Site icon Vistara News

Haveri News: ಕಿರಾಣಿ ಅಂಗಡಿಗಳು ನೀಡುವ ಸೇವೆ ಮಾಲ್‌ಗಳೂ ನೀಡುವುದಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ

CM Basavaraj Bommai says Malls won't offer services offered by grocery stores

#image_title

ಹಾವೇರಿ: ಇತ್ತೀಚಿನ ದಿನಗಳಲ್ಲಿ ಮಾಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಬಂದಿವೆ. ಆದರೆ, ಏನೇ ಬಂದರೂ ಕಿರಾಣಿ ಅಂಗಡಿ ವ್ಯಾಪಾರ ಕಡಿಮೆಯಾಗುವುದಿಲ್ಲ. ಕಾಳು ಕಡಿ ಕೊಳ್ಳುವವರು (Haveri News) ಹೆಚ್ಚಿದ್ದಾರೆ, ದರ ಮತ್ತು ತೂಕ ಸರಿಯಾಗಿ ನೀಡಿದರೆ ಗ್ರಾಹಕರು ಸಂತೋಷದಿಂದಿರುತ್ತಾರೆ. ಕಿರಾಣಿ ಅಂಗಡಿ ನೀಡುವ ಸೇವೆ ಮಾಲ್‌ಗಳೂ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲೆಯ ಶಿಗ್ಗಾಂವಿಯಲ್ಲಿ ಕಿರಾಣಿ ವ್ಯಾಪಾರಸ್ಥರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಗ್ಗಾಂವಿ ಸುತ್ತಮುತ್ತಲಲ್ಲಿ ಕಿರಾಣಿ ಅಂಗಡಿಗಳು ಸೇವೆ ಮಾಡಿಕೊಂಡು ಬಂದಿವೆ. ಹಳ್ಳಿಯ ಜನ ಮಾರುಕಟ್ಟೆಗೆ ಬಂದಾಗ ಅವರಲ್ಲಿ ಇಂತಹ ಕಡೆ ತೂಕ, ಗುಣಮಟ್ಟ ಸರಿ ಇರುತ್ತದೆ ಎಂದು ವಿಶ್ವಾಸ ಗಳಿಸಿಕೊಂಡಿದ್ದೀರಿ. ಬಹಳಷ್ಟು ಅಂಗಡಿಗಳಿಗೆ ಕಾಯಂ ಗಿರಾಕಿಗಳಿದ್ದಾರೆ. ಇದಲ್ಲದೇ ಹಳ್ಳಿ ಜನ ಕುಳಿತು ಮಾತನಾಡುವ ಕೇಂದ್ರ ಸ್ಥಳವೂ ಹೌದು ಹಾಗೂ ಕೆಲವೊಮ್ಮೆ ಕಿರಾಣಿ ಅಂಗಡಿಗಳಲ್ಲಿ ರಾಜಕೀಯವೂ ಹುಟ್ಟುತ್ತದೆ ನಗೆ ಚಟಾಕಿ ಹಾರಿಸಿದರು.

ಇದನ್ನೂ ಓದಿ | Bribery Case: ಸವಣೂರು ಪುರಸಭೆ ಅಧಿಕಾರಿಗಳ ಲಂಚ ದಾಹ; ಹಣಕ್ಕೆ ಬದಲು ಎತ್ತು ತೆಗೆದುಕೊಳ್ಳಿ ಎಂದ ರೈತ

ಅಗತ್ಯವಿದ್ದಷ್ಟು ಮಾತ್ರ ಲಾಭ ಮಾಡಿ

ಹಿರಿಯರು ಬಹಳ ಉತ್ತಮ ಸೇವೆಯನ್ನು ಮಾಡಿಕೊಂಡು ಬಂದಿದ್ದಾರೆ. ಯುವಕರು ಸೇರಿ ಹೊಸ ಸಂಘವನ್ನು ಕಟ್ಟಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರಿದು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಅವರಿಗೆ ಒಳ್ಳೆಯ ಪದಾರ್ಥ ದೊರೆಯಬೇಕು ಹಾಗೂ ನಿಮಗೆ ಲಾಭವಾಗಬೇಕು. ಲಾಭ ದೊಡ್ಡ ಪ್ರಮಾಣದಲ್ಲಿ ಮಾಡಲು ಹೋದರೆ ವ್ಯಾಪಾರ ಕಡಿಮೆಯಾಗುತ್ತದೆ. ಅಗತ್ಯವಿದ್ದಷ್ಟು ಮಾತ್ರ ಲಾಭ ಇಟ್ಟುಕೊಂಡರೆ ನಿಯಮಿತವಾಗಿ ವ್ಯಾಪಾರವಾಗುತ್ತದೆ. ಆ ನಿಟ್ಟಿನಲ್ಲಿ ಶಿಗ್ಗಾಂವಿಯ ಹಿರಿಯ ವರ್ತಕರು ಬಹಳ ಉತ್ತಮ ಹೆಸರು ಮಾಡಿದ್ದು, ಅದೇ ರೀತಿ ನೀವೂ ಕೂಡ ಇರಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

Exit mobile version