Site icon Vistara News

Chetan Ahimsa : ಕೆಂಪೇಗೌಡರನ್ನು ಕ್ಷುಲ್ಲಕ ಮನುಷ್ಯ ಎಂದ ಚೇತನ್ ಮೇಲೆ ಕೇಸ್​​

Cheatn Ahimsa

ಬೆಂಗಳೂರು: ನಟ ಚೇತನ್​ ಕುಮಾರ್​ ಅಲಿಯಾಸ್​ ಚೇತನ್​ ಅಹಿಂಸಾ ವಿವಾದವೊಂದು ಹುಟ್ಟು ಹಾಕಿದ್ದು ಅವರ ಮೇಲೆ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ. ಈ ಬಾರಿ ಅವರು ಬೆಂಗಳೂರು ನಿರ್ಮಾತೃ ಕೆಂಪೇಗೌಡರಿಗೆ ಅಪಮಾನವಾಗುವ ರೀತಿಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆಯೊಂದನ್ನು ನೀಡಿದ್ದರು. ಅದರ ವಿರುದ್ದ ಎನ್​ಸಿಆರ್​ ದಾಖಲಾಗಿದೆ.

ನಾಡಪ್ರಭು ಕೆಂಪೇಗೌಡರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ವಕೀಲ ಆರ್ ಎಲ್ ಎನ್ ಮೂರ್ತಿ ಅವರು ಶೇಷಾದ್ರಿಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಪಡೆದು ಎನ್ ಸಿಆರ್ ದಾಖಲಿಸಿಕೊಂಡಿದ್ದಾರೆ ಪೊಲೀಸರು.

ಏನು ಬರೆದಿದ್ದರು ಚೇತನ್​ ?

ಸಾಮಾಜಿಕ ಆಗುಹೋಗುಗಳ ಬಗ್ಗೆ ವಿಭಿನ್ನ ರೀತಿಯಲ್ಲಿ ಪೋಸ್ಟ್​ ಹಾಕುವ ಚೇತನ್​ ಅವರ ಹೇಳಿಕೆಗಳು ಪ್ರತಿ ಬಾರಿಯೂ ವಿವಾದಕ್ಕೆ ಕಾರಣವಾಗುತ್ತವೆ. ಅಂತೆಯೇ ಈ ಬಾರಿ ಅವರು ಟಿಪ್ಪು ಸುಲ್ತಾನ್ ಹಾಗೂ ಕೆಂಪೇಗೌಡರ ನಡುವೆ ಹೋಲಿಕೆ ಮಾಡಿ ಟ್ವೀಟ್ ಹಾಕಿದ್ದರು.

ಇದು ಇಬ್ಬರು ಯೋಧರ ಕಥೆ, 1) ಕೆಂಪೇಗೌಡ: ಅವರು ಊಳಿಗಮಾನ್ಯ ಜಾತಿ ಲಾಬಿಗಳ ಪ್ರಭಾವದಿಂದಾಗಿ ಈಗ ಪ್ರಮುಖ ಕರ್ನಾಟಕದ ಐಕಾನ್ ಆಗಿರುವ ಅತ್ಯಲ್ಪ ಐತಿಹಾಸಿಕ ವ್ಯಕ್ತಿ. 2) ಟಿಪ್ಪು ಸುಲ್ತಾನ್: ಒಬ್ಬ ಐತಿಹಾಸಿಕವಾಗಿ ಬಹಳ ಮಹತ್ವದ ವ್ಯಕ್ತಿ. ಅವರ ಜನ್ಮವು ಮುಸ್ಲಿಮ್​ ಸಮುದಾಯದಲ್ಲಾದ ಕಾರಣ ಇಂದಿನ ಮಾನ್ಯತೆಗೆ ಅಡ್ಡಿಯಾಗಿದೆ. ದುರದೃಷ್ಟವಶಾತ್, ಒಬ್ಬ ವ್ಯಕ್ತಿಯು ಹುಟ್ಟಿದ ಸಮುದಾಯಕ್ಕೆ ಅವನ/ಅವಳ ಸಾಮಾಜಿಕ ಕೊಡುಗೆಗಳಿಗಿಂದ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಚೇತನ್ ಪೋಸ್ಟ್​ ಮಾಡಿದ್ದರು.

