Site icon Vistara News

Koppala News: ಕಾರಟಗಿಯಲ್ಲಿ ಸಿಎಂ ರಿಂದ ಶೀಘ್ರ 100 ಹಾಸಿಗೆ ತಾಲೂಕು ಆಸ್ಪತ್ರೆಗೆ ಶಂಕುಸ್ಥಾಪನೆ: ಸಚಿವ ಶಿವರಾಜ್ ತಂಗಡಗಿ

Koppala District In-charge Minister Shivraj Thangadagi vaccinated a child during the Effective Mission Indra Dhanush 50 campaign at Karatagi

ಕಾರಟಗಿ: ಕಾರಟಗಿಯಲ್ಲಿ 100 ಹಾಸಿಗೆಯ ತಾಲೂಕು ಆಸ್ಪತ್ರೆ (100 bed taluk hospital) ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಂದ ಶೀಘ್ರ ಶಂಕುಸ್ಥಾಪನೆ (foundation stone) ನೆರವೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ‘ಪರಿಣಾಮಕಾರಿ ಮಿಷನ್ ಇಂದ್ರ ಧನುಷ್ 5.0’ ಅಭಿಯಾನ ಕಾರ್ಯಕ್ರಮದಲ್ಲಿ ಸಚಿವರು ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಸೂಕ್ತ ಆಸ್ಪತ್ರೆ ಇಲ್ಲದೆ, ಇಲ್ಲಿನ ಜನತೆ ಅನುಭವಿಸಿದ ನರಕಯಾತನೆ ನೋಡಿದ್ದೇನೆ. ತಾಲೂಕು ಆಸ್ಪತ್ರೆಗಾಗಿ ಸ್ಥಳ ಹುಡುಕಾಟದಲ್ಲಿದ್ದೆವು. ಆಸ್ಪತ್ರೆ ನಿರ್ಮಾಣಕ್ಕೆ ಎಲ್‌ವಿಟಿ ಸಹೋದರರು ಆರು ಎಕರೆ ಜಮೀನು‌ ನೀಡಿದ್ದು, ಅವರಿಗೆ ಧನ್ಯವಾದಗಳು. ಶೀಘ್ರ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಶಂಕುಸ್ಥಾಪನೆ ನೆರವೇರಿಸಲಾಗುವುದು. ನೂತನ ಆಸ್ಪತ್ರೆಯಿಂದ ಈ‌ ಭಾಗದ ಜನತೆಗೆ ಹೆಚ್ಚಿನ ‌ಅನುಕೂಲವಾಗಲಿದೆ ಎಂದರು.

ಇದನ್ನೂ ಓದಿ: Uttara Kannada News: ಮೊಬೈಲ್‌ ಕಳವು ಪ್ರಕರಣ; ಅಂತರ್‌ ಜಿಲ್ಲಾ ಕಳ್ಳನ ಬಂಧನ

ಜಿಲ್ಲೆಯ ಯಾವೊಬ್ಬ ಮಗು ಹಾಗೂ ಗರ್ಭಿಣಿಯರು ಲಸಿಕೆಯಿಂದ ವಂಚಿತರಾಗಬಾರದು. ಈ ಕೆಲಸದಲ್ಲಿ‌ ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಹೆಚ್ಚಿದ್ದು, ಲಸಿಕೆಯನ್ನು ಪ್ರತಿಯೊಂದು ಕುಟುಂಬಕ್ಕೆ ಪ್ರಮಾಣಿಕವಾಗಿ ತಲುಪಿಸುವ ನಿಟ್ಟಿನಲ್ಲಿ‌ ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಗುರುತರ ಕೆಲಸ ಮಾಡಿದರೆ ಜನತೆ ನಮ್ಮನ್ನು ನೆನೆಯುತ್ತಾರೆ. ಆ ನಿಟ್ಟಿನಲ್ಲಿ ಕೆಲಸ ಮಾಡಿದಾಗ ತಮ್ಮ ವೈದ್ಯ ಪದವಿಗೆ ಹೆಚ್ಚಿನ ಗೌರವ ಬರಲಿದೆ ಎಂದರು.

ಇದನ್ನೂ ಓದಿ: Gold Rate today: ಏರಿಳಿಕೆ ಕಾಣದ ಬಂಗಾರದ ಬೆಲೆ, 24 ಕ್ಯಾರೆಟ್‌ ಬೆಲೆ ₹ 6,016

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಲಿಂಗರಾಜು, ತಾಲ್ಲೂಕು ವೈದ್ಯಾಧಿಕಾರಿ ಶಾಕುಂತಲ, ವೀರಭದ್ರೇಗೌಡ, ಸೂಗಪ್ಪ, ಸಿದ್ದನಗೌಡ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Exit mobile version