಾರೆ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತರೆ ಮಾತ್ರ ವಿದ್ಯಾರ್ಥಿ ಯಶಸ್ವಿ ಆಗುವನು ಎಂಬ ತಪ್ಪು ತಿಳಿವಳಿಕೆಯಿಂದ ಪೋಷಕರು ಹೊರಬರಬೇಕು. ವಿದ್ಯಾರ್ಥಿಗಳು ಸಂಸ್ಕಾರಭರಿತರಾದರೆ ಮಾತ್ರ ಯಶಸ್ವಿ ಆಗುತ್ತಾರೆ ಎಂಬುದನ್ನು ಅರಿಯಬೇಕು. ಆಧುನಿಕ ಶಿಕ್ಷಣದ ಜತೆಗೆ ಸಂಸ್ಕಾರಯುವ ಶಿಕ್ಷಣ ನೀಡುವ ವಿದ್ಯಾಲಯಗಳನ್ನು ನಿಮ್ಮ ಮಕ್ಕಳಿಗಾಗಿ ಆಯ್ಕೆ ಮಾಡಿ ಎಂದು ಪೋಷಕರಿಗೆ ಉತ್ತರ ಪ್ರದೇಶದ ಪ್ರಯಾಗರಾಜ್‌ನ ರುದ್ರ ಪ್ರಯಾಗ ವಿದ್ಯಾಮಂದಿರದ ಮುಖ್ಯೋಪಾಧ್ಯಾಯಿನಿ ಗೌರಿ ದ್ವಿವೇದಿ ಹೇಳಿದರು.

ಹಿಂದು ಜನಜಾಗೃತಿ ಸಮಿತಿ (Hindu Janajagruti Samiti) ವತಿಯಿಂದ ʼಕಾನ್ವೆಂಟ್ ಶಾಲೆಯ ವಿರೋಧ; ‘ಟಿಕಲಿ’ ಗೋ ಹಿಂದು ಧರ್ಮಕ್ಕೆ?ʼ ಎಂಬ ವಿಷಯದ ಕುರಿತು ಆಯೋಜಿಸಿದ್ದ ವಿಶೇಷ ಸಂವಾದದಲ್ಲಿ ಅವರು ಮಾತನಾಡಿ, ಕಾನ್ವೆಂಟ್ ಶಾಲೆಗಳಲ್ಲಿ ವಿಶಿಷ್ಟ ಷರತ್ತುಗಳನ್ನು ಹಾಕಿ ಶಿಕ್ಷಣ ನೀಡಲಾಗುತ್ತದೆ. ಆದರೆ, ಅಲ್ಲಿ ಶಿಕ್ಷಣ ಪಡೆಯುವ ಬಹುತೇಕ ಮಕ್ಕಳು ಹಿಂದುಗಳಾಗಿರುತ್ತಾರೆ. ಹೀಗಾಗಿ ಹಿಂದು ಸಂಸ್ಕೃತಿಯನ್ನು ಒಳಗೊಂಡಿರುವ ಶಿಕ್ಷಣ ನೀಡುವ ವ್ಯವಸ್ಥೆ ಕೂಡ ಇರಬೇಕು ಮತ್ತು ಇದರಲ್ಲಿ ಭೇದಭಾವವಾದರೆ ಹಿಂದು ಮಕ್ಕಳ ಪೋಷಕರು ಶಾಲಾ ಆಡಳಿತವನ್ನು ಪ್ರಶ್ನಿಸಬೇಕು ಎಂದು ತಿಳಿಸಿದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಶಾಸ್ತ್ರೀಯ ಸಂಗೀತದ ಬೆರಗು ಕೌಶಿಕೀ ಚಕ್ರವರ್ತಿ; ವಯಸ್ಸು ಸಣ್ಣದು, ಸಾಧನೆ ದೊಡ್ಡದು

ಕಾನ್ವೆಂಟ್‌ ಶಾಲೆಯ ಅಲ್ಪಸಂಖ್ಯಾತ ಸ್ಥಾನಮಾನ ತೆಗೆದು ಹಾಕಿ

ಹಿಂದು ಜನಜಾಗೃತಿ ಸಮಿತಿಯ ಪುಣೆಯ ಸಮನ್ವಯಕರಾದ ನಾಗೇಶ ಜೋಶಿ ಅವರು ಮಾತನಾಡಿ, ಜಾರ್ಖಂಡ್‌ದಲ್ಲಿನ ಕಾನ್ವೆಂಟ್ ಶಾಲೆಯಲ್ಲಿ ಹಣೆಗೆ ಟಿಕಲಿ (ಬಿಂದಿ) ಇಟ್ಟು ಹೋದ ವಿದ್ಯಾರ್ಥಿನಿಗೆ ಶಿಕ್ಷಕಿಯು ಕಪಾಳಕ್ಕೆ ಹೊಡೆದರು. ಈ ಅವಮಾನದಿಂದ ಉಷಾ ಕುಮಾರಿ ಎಂಬ ಹಿಂದು ವಿದ್ಯಾರ್ಥಿನಿಯು ಆತ್ಮಹತ್ಯೆ ಮಾಡಿಕೊಂಡಳು. ಇದು ಇಂತಹ ಕಿರುಕುಳದ ಮೊದಲ ಉದಾಹರಣೆ ಏನಲ್ಲ, ಈ ಹಿಂದೆ ಕೂಡ ದೇಶಾದ್ಯಂತ ಅಲ್ಲಲ್ಲಿ ಕಾನ್ವೆಂಟ್ ಶಾಲೆಗಳಲ್ಲಿ ಹಿಂದು ವಿದ್ಯಾರ್ಥಿಗಳ ಜತೆಗೆ ಈ ರೀತಿಯ ಘಟನೆಗಳು ನಡೆದಿವೆ ಎಂದು ಹೇಳಿದರು.