ಗಾಂಧಿವಾದ ಕಿತ್ತೊಗೆಯಬೇಕು ಎಂದಿದ್ದ ಚೇತನ್​

ಕೆಲವು ದಿನಗಳ ಹಿಂದೆ ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ನಟ ಚೇತನ್, ಮಹಾತ್ಮ ಗಾಂಧಿ ಅವರ ಧಾರ್ಮಿಕ ಸಾಮರಸ್ಯ ಇಂದಿನ ಅಗತ್ಯ ಎಂದು ಪ್ರತಿಪಾದಿಸುವ ಉದಾರವಾದಿಗಳಿಗೆ ನಮ್ಮ ಸಾಂವಿಧಾನಿಕ ತತ್ವದಗಳು ಅರ್ಥವಾಗುತ್ತಿಲ್ಲ. ಖಾಸಗಿಯಾಗಿ ನಾವೆಲ್ಲರೂ ಧಾರ್ಮಿಕ ಹಕ್ಕು ಹೊಂದಿದ್ದೇವೆ. ಸಾರ್ವಜನಿಕವಾಗಿ ನಾವು ಜಾತ್ಯತೀತ ರಾಷ್ಟ್ರ. ಅಂದರೆ, ಧರ್ಮದಿಂದ ದೂರವಾಗಿದ್ದೇವೆ. ಹಾಗಿದ್ದ ಮೇಲೆ, ಧಾರ್ಮಿಕ ಸಾಮರಸ್ಯ ಎನ್ನುವುದು ಅಸಮಾನತೆಯ ಸಂರಕ್ಷಣೆಯಾಗಿದೆ. ಗಾಂಧಿವಾದವನ್ನು ಕಿತ್ತೊಗೆಯಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಅವಕಾಶ ಸಿಕ್ಕಾಗಲೆಲ್ಲ ನಟ ಚೇತನ್ ಅವರು ಗಾಂಧಿ ಮತ್ತು ಗಾಂಧಿವಾದ ವಿರುದ್ದ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಾರೆ. ಇತ್ತೀಚೆಗಷ್ಟೇ ಅವರು, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿ ಡಿ ಸಾವರ್ಕರ್ ಅವರ ಫೋಟೋ ಜತೆಗೆ ಮಹಾತ್ಮ ಗಾಂಧಿ ಫೋಟೋವನ್ನು ತೆರವು ಮಾಡಬೇಕು ಎಂದು ಹೇಳಿದ್ದರು. ಕಾಂಗ್ರೆಸ್ ಮತ್ತು ಖರ್ಗೆ ಅವರಿಗೆ ಸಾವರ್ಕರ್ ಶತ್ರುವಾಗಿರಬಹುದು. ಆದರೆ, ನಮ್ಮಂಥ ಸಮಾನತಾವಾದಿಗಳಿಗೆ ಸಾವರ್ಕರ್ ಮತ್ತು ಗಾಂಧಿ ಇಬ್ಬರು ನಮ್ಮ ಸೈದ್ಧಾಂತಿಕ ಶತ್ರುಗಳು. ನೀವು ಸಾವರ್ಕರ್ ಮತ್ತು ಗಾಂಧಿ ಇಬ್ಬರ ಫೋಟೋಗಳನ್ನು ತೆಗೆದು ಹಾಕುವುದು ಸೂಕ್ತ. ಇಲ್ಲವಾದರೆ ಇಬ್ಬರನ್ನು ಇಟ್ಟುಕೊಳ್ಳಿ ಮತ್ತು ಸುವರ್ಣ ಸೌಧದಲ್ಲಿ ಕನ್ನಡಿಗ ತಂದೆ ಪೆರಿಯಾರ್ ಅವರ ಭಾವಚಿತ್ರವನ್ನು ಹಾಕಿ ಎಂದು ಎಕ್ಸ್ ವೇದಿಕೆಯಲ್ಲಿ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ : Traffic Rules : ಟ್ರಾಫಿಕ್ ರೂಲ್ಸ್​ ಬ್ರೇಕ್​ ಮಾಡಿದರೆ ನಿಮ್ಮ ಬಾಸ್​ ವಾಟ್ಸ್​​ಆ್ಯಪ್​ಗೆ ಹೋಗಲಿದೆ ಅಲರ್ಟ್​​​!

ನಟ ಚೇತನ್ ಅವರು ಸಾರ್ವಜನಿಕವಾಗಿ ಆಗು ಹೋಗುಗಳಿಗೆ ತಮ್ಮದೇ ರೀತಿಯಲ್ಲಿ ಸ್ಪಂದಿಸುತ್ತಾರೆ. ಆದರೆ, ಬಹುತೇಕ ಸಂದರ್ಭದಲ್ಲಿ ಅವರ ಹೇಳಿಕೆಗಳು ಸಾರ್ವಜನಿಕ ಸಾಮರಸ್ಯವನ್ನು ಹಾಳು ಮಾಡುವ ರೀತಿಯಲ್ಲಿ ಇರುತ್ತವೆ. ಇಲ್ಲವೇ ವಿವಾದಕ್ಕೆ ಕಾರಣವಾಗುವ ರೀತಿಯಲ್ಲಿ ಇರುತ್ತವೆ. ಈಗಲೂ ಗಾಂಧಿವಾದವನ್ನು ಕಿತ್ತೊಗೆಯುವುದು ಸೂಕ್ತ ಎಂದು ಹೇಳುವ ಮೂಲಕ ಗಾಂಧಿ ಅವರ ಅಪಾರ

Exit mobile version