ತುಮಕೂರು : ಗುಡಿಸಲಿನ ಬದುಕಿನ ಬಗ್ಗೆ ಬೇಸತ್ತ 9ನೇ ತರಗತಿ ಶಾಲಾ ಬಾಲಕಿಯೊಬ್ಬಳು ಮನೆ ಕಟ್ಟುವುದಕ್ಕೆ ನಿವೇಶನವೊಂದನ್ನು ಕೊಡಿಸಿ ಎಂಬುದಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ಸುದ್ದಿಯಾಗಿದ್ದಾರೆ. ಪತ್ರದ ವಿಚಾರ ಗೊತ್ತಾಗುತ್ತಿದ್ದಂತೆ ಬಾಲಕಿಯನ್ನು ಭೇಟಿಯಾದ ತಹಸೀಲ್ದಾರ್ ಸಮಸ್ಯೆಯನ್ನು ಪರಿಹರಿಸುವ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ. ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕಿನ ತೂಯಲಹಳ್ಳಿಯಲ್ಲಿ ಈ ಪ್ರಸಂಗ ನಡೆದಿದಿದೆ.
11 ವರ್ಷದ ಲಕ್ಷ್ಮೀ ರಾಷ್ಟ್ರಪತಿಗೆ ಪತ್ರ ಬರೆದ ಬಾಲಕಿ. ಈಕೆ ತೂಯಲಹಳ್ಳಿ ಸರಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾಳೆ. ಕಳೆದ ತಿಂಗಳು 29 ರಂದು ರಾಷ್ಟ್ರಪತಿಗಳಿಗೆ ಪತ್ರ ಬರೆದು ನಿವೇಶಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದಾಳೆ.
ಪತ್ರದಲ್ಲಿ ಏನಿದೆ?
ನಾನು, ತಂದೆ ತಾಯಿ ಹಾಗೂ ಇಬ್ಬರು ಸಹೋದರಿಯರೊಂದಿಗೆ ಗುಡಿಸಲಿನಲ್ಲಿ ವಾಸವಿದ್ದೇನೆ. ನಾವು ವಾಸಿಸುತ್ತಿರುವ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳಲು ನಮ್ಮ ಸಂಬಂಧಿಕರು ತಕರಾರು ಮಾಡುತ್ತಿದ್ದಾರೆ. ಹೀಗಾಗಿ ಇದೇ ಗುಡಿಸಿಲನಲ್ಲಿ ವಾಸಿಸುವುದು ಅನಿವಾರ್ಯವಾಗಿದೆ. ಗುಡಿಸಲಿನ ಜೀವನದಿಂದಾಗಿ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಮನೆ ಕಟ್ಟಲು ಗ್ರಾ.ಪಂ ಅನುದಾನ ಬಿಡುಗಡೆ ಮಾಡಿದರೂ ಮನೆ ಕಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ. ದಯಮಾಡಿ ಮನೆ ಕಟ್ಟಿಕೊಳ್ಳಲು ನಿವೇಶನ ವ್ಯವಸ್ಥೆ ಮಾಡಿಕೊಡಿ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಜೈನ ಮುನಿ ಹತ್ಯೆ ಪ್ರಕರಣದ ಸಮಗ್ರ ತನಿಖೆ ನಡೆಯಲಿ