ಭಾರತವು ಸ್ವಾತಂತ್ರ್ಯ ಪಡೆದ ನಂತರ ಹಿಂದು ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಹಿಂದು ಧರ್ಮದ ಶಿಕ್ಷಣ ನೀಡುವುದು ಆರಂಭ ಮಾಡಬೇಕಿತ್ತು. ಆದರೆ ಹೀಗೆ ಆಗಲಿಲ್ಲ. ಇಂದು ಅನೇಕ ಕಾನ್ವೆಂಟ್ ಶಾಲೆಗಳಿಂದ ಕೇವಲ ಕ್ರೈಸ್ತ ಧರ್ಮದ ಶಿಕ್ಷಣ ನೀಡಲಾಗುತ್ತದೆ, ಹಿಂದು ಧರ್ಮವನ್ನು ಟೀಕಿಸಲಾಗುತ್ತದೆ. ಈ ಕಾನ್ವೆಂಟ್ ಶಾಲೆಗಳಿಂದ ಹಿಂದು ವಿದ್ಯಾರ್ಥಿಗಳನ್ನು ಮತಾಂತರಿಸಲು ಪ್ರಯತ್ನಿಸಲಾಗುತ್ತಿದ್ದು, ಕಾನ್ವೆಂಟ್ ಶಾಲೆಗಳು ಹಿಂದುಗಳನ್ನು ಮತಾಂತರಿಸುವ ಕೇಂದ್ರಗಳಾಗಿವೆ. ಬಹುತೇಕ ಕಾನ್ವೆಂಟ್ ಶಾಲೆಗಳಲ್ಲಿರುವ ವಿದ್ಯಾರ್ಥಿಗಳಲ್ಲಿ ಶೇಕಡ 50ಕ್ಕಿಂತಲೂ ಹೆಚ್ಚಿನವರು ಹಿಂದು ವಿದ್ಯಾರ್ಥಿಗಳಾಗಿರುತ್ತಾರೆ. ಆದ್ದರಿಂದ ಕಾನ್ವೆಂಟ್ ಶಾಲೆಗಳಿಗೆ ನೀಡಿರುವ ಅಲ್ಪಸಂಖ್ಯಾತ ಸ್ಥಾನಮಾನವನ್ನು ಸರ್ಕಾರವು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ನಮ್ಮ ನಾಳೆಗಳಿಗಾಗಿ ಇಂದು ಜೀವ ತೆತ್ತವರು

ಜಾರ್ಖಂಡ್‌ನ ಧೋರಿಯ ಕಸ್ತೂರಬಾ ವಿದ್ಯಾನಿಕೇತನದ ಸಂಯುಕ್ತ ಅಧ್ಯಕ್ಷೆ ಡಾ. ಪೂಜಾ ಅವರು ಮಾತನಾಡಿ, ಕಾನ್ವೆಂಟ್ ಶಾಲೆಗಳಲ್ಲಿ ಕಲಿತಿರುವ ವಿದ್ಯಾರ್ಥಿಗಳು ವಿದೇಶಿ ಸಂಸ್ಕೃತಿಯನ್ನು ಅನುಕರಿಸುತ್ತಾರೆ, ಆ ಮಕ್ಕಳು ನಿರಾಶೆಗೆ ಬಲಿಯಾಗುತ್ತಾರೆ ಎಂದೂ ಕಂಡು ಬಂದಿದೆ. ಅಂತಹ ಶಾಲೆಗಳಿಗೆ ಹೋಗುವ ಮಕ್ಕಳು ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಾರೆ. ಇದರ ವಿರುದ್ಧ ಸನಾತನ ಹಿಂದು ಧರ್ಮದ ಶಿಕ್ಷಣ ಮತ್ತು ಆಚರಣೆ ಮಾಡುವ ಮಕ್ಕಳು ಆತ್ಮ ಬಲದಿಂದ ತುಂಬಿರುತ್ತಾರೆ. ಇಂತಹ ಮಕ್ಕಳು ನಿರಾಶೆಗೆ ಬಲಿಯಾಗುವುದಿಲ್ಲ, ಇದನ್ನು ಗಮನಕ್ಕೆ ತೆಗೆದುಕೊಳ್ಳಬೇಕು. ಕಾನ್ವೆಂಟ್ ಮಾತ್ರವಲ್ಲ, ಇತರ ಅನೇಕ ಶಾಲೆಗಳಲ್ಲಿಯೂ ಇಂಗ್ಲಿಷ್ ಭಾಷೆಯನ್ನು ಒಳ್ಳೆಯ ರೀತಿಯಲ್ಲಿ ಕಲಿಸಲಾಗುತ್ತದೆ. ನಮ್ಮ ದೇಶಾದ್ಯಂತ ಇರುವ ವಿದ್ಯಾಭಾರತಿ ಶಾಲೆಗಳಲ್ಲಿ ಈ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.

Exit mobile version