ಶಿರಾ: ನಗರದ ಕಸ್ತೂರಿ ರಂಗಪ್ಪ ನಾಯಕನ ಕೋಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಗುಡಿಸಲುಗಳ (Illegal Huts) ತೆರವು ಕಾರ್ಯಾಚರಣೆ ನಡೆಯಿತು.
ತಾಲೂಕು ಅಡಳಿತ, ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಮಂಗಳವಾರ ಸಂಜೆ ತೆರವು ಕಾರ್ಯಾಚರಣೆ ನಡೆಸಿ, ಸದರಿ ಜಾಗವು ಪುರಾತತ್ವ ಇಲಾಖೆಯ ಸಂರಕ್ಷಣಾ ಪ್ರದೇಶವಾಗಿದ್ದು, ಕೋಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪುರಾತತ್ವ ಇಲಾಖೆಯ ನಿಗದಿ ಪಡಿಸಿದ ಪ್ರದೇಶದಲ್ಲಿ ಯಾವುದೇ ರೀತಿಯ ಅನಧಿಕೃತವಾದ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಪ್ರದೇಶಗಳಲ್ಲಿ ಕೆಲವರು ಅಕ್ರಮವಾಗಿ ಗುಡಿಸಲು ನಿರ್ಮಿಸಿಕೊಳ್ಳಲು ಜಾಗವನ್ನು ಆಕ್ರಮಿಸಿ, ಅದರಲ್ಲಿ ಗುಡಿಸಲು ನಿರ್ಮಿಸಲು ತೆಂಗಿನ ಗರಿ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿ ಗುಡಿಸಲು ನಿರ್ಮಾಣಕ್ಕೆ ಮುಂದಾದ ಸಂದರ್ಭದಲ್ಲಿ ಸ್ಥಳೀಯ ತಾಲೂಕು ಅಡಳಿತ ಗಮನಹರಿಸಿ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ತೆರವು ಮಾಡಿದ್ದಾರೆ.
ಇದನ್ನೂ ಓದಿ: World Cup 2023 : ಏಕ ದಿನ ವಿಶ್ವ ಕಪ್ನ ಅಧಿಕೃತ ಗೀತೆ ಬಿಡುಗಡೆ; ಇಲ್ಲಿದೆ ಹಾಡಿನ ಸಂಪೂರ್ಣ ವಿವರ
ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಸಾರ್ವಜನಿಕರು ಜಮಾಯಿಸಿದ್ದರು. ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